ಒನ್ ಲಾಸ್ಟ್ ಟೈಮ್.. ಒನ್ ಲಾಸ್ಟ್ ಡ್ಯಾನ್ಸ್ – ಜನ ನಾಯಗನ್ ಸಿನಿಮಾ ನೋಡಿ ತ್ರಿಷಾ ಭಾವುಕ

ತಮಿಳುನಾಡು ಸಿಎಂ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ರಿಲೀಸ್ ಆಗಿದ್ದು, ಸಿನಿಮಾ ನೋಡಿದ ತ್ರಿಷಾ ಭಾವುಕರಾಗಿದ್ದಾರೆ. ನಟಿ ತ್ರಿಷಾ ಕೃಷ್ಣನ್ ಮೊದಲ ದಿನವೇ ಕುಟುಂಬದವರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
ಇದನ್ನೂ ಓದಿ:ಮದುವೆ ದಿನವೇ ಕೈಕೊಟ್ಟು ಓಡಿ ಹೋದ ಪಿಂಕಿ – ಗುಂಡಮ್ಮನ ಹತ್ರ ಓಡಿಬರ್ತಾನಾ ಜಿಮ್ ಸೀನ?
ಒನ್ ಲಾಸ್ಟ್ ಟೈಮ್.. ಒನ್ ಲಾಸ್ಟ್ ಡ್ಯಾನ್ಸ್. ಇದು ಜನ ನಾಯಗನ್ ಸಿನಿಮಾ ನೋಡಿದ ನಟಿ ತ್ರಿಷಾ ಕೃಷ್ಣನ್ ಬರೆದುಕೊಂಡಿರುವ ಸಾಲುಗಳು. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ನೋಡಿದ ಮೇಲೆ ನಟಿ ತ್ರಿಷಾ ಕೃಷ್ಣನ್ ಭಾವುಕರಾಗಿದ್ದಾರೆ. ಜೊತೆಗೆ ಮೊದಲ ದಿನದ ಮೊದಲ ಶೋ ನೋಡಿದ್ದಾರೆ. ಚೆನ್ನೈನ ರೋಹಿಣಿ ಥಿಯೇಟರ್ನಲ್ಲಿ ತಮ್ಮ ತಾಯಿ ಮತ್ತು ಸ್ನೇಹಿತರೊಂದಿಗೆ ಸಿನಿಮಾ ವೀಕ್ಷಿಸಿದ ನಟಿ, ಸಿನಿಮಾ ಮುಗಿದ ಬಳಿಕ ಸಂತೋಷದಿಂದ ನಗುತ್ತಾ ಥಿಯೇಟರ್ನಿಂದ ಹೊರಬಂದಿದ್ದಾರೆ.
ಚಿತ್ರ ವೀಕ್ಷಿಸಿದ ಬಳಿಕ ತ್ರಿಷಾ ತಮ್ಮ ಸ್ನೇಹಿತರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ‘ಒನ್ ಲಾಸ್ಟ್ ಟೈಮ್.. ಒನ್ ಲಾಸ್ಟ್ ಡ್ಯಾನ್ಸ್’ (ಕೊನೆಯ ಬಾರಿ.. ಕೊನೆಯ ನೃತ್ಯ) ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಮಮಿತಾ ಬೈಜು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ಅವರು ಖಡಕ್ ವಿಲನ್ ಆಗಿ ವಿಜೃಂಭಿಸಿದ್ದಾರೆ.
‘ಜನ ನಾಯಗನ್’ ಚಿತ್ರ ಮೊದಲ ದಿನ ಭಾರತದಲ್ಲಿ ಅಂದಾಜು 41 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ ಅಂದಾಜು 48.27 ಕೋಟಿ ರೂಪಾಯಿ ಆಗಿದೆ. ವಿದೇಶಗಳಲ್ಲೂ ‘ಜನ ನಾಯಗನ್’ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, ಸುಮಾರು 30 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಗಳಿಸಿದೆ. ಇದರಿಂದ ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ ಒಟ್ಟು 78.27 ಕೋಟಿ ರೂಪಾಯಿಗೆ ತಲುಪಿದೆ..

ನೋಡಿರಿ

