ದೆಹಲಿಯಲ್ಲಿ ಭಾರಿ ಭೂಕಂಪ – ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲು
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಹಲವೆಡೆ ಭಾರೀ ಭೂಕಂಪನದ ಅನುಭವವಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 600 ಕೆಜಿ ಮಾವಿನಹಣ್ಣು ಕಳಿಸಿದ ಬಾಂಗ್ಲಾ ಪ್ರಧಾನಿ!
ಮಂಗಳವಾರ (ಜೂನ್ 13) ಮಧ್ಯಾಹ್ನ 1:30ರ ಸುಮಾರಿಗೆ ದೆಹಲಿ, ಜಮ್ಮು ಕಾಶ್ಮೀರ, ಚಂಢೀಗಢ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ.
ಪಂಜಾಬ್ನ ಮೊಹಾಲಿ, ಹರಿಯಾಣ ಪಂಚಕುಲ, ಚಂಡೀಗಢ, ಜಮ್ಮು ಕಾಶ್ಮೀರದಲ್ಲಿ ಭೂಮಿ ಕಂಪಿಸಿದೆ. ಕಟ್ಟಡದಲ್ಲಿನ ವಸ್ತುಗಳು ಅಲ್ಲಾಡಲು ಪ್ರಾರಂಭವಾಗುತ್ತಿದ್ದಂತೆ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.