ಮಲಯಾಳಂ ನಿರ್ಮಾಪಕನ ಕೈ ಹಿಡಿಯುತ್ತಾರಾ ಬಹುಭಾಷಾ ಬೆಡಗಿ? – ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ತ್ರಿಶಾ

ಮಲಯಾಳಂ ನಿರ್ಮಾಪಕನ ಕೈ ಹಿಡಿಯುತ್ತಾರಾ ಬಹುಭಾಷಾ ಬೆಡಗಿ? – ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ತ್ರಿಶಾ

ಸೌತ್ ಸಿನಿ ದುನಿಯಾದಲ್ಲಿ ಮಾತ್ರವಲ್ಲದೆ ಬಾಲಿವುಡ್​ನಲ್ಲೂ ಮಿಂಚು ಹರಿಸಿರುವ ನಟಿ ತ್ರಿಶಾ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ದಳಪತಿ ವಿಜಯ್​ಗೆ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ ಲಿಯೋ ಸಿನಿಮಾ ದಸರಾ ವೇಳೆಗೆ ತೆರೆಗೆ ಅಪ್ಪಳಿಸಲಿದೆ. ಆದ್ರೀಗ ತ್ರಿಶಾ ಮದುವೆ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. 40 ವರ್ಷದ ತ್ರಿಶಾ ಮಲಯಾಳಂನ ನಿರ್ಮಾಪಕರೊಬ್ಬರನ್ನ ಕೈ ಹಿಡಿಯಲಿದ್ದಾರೆ ಅನ್ನೋ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಈ ಬಗ್ಗೆ ಮೌನ ಮುರಿದಿರುವ ತ್ರಿಶಾ ಟ್ವಿಟ್ಟರ್​ನಲ್ಲೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ : ಸಿಲ್ಕ್‌ ಸ್ಮಿತಾ ಕಚ್ಚಿದ್ದ ಸೇಬಿಗೂ ಫುಲ್‌ ಡಿಮ್ಯಾಂಡ್‌! – ಆ ಕಾಲದಲ್ಲಿ ಹಣ್ಣು ಹರಾಜಾಗಿದ್ದು ಎಷ್ಟು ಬೆಲೆಗೆ ಗೊತ್ತಾ?

ಕನ್ನಡ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ತ್ರಿಶಾ ಬಣ್ಣ ಹಚ್ಚಿದ್ದಾರೆ. ಸದ್ಯ ದಳಪತಿ ವಿಜಯ್ ಜೋಡಿಯಾಗಿ ‘ಲಿಯೋ’ ಚಿತ್ರದಲ್ಲಿ ನಟಿಸಿದ್ದಾರೆ. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಸಿನಿಮಾ ತಮಿಳು ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಇನ್ನು ತ್ರಿಶಾ ವೈಯಕ್ತಿಕ ವಿಚಾರಕ್ಕೆ ಬಂದರೆ ವಯಸ್ಸು 40 ಆದ್ರೂ ಇನ್ನು ಮದುವೆ ಆಗಿಲ್ಲ. ಆಕೆಯ ಮದುವೆ ವಿಚಾರ ಸದ್ದು ಮಾಡುತ್ತಲೇ ಇರುತ್ತದೆ. ಮಲಯಾಳಂ ನಿರ್ಮಾಪಕರೊಬ್ಬರನ್ನು ಚೆನ್ನೈ ಚೆಲುವೆ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿತ್ತು. ಈ ಬಗ್ಗೆ ಸ್ವತಃ ತ್ರಿಶಾ ಈಗ ಪ್ರತಿಕ್ರಿಯಿಸಿದ್ದಾರೆ. ಎಕ್ಸ್ (ಟ್ವಿಟ್ಟರ್) ಮೂಲಕ ಪ್ರತಿಕ್ರಿಯಿಸಿರುವ ತ್ರಿಶಾ, ಡಿಯರ್ ‘ನೀವು ಮತ್ತು ನಿಮ್ಮ ತಂಡ ಯಾರೆಂದು ನಿಮಗೆ ತಿಳಿದಿದೆ, ಸುಮ್ಮನಿರಿ ಮತ್ತು ವದಂತಿಗಳನ್ನು ನಿಲ್ಲಿಸಿ, ಚೀರ್ಸ್’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಮದುವೆಗೆ ಬಗ್ಗೆ ಕೇಳಿಬರುತ್ತಿರುವ ಗಾಳಿಸುದ್ದಿಗೆ ಬ್ರೇಕ್ ಆಗಿದ್ದಾರೆ. ತ್ರಿಶಾ ಪೋಸ್ಟ್ ಈಗ ಸಖತ್ ವೈರಲ್ ಆಗ್ತಿದೆ.

ನಟಿ ತ್ರಿಶಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ‘ಪವರ್’ ಚಿತ್ರದಲ್ಲಿ ಮಿಂಚಿದ್ದರು. ಆ ಚಿತ್ರದ ‘ಗುರುವಾರ ಸಂಜೆ’ ಸಾಂಗ್‌ನಲ್ಲಿ ತ್ರಿಶಾ ಮೋಡಿ ಮಾಡಿದ್ದರು. ಇನ್ನು ಆಕೆಗೆ ಈ ಹಿಂದೆ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಮದುವೆ ಆಗಲಿಲ್ಲ. 2015ರಲ್ಲಿ ವರುಣ್ ಮಣಿಯನ್ ಎಂಬ ಉದ್ಯಮಿ ಜೊತೆ ಮದುವೆ ನಿಶ್ಚಯವಾಗಿತ್ತು. ಅದ್ಧೂರಿಯಾಗಿಯೇ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದರು. ಆದರೆ ಬಳಿಕ ಭಿನ್ನಾಭಿಪ್ರಾಯಗಳಿಂದ ಆ ಮದುವೆ ನಿಂತು ಹೋಗಿತ್ತು.

 

Shantha Kumari