ಯುಗಾದಿಗೆ ಬಸ್ ಬುಕ್ ಮಾಡಿದವ್ರಿಗೆ ಶಾಕ್ – ಮಾರ್ಚ್ 21ರಿಂದ ಸಾರಿಗೆ ನೌಕರರ ಮುಷ್ಕರ

ಯುಗಾದಿಗೆ ಬಸ್ ಬುಕ್ ಮಾಡಿದವ್ರಿಗೆ ಶಾಕ್ – ಮಾರ್ಚ್ 21ರಿಂದ ಸಾರಿಗೆ ನೌಕರರ ಮುಷ್ಕರ

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಬಸ್ ಬುಕ್ ಮಾಡಿಕೊಂಡವರಿಗೆ ರಾಜ್ಯ ಸಾರಿಗೆ ನೌಕರರ ಸಂಘ ಶಾಕ್ ಕೊಟ್ಟಿದೆ. ಯುಗಾದಿ ಹಬ್ಬದ ಮುನ್ನಾ ದಿನ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ.  ಮಾರ್ಚ್ 21ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ. ಮಾರ್ಚ್ 21ರಂದು ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ಎಂದು ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ ತಿಳಿಸಿದ್ದಾರೆ.

ಇದನ್ನೂ ಓದಿ:  ‘ಉರಿಗೌಡನೂ ಇಲ್ಲ.. ನಂಜೇಗೌಡನೂ ಇಲ್ಲ.. ಡಿಜಿಪಿ ನಾಲಾಯಕ್’ – ಬಿಜೆಪಿ ವಿರುದ್ಧ ಡಿಕೆಶಿ ಕೆಂಡ..!

ಮಾರ್ಚ್ 21ರಂದು ಮಂಗಳವಾರ ಮುಷ್ಕರ ನಡೆಯಲಿದ್ದು, 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ ತಿಳಿಸಿದ್ದಾರೆ. ಮುಷ್ಕರ ನಡೆದರೆ ಸುಮಾರು 23 ಸಾವಿರ ಬಸ್‌ಗಳು ಸ್ಥಗಿತಗೊಳ್ಳಲಿವೆ. ಸರ್ಕಾರಿ ನೌಕರರ ಪ್ರತಿಭಟನೆ ನಡೆದಾಗ ಶೇ.17 ವೇತನ ಹೆಚ್ಚಳ ಮಾಡಿದ್ರು. ಆದ್ರೆ ನಮಗೆ ಇನ್ನೂ ವೇತನ ಹೆಚ್ಚಳದ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ ತಿಳಿಸಿದ್ದಾರೆ. ಇನ್ನು ಸಾರಿಗೆ ನೌಕರರು, ಮೂಲವೇತನ ಶೇ.25 ರಷ್ಟು ಹೆಚ್ಚಿಸಬೇಕು. –ಭತ್ಯೆಯನ್ನು 5 ಪಟ್ಟು ಹೆಚ್ಚಿಸಬೇಕು, ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯನ್ನು ಮರುನೇಮಕ ಮಾಡಬೇಕು, ಸಿಬ್ಬಂದಿ ಮೇಲೆ ದಾಖಲಾಗಿರುವ ಕೇಸ್‌ಗಳನ್ನ ರದ್ದು ಮಾಡಬೇಕು, ಮುಷ್ಕರ ಸಮಯದಲ್ಲಿ ವರ್ಗಾವಣೆಯಾದ ನೌಕರರನ್ನು ಮೊದಲಿದ್ದ ಸ್ಥಳಕ್ಕೆ ಮತ್ತೆ ನಿಯುಕ್ತಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿದ್ದಾರೆ.

suddiyaana