ಡ್ಯೂಟಿ ಬಿಟ್ಟು ಆಂಬ್ಯುಲೆನ್ಸ್ ನಲ್ಲಿ ಚಪ್ಪಲಿ ಸಾಗಾಟ ಮಾಡಿದ ಚಾಲಕ – ವಿಡಿಯೋ ವೈರಲ್.. ಮುಂದೇನಾಯ್ತು ಗೊತ್ತಾ?

ಡ್ಯೂಟಿ ಬಿಟ್ಟು ಆಂಬ್ಯುಲೆನ್ಸ್ ನಲ್ಲಿ ಚಪ್ಪಲಿ ಸಾಗಾಟ ಮಾಡಿದ ಚಾಲಕ – ವಿಡಿಯೋ ವೈರಲ್.. ಮುಂದೇನಾಯ್ತು ಗೊತ್ತಾ?

ಅಪಘಾತ ಆಗಿದೆ ಅಂತಾನೋ ಇಲ್ಲ ಎಮರ್ಜೆನ್ಸಿ ಅಂತಾನೋ ಆಂಬ್ಯುಲೆನ್ಸ್​ಗೆ ಫೋನ್ ಮಾಡಿದ್ರೆ ಗಂಟೆಗಟ್ಟಲೆ ಆದ್ರೂ ಬರೋದಿಲ್ಲ. ಕಾದು ಕಾದು ಸಾಕಾಗಿ ಕೊನೆಗೆ ಖಾಸಗಿ ವಾಹನಗಳಲ್ಲೇ ರೋಗಿಗಳನ್ನ ಆಸ್ಪತ್ರೆಗೆ ದಾಖಲು ಮಾಡ್ತಾರೆ. ಆದ್ರೆ ರಾಜಸ್ಥಾನದಲ್ಲಿ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಡ್ರೈವರ್ ವೊಬ್ಬ ಅವಾಂತರ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : 

ರಾಜಸ್ಥಾನದ ಜೈಪುರದ ದೌಸಾ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಗೆ ಎನ್​ಜಿಒ ವೊಂದು ಚಾಲನಕನ್ನ ನೇಮಕ ಮಾಡಿತ್ತು. ಆದ್ರೆ ಆಂಬ್ಯುಲೆನ್ಸ್ ಚಾಲಕ ಕರ್ತವ್ಯದ ಸಮಯದಲ್ಲಿ ಅದೇ ವಾಹನ ಬಳಸಿ ತನ್ನ ಖಾಸಗಿ ಕೆಲಸಗಳನ್ನ ಮಾಡಿಕೊಳ್ತಿದ್ದ. ಅದ್ರಲ್ಲೂ ಈಗ  ಡ್ಯೂಟಿ ಟೈಮಲ್ಲೇ ಆಂಬ್ಯುಲೆನ್ಸ್ ​ನಲ್ಲಿ ಚಪ್ಪಲಿ ಸಾಗಾಟ ಮಾಡಿದ್ದಾನೆ. ಚಪ್ಪಲಿ ಸಾಗಾಟದ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಳಿಕ ಚಾಲಕನನ್ನ ಸೇವೆಯಿಂದ ತೆಗೆದುಹಾಕಲಾಗಿದೆ.

 

ಘಟನೆ ಸಂಬಂಧ ಮಾತನಾಡಿರುವ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಡಾ. ಶಿವರಾಮ್ ಮೀನಾ, ಎನ್‌ಜಿಒ ನೇಮಿಸಿದ ಆಂಬ್ಯುಲೆನ್ಸ್ ಚಾಲಕ ವಾಹನದಲ್ಲಿ ಚಪ್ಪಲಿ ಸಾಗಾಟ ಮಾಡಿರುವ ಮಾಹಿತಿ ಗೊತ್ತಾಗಿದೆ. ಹೀಗಾಗಿ ಆತನನ್ನ ಸೇವೆಯಿಂದ ತೆಗೆದುಹಾಕಲಾಗಿದೆ ಮತ್ತು ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

 

suddiyaana