ಬೀಸುತ್ತಿದೆ ಬಿರುಗಾಳಿ.. ಸ್ಪೀಡ್ ಕಡಿಮೆ ಮಾಡಿ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವವರಿಗೆ ಎಚ್ಚರಿಕೆ..!

ಬೀಸುತ್ತಿದೆ ಬಿರುಗಾಳಿ.. ಸ್ಪೀಡ್ ಕಡಿಮೆ ಮಾಡಿ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವವರಿಗೆ ಎಚ್ಚರಿಕೆ..!

ಕರ್ನಾಟಕಕ್ಕೆ ಮುಂಗಾರು ಪ್ರವೇಶ ಮಾಡಲು ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲಿ ಮಳೆಯ ಆರ್ಭಟವೂ ಶುರುವಾಗಿದೆ. ಇದೆಲ್ಲದರ ನಡುವೆ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮಂಡ್ಯ ಮತ್ತು ಬೈರಪಟ್ಟಣದ ನಡುವೆ ಪ್ರಯಾಣ ಮಾಡುವವರು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶದಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದು ಪ್ರಯಾಣಿಕರಿಗೆ ರಸ್ತೆ ಕಾಣುವ ಪ್ರಮಾಣ ಕಡಿಮೆ ಇರುವುದರಿಂದ ನಿಧಾನವಾಗಿ ಮತ್ತು ಸುರಕ್ಷಿತವಾಗಿ ಚಾಲನೆ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಮುಂದಿನ 24 ಗಂಟೆಗಳಲ್ಲಿ ಬಿಪರ್ಜೋಯ್ ಚಂಡಮಾರುತ ತೀವ್ರ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

ಮಂಡ್ಯ, ಮದ್ದೂರು, ಭಾರತಿನಗರ, ಸೋಮನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಗಾಳಿ ತೀವ್ರಗೊಂಡಿದೆ. ಹೀಗಾಗಿ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮಂಡ್ಯ ಮತ್ತು ಬೈರಪಟ್ಟಣದ ನಡುವೆ ಪ್ರಯಾಣ ಮಾಡುವವರು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಮುಂದಿನ ಐದು ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಮಾನ್ಸೂನ್ ಮಳೆ ಅಬ್ಬರಿಸಲಿದೆ. ಬಿಪರ್ ಜಾಯ್ ಚಂಡಮಾರುತದ ಹೊಡೆತದಿಂದ ಕರ್ನಾಟಕದ ಕರಾವಳಿ ಭಾಗ ಪಾರಾಗಿದೆ. ಬಿಪರ್ ಜಾಯ್ ಸೈಕ್ಲೋನ್ ಕರಾವಳಿಯ ನೈರುತ್ಯ ಭಾಗದಿಂದ 900 KM ದೂರದಲ್ಲಿದ್ದು, ರಾಜ್ಯದ ಕರಾವಳಿ ಸಮೀಪಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೂಡ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ.

suddiyaana