ಹಲ್‌ಚಲ್ ಎಬ್ಬಿಸಿದ ಹೆಡ್ ಮದುವೆ ಮುಂಚೆ ಮಗು!
ಟ್ರಾವಿಸ್ ಟ್ರ್ಯಾಜಿಡಿ ಕಥೆ

ಟ್ರಾವಿಸ್ ಹೆಡ್, ಡಿಸೆಂಬರ್ 29, 1993ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಹುಟ್ಟುತ್ತಾರೆ. ಟ್ರಾವಿಸ್ ತಮ್ಮ ಬಾಲ್ಯದಲ್ಲಿ ಅಡಿಲೇಡ್ ನ ಕ್ರೈಗ್ ಕ್ರಿಕೆಟ್ ಕ್ಲಬ್ ನಲ್ಲಿ ಆಡಲು ಪ್ರಾರಂಭಿಸಿದ್ರು. ಆಮೇಲೆ ಸೌತ್ ಆಸ್ಟ್ರೇಲಿಯಾದ ಅಂಡರ್ 15 ಮತ್ತು ಅಂಡರ್ 19 ತಂಡದಲ್ಲಿ ಸ್ಥಾನ ಪಡೆದರು. ತಮ್ಮ 17ನೇ ವಯಸ್ಸಿನಲ್ಲಿ ಇವರು ಆಸ್ಟ್ರೇಲಿಯಾದ ಅಂಡರ್ 19 ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಇದರಲ್ಲಿ 2012ನೇ ಇಸವಿಯಲ್ಲಿ ನಡೆದ ಅಂಡರ್ 19 ವಿಶ್ವಕಪ್ ಸೇರಿದಂತೆ ಒಟ್ಟು 19 ಪಂದ್ಯವನ್ನು ಆಡಿದ್ದರು..
2016 ರಲ್ಲಿ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಕಾಲಿಟ್ರು. ಇನ್ನೂ 2016ರಲ್ಲೇ ಅಡಿಲೇಡ್ ನಲ್ಲಿ ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಜಗತ್ತಿಗೆ ಕಾಲಿಟ್ರು.2018ರಲ್ಲಿ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಹೀಗೆ ಕಿಕ್ರೆಟ್ ಕಾಲಿಟ್ ಹೆಡ್, ರನ್ ಮಳೆಯನ್ನೇ ಹರಿಸಿದ್ದಾರೆ. ಇಲ್ಲಿ ತನಕ ಇವರು ಒಟ್ಟು 56 ಟೆಸ್ಟ್ ಪಂದ್ಯಗಳನ್ನ ಆಡಿದ್ದು, ಇದ್ರಿಂದ ಒಟ್ಟು 3719 ರನ್ ಗಳಿಸಿದ್ದಾರೆ. 72 ODIಪಂದ್ಯಗಳನ್ನ ಆಡಿರೋ ಹೆಡ್ 2728 ರನ್ ಗಳಿಸಿದ್ದಾರೆ. ಹಾಗೇ 38 ಟಿ 20 ಪಂದ್ಯಗಳಿಂದ 1093 ರನ್ ಗಳಿಸಿದ್ದಾರೆ.
ಮದುವೆಗೂ ಮುಂಚೆ ಅಪ್ಪನಾದ ಹೆಡ್
ಟ್ರಾವಿಸ್ ಹೆಡ್ ಹೆಸರು ಕೇಳಿದರೆ ಸಾಕು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ, 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನೆನಪಾಗುತ್ತದೆ. ಈ ಎರಡೂ ಪಂದ್ಯಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಟ್ರಾವಿಸ್, ಆಸೀಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇವರ ಜೊತೆಗೆ ಸದಾ ಸಾಥ್ ನೀಡುತ್ತಾರೆ ಇವರ ಪತ್ನಿ, ಮಾಡೆಲ್ ಜೆಸ್ಸಿಕಾ ಡೇವಿಸ್. ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಜೆಸ್ಸಿಕಾ ಡೇವಿಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಕುಟುಂಬದ ಹಲವು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಜೆಸ್ಸಿಕಾ ವೃತ್ತಿಪರ ಮಾಡೆಲ್ ಆಗಿದ್ದು, ಹಲವಾರು ಮಾಡೆಲಿಂಗ್ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಾರೆ. ಟ್ರಾವಿಸ್ ಹೆಡ್ ಮತ್ತು ಜೆಸ್ಸಿಕಾ ಏಪ್ರಿಲ್ 15, 2023 ರಂದು ತಮ್ಮ ಹುಟ್ಟೂರಾದ ಅಡಿಲೇಡ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಾಲ್ಯದ ಸ್ನೇಹಿತರಾಗಿದ್ದ ಅವರು ಜೀವನ ಸಂಗಾತಿಗಳಾದರು. ಇನ್ನು, ಜೆಸ್ಸಿಕಾ ಮತ್ತ ಹೆಡ್ ಮದುವೆಗೆ ಮೊದಲೇ ಅಪ್ಪ ಅಮ್ಮ ಆಗಿದ್ರು. ಸೆಪ್ಟೆಂಬರ್ 2022 ರಲ್ಲಿ ಮಗುವಿಗೆ ಜನ್ಮ ನೀಡಿದ ಜೆಸ್ಸಿಕಾ ನೀಡಿದರು, ಮಗುವಿಗೆ ಮೀಲಾ ಎಂದು ಹೆಸರಿಡಲಾಗಿದೆ. ಮದುವೆಯಾದ ನಂತರ ಜೆಸ್ಸಿಕಾ ತಮ್ಮದೆ ಸ್ವಂತ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಜೀವನದಲ್ಲಿ ಟ್ರ್ಯಾಜಿಡಿ ಕಥೆ ಕೂಡ ನಡೆದಿದೆ. ಟ್ರಾವಿಸ್ ಹೆಡ್ ಮತ್ತು ಜೆಸ್ಸಿಕಾ ಡೇವಿಸ್ 2022ರ ಮೇ ತಿಂಗಳಲ್ಲಿ ವಿಮಾನ ದುರಂತದಿಂದ ಪಾರಾಗಿದ್ದರು. ಜೆಸ್ಸಿಕಾ ಗರ್ಭಿಣಿಯಾಗಿದ್ದಾಗ ಮಾಲೀಮ್ಸ್ ಪ್ರವಾಸದಿಂದ ಮರಳುತ್ತಿದ್ದಾಗ ಘಟನೆ ನಡೆದಿತ್ತು. ತಾವು ಪ್ರಾಣಾಪಾಯದಿಂದ ಪಾರಾಗಿದ್ದಾಗಿ ಖುದ್ದು ಡೇವಿಸ್ ಹೇಳಿಕೊಂಡಿದ್ದಾರೆ.ಮಾಲ್ಮೀಮ್ಸ್‌ನಿಂದ ಹಿಂದಿರುಗುವಾಗ ವಿಮಾನದಲ್ಲಿ ದೋಷ ಕಂಡು ಬಂದು ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ, ವಿಮಾನವು ಮತ್ತೆ ತುರ್ತು ಭೂಸ್ಪರ್ಶ ಮಾಡಿತ್ತು..
ಇನ್ನೂ ಹೆಡ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನ್ ವಿರುದ್ದ ಕೂಡ ಅಬ್ಬರಿಸಿದ್ರು. ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 59 ರನ್ ಗಳಿಸಿದ್ರು, ಮಳೆ ಬಂದಿಲ್ಲ ಅಂದ್ರೆ ಶತಕದ ಮೂಲಕ ಆಸೀಸ್ ಗೆಲುವಿಗೆ ಕಾರಣವಾಗುತ್ತಿದ್ದರು..