ಬಲೆಗೆ ಬಿದ್ದ ಭರ್ಜರಿ ಡಾಲ್ಫಿನ್ ಫಿಶ್ – ಮನೆಗೆ ಹೋಗಿ ಡಾಲ್ಫಿನ್ ತಿಂದವರು ಅರೆಸ್ಟ್..!

ಬಲೆಗೆ ಬಿದ್ದ ಭರ್ಜರಿ ಡಾಲ್ಫಿನ್ ಫಿಶ್ – ಮನೆಗೆ ಹೋಗಿ ಡಾಲ್ಫಿನ್ ತಿಂದವರು ಅರೆಸ್ಟ್..!

ಅವರೆಲ್ಲಾ ಮೀನುಗಾರರು. ಬಲೆ ಬೀಸಿದಾಗ ಸಿಕ್ಕಿರುವ ಮೀನನ್ನು ಹಿಡಿಯುತ್ತಾರೆ. ಈಗ ಹೇಳಿ ಕೇಳಿ ಯುಮುನಾ ನದಿಯಲ್ಲಿ ನೀರು ಉಕ್ಕಿಹರಿಯುತ್ತಿದೆ. ಮೀನುಗಳು ಕೂಡಾ ಜಾಸ್ತಿಯಾಗಿಯೇ ಸಿಗುತ್ತವೆ. ಹೀಗಾಗಿಯೇ ನಾಲ್ಕೈದು ಮಂದಿ ಮೀನುಗಾರರು ಯಮುನಾ ನದಿಯಲ್ಲಿ ಮೀನಿಗಾಗಿ ಬಲೆ ಬೀಸಿದ್ದಾರೆ. ಆಗ ಬಲೆಗೆ ತುಂಬಾ ಮೀನುಗಳು ಬಿದ್ದಂತಹ ಅನುಭವವಾಗಿದೆ. ರಾಶಿ ರಾಶಿ ಮೀನು ಸಿಕ್ಕಿರಬೇಕೆಂದು ಖುಷಿಯಲ್ಲಿಯೇ ನಾಲ್ಕು ಮಂದಿ ಕಷ್ಟದಲ್ಲಿಯೇ ಬಲೆ ಎಳೆದಿದ್ದಾರೆ. ದಡಕ್ಕೆ ಬಂದ ಬಲೆಯನ್ನು ನೋಡಿ ಸ್ವತಃ ಮೀನುಗಾರರಿಗೆ ಅಚ್ಚರಿ. ಯಾಕೆಂದರೆ, ಬಲೆಗೆ ಬಿದ್ದಿದ್ದು ಅಂತಿಂಥಾ ಮೀನಲ್ಲ. ಅದು ಡಾಲ್ಫಿನ್. ನಂತರ ಆಗಿದ್ದು ಮಾತ್ರ ಮಾಡಿದ್ದುಣ್ಣೋ ಮಹರಾಯ ಅನ್ನೋ ಪೀಕಲಾಟ.

ಇದನ್ನೂ ಓದಿ: ಎಷ್ಟೇ ಅಲೆದಾಡಿದರೂ ಸಿಗಲಿಲ್ಲ ಆಂಬ್ಯುಲೆನ್ಸ್ – ಅಣ್ಣನ ಮೃತದೇಹವನ್ನು ಬೈಕ್‌ಗೆ ಕಟ್ಟಿ ಮನೆಗೆ ತಂದ ತಮ್ಮ..!

ಜುಲೈ 22ರಂದು ನಸೀರ್ಪುರ ಗ್ರಾಮದ ನಾಲ್ವರು ಮೀನುಗಾರರು ಯಮುನಾ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಅವರ ಬಲೆಗೆ ಸಿಕ್ಕಿದ್ದು ಭರ್ಜರಿ ಮೀನೇ. ಅಂದರೆ ಯಾವತ್ತೂ ಬೀಳದ ಡಾಲ್ಫಿನ್ ಫಿಶ್ ಅಂದು ಅವರ ಬಲೆಗೆ ಬಿದ್ದಿತ್ತು. ಮೀನುಗಾರರು ಬಲೆಗೆ ಬಿದ್ದ ಡಾಲ್ಫಿನ್‌ನ್ನು ಮನೆಗೆ ತಂದಿದ್ದಾರೆ. ಅದು ಕೂಡಾ ಮೂರು ಜನ ತಮ್ಮ ಭುಜದ ಮೇಲೆ ಹೊತ್ತುಕೊಂಡು ಮನೆಗೆ ಹೋಗಿದ್ದಾರೆ. ಡಾಲ್ಫಿನ್ ಮೀನನ್ನು ಹೊತ್ತುಕೊಂಡು ಹೋಗುವ ಖುಷಿಯಲ್ಲಿ ಮೀನುಗಾರರಿದ್ದರೆ ಪಾಪ ಅವರಿಗೆ ಗೊತ್ತಿಲ್ಲದಂತೆ ಕೆಲವರು ವಿಡಿಯೋ ಮಾಡಿದ್ದಾರೆ. ಇನ್ನು ಕೆಲವರು ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಡಾಲ್ಫಿನ್ ಹಿಡಿದು ಮನೆಗೆ ತಂದು ತಿಂದಿರುವ ಆರೋಪದ ಮೇಲೆ ನಾಲ್ವರು ಮೀನುಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊವನ್ನು ಗಮನಿಸಿದ ಪೊಲೀಸರು, ಓರ್ವ ಮೀನುಗಾರನನ್ನು ಬಂಧಿಸಿದ್ದಾರೆ. ಅರಣ್ಯ ರಕ್ಷಕರ ದೂರಿನ ಆಧಾರದ ಮೇಲೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿ ರಂಜೀತ್ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.

suddiyaana