ಕೊಹ್ಲಿಗಾಗಿ ಹಠ.. ಸೋಲಲ್ಲೂ ಬಲ – ಬೆನ್ನಿಗೆ ನಿಂತ ಗೆಳೆಯನಿಗೆ ಗೆಲುವಿನ ಗಿಫ್ಟ್
ರೋಹಿತ್ ನಂಬಿಕೆ ಗೆದ್ದಿದ್ದೇಗೆ KING?

ಕೊಹ್ಲಿಗಾಗಿ ಹಠ.. ಸೋಲಲ್ಲೂ ಬಲ – ಬೆನ್ನಿಗೆ ನಿಂತ ಗೆಳೆಯನಿಗೆ ಗೆಲುವಿನ ಗಿಫ್ಟ್ರೋಹಿತ್ ನಂಬಿಕೆ ಗೆದ್ದಿದ್ದೇಗೆ KING?

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಒಬ್ಬ ಲೆಜೆಂಡ್ ಆಟಗಾರ ಅನ್ನೋದ್ರಲ್ಲಿ ಡೌಟೇ ಇಲ್ಲ. ತಮ್ಮ ಅಗ್ರೆಶನ್ ಹಾಗೇ ಡೆಡಿಕೇಶನ್​ನಿಂದಲೇ ವಿಶ್ವಶ್ರೇಷ್ಠ ಆಟಗಾರನಾಗಿ ಬೆಳೆದಿದ್ದಾರೆ. ಟಿ-20 ವರ್ಲ್ಡ್ ಕಪ್ ಫೈನಲ್​ ಮ್ಯಾಚ್​ನಲ್ಲಿ ಭಾರತದ ಪಾಲಿಗೆ ಹೀರೋ ಆಗಿದ್ದೂ ಕೂಡ ಇದೇ ವಿರಾಟ್. ಕ್ಯಾಪ್ಟನ್ ರೋಹಿತ್ ಶರ್ಮಾ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಔಟ್ ಆದಾಗ ತಂಡಕ್ಕೆ ಆಸರೆಯಾಗಿ ನಿಂತಿದ್ರು. ಆದ್ರೆ ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಆದ್ರೆ ಕೊಹ್ಲಿ ಎಷ್ಟೇ ಎಡವಿದ್ರೂ ಎಷ್ಟೇ ವೈಫಲ್ಯ ಕಂಡ್ರೂ ಸದಾ ಜೊತೆಯಾಗಿ ನಿಂತದ್ದು ಕ್ಯಾಪ್ಟನ್ ರೋಹಿತ್ ಶರ್ಮಾ. ವಿರಾಟ್ ಕೊಹ್ಲಿಯವ್ರನ್ನ ಟಿ-20 ವಿಶ್ವಕಪ್ ಸ್ಕ್ವಾಡ್​ಗೆ ಸೆಲೆಕ್ಟ್ ಮಾಡೋದ್ರಿಂದ ಹಿಡಿದು ವಿಶ್ವಕಪ್ ಗೆಲ್ಲೋವರೆಗೂ ವಿರಾಟ್ ಇಟ್ಟ ಪ್ರತೀ ಹೆಜ್ಜೆ ಹಿಂದೆಯೂ ರೋಹಿತ್ ಬೆನ್ನೆಲುಬಾಗಿ ನಿಂತಿದ್ರು. ಆಡಿಕೊಂಡವರಿಗೆ ತಾವೇ ಉತ್ತರ ಕೊಟ್ಟಿದ್ರು. ತನ್ನ ಗೆಳೆಯ ತನ್ನ ಮೇಲಿಟ್ಟ ನಂಬಿಕೆಯನ್ನ ಕಡೆಯೂ ವಿರಾಟ್ ಉಳಿಸಿಕೊಂಡಿದ್ದಾರೆ.

ನಂಬಿಕೆ ಉಳಿಸಿಕೊಂಡ ಕೊಹ್ಲಿ!

ಟಿ-20 ವಿಶ್ವಕಪ್​ನಲ್ಲಿ ಅಜೇಯ ತಂಡವಾಗಿ ಫೈನಲ್ ತಲುಪಿದ್ದ ಸೌತ್ ಆಫ್ರಿಕಾವನ್ನ ಬಗ್ಗು ಬಡಿದು ಟೀಮ್ ಇಂಡಿಯಾ ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ರೂವಾರಿಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಆದರೆ ಇದೇ ವಿರಾಟ್ ಕೊಹ್ಲಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ಹಿಂದೇಟು ಹಾಕಿತ್ತು.  ಕೊಹ್ಲಿಯನ್ನು ತಂಡದಿಂದ ಕೈ ಬಿಡುವಂತೆ ಆಯ್ಕೆ ಸಮಿತಿಗೆ ಬಿಸಿಸಿಐ ಸೂಚಿಸಿತ್ತು. ಆದರೆ ರೋಹಿತ್ ಶರ್ಮಾ ಪಟ್ಟು ಹಿಡಿದ ಕಾರಣ ಕಿಂಗ್ ಕೊಹ್ಲಿಯನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದ್ರೆ ವಿಶ್ವಕಪ್​ನಲ್ಲಿ ಕಣಕ್ಕಿಳಿದ ಕೊಹ್ಲಿ 7 ಪಂದ್ಯಗಳಲ್ಲೂ ವಿಫಲರಾಗಿದ್ದರು. ಅದರಲ್ಲೂ ಸೆಮಿಫೈನಲ್​ನಲ್ಲಿ ಕೇವಲ 9 ರನ್​ಗಳಿಸಿ ಔಟಾಗಿದ್ದ ವಿರಾಟ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಹಾಗೇ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಕೊಹ್ಲಿಯನ್ನು ಕೆಳಗಿಳಿಸುವಂತೆ ಕೂಗುಗಳು ಕೇಳಿಬಂದಿದ್ದವು. ಆದರೆ ರೋಹಿತ್ ಶರ್ಮಾ ತಮ್ಮ ನಿರ್ಧಾರಕ್ಕೆ ಅಚಲವಾಗಿದ್ದರು. ಯಾವುದೇ ಒತ್ತಡಕ್ಕೂ ಮಣಿಯಲು ಹಿಟ್​ಮ್ಯಾನ್ ಸಿದ್ಧರಿರಲಿಲ್ಲ. ಸೆಮಿಫೈನಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಕೂಡ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದರು. ಅಲ್ಲದೆ ಅವರು ಫೈನಲ್​ನಲ್ಲಿ ಆಡುತ್ತಾರೆ. ಅದಕ್ಕಾಗಿ ರನ್​ಗಳಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದಿದ್ದರು. ರೋಹಿತ್ ಹೇಳಿಕೆಗೆ ಕೆಲವರು ವ್ಯಂಗ್ಯ ಮಾಡಿದ್ದರು. ಆದ್ರೆ ರೋಹಿತ್ ಶರ್ಮಾ ಅವರ ನಂಬಿಕೆ ಹುಸಿಯಾಗಲಿಲ್ಲ. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ಕ್ರೀಸ್ ಕಚ್ಚಿ ನಿಂತು ಇನಿಂಗ್ಸ್ ಕಟ್ಟಿದರು. 59 ಎಸೆತಗಳಲ್ಲಿ 76 ರನ್​ಗಳಿಸಿ ಸೈ ಎನ್ನಿಸಿಕೊಂಡ್ರು. ಟಿ20 ವಿಶ್ವಕಪ್ ಆಯ್ಕೆಯಿಂದ ಹಿಡಿದು, ಅಂತ್ಯದವರೆಗೂ ಬೆಂಬಲ ಸೂಚಿಸಿದ ನಾಯಕ ರೋಹಿತ್ ಶರ್ಮಾ ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಜೊತೆ ಜೊತೆಯಲ್ಲೇ ಕ್ರಿಕೆಟ್ ಕರಿಯರ್ ಆರಂಭಿಸಿ ಜೊತೆ ಜೊತೆಗೇ ಲೆಜೆಂಡ್ ಗಳಾಗಿ ಬೆಳೆದು ಈಗ ಜೊತೆಯಲ್ಲೇ ವಿಶ್ವಕಪ್ ಗೆದ್ದು ಜೊತೆಯಲ್ಲೇ ಟಿ-20 ಫಾರ್ಮೇಟ್​ಗೆ ವಿದಾಯ ಘೋಷಿಸಿದ್ದಾರೆ.  ಕ್ರಿಕೆಟ್​ನಿಂದ ಆಚೆಗೂ ಕೂಡ ಇಬ್ಬರೂ ಗ್ರೇಟ್ ಬಾಂಡಿಂಗ್ ಹೊಂದಿದ್ದಾರೆ. ಬ್ರೋಮ್ಯಾನ್ಸ್ ಅಂತಾನೇ ಕರೆಸಿಕೊಳ್ಳೋ ಇಬ್ರಿಬ್ಬರ ಅನುಬಂಧಕ್ಕೆ ನಿಜಕ್ಕೂ ಕೂಡ ಹ್ಯಾಟ್ಸ್​ಆಫ್ ಹೇಳಲೇಬೇಕು.

Shwetha M

Leave a Reply

Your email address will not be published. Required fields are marked *