ಸರ್ಕಾರಿ ನೌಕರರು 2 ನೇ ವಿವಾಹವಾಗುವಂತಿಲ್ಲ! – ಬಹುಪತ್ನಿತ್ವ ಹೊಂದಿದ್ದರೆ ಭಾರಿ ದಂಡ!

ಸರ್ಕಾರಿ ನೌಕರರು 2 ನೇ ವಿವಾಹವಾಗುವಂತಿಲ್ಲ! – ಬಹುಪತ್ನಿತ್ವ ಹೊಂದಿದ್ದರೆ ಭಾರಿ ದಂಡ!

ಸರ್ಕಾರಿ ಉದ್ಯೋಗಿಗಳು ಬಹುಪತ್ನಿತ್ವ, ಬಹುಪತಿತ್ವ ಹೊಂದಿರುತ್ತಾರೆ. ಅಂತವರಿಗಾಗಿಯೇ ಅಸ್ಸಾಂ ಸರ್ಕಾರ ಖಡಕ್‌ ಎಚ್ಚರಿಕೆಯೊಂದನ್ನು ನೀಡಿದೆ. ಇಲ್ಲಿನ ಸರ್ಕಾರಿ ನೌಕರರ ಸಂಗಾತಿ ಜೀವಂತವಾಗಿದ್ದು, ಇನ್ನೊಬ್ಬರನ್ನು ಮದುವೆಯಾಗುವುದನ್ನು ಸರ್ಕಾರ ನಿರ್ಬಂಧಿಸಿದೆ ಎಂದು ವರದಿಯಾಗಿದೆ.

ಈ ಸಂಬಂಧ ಅಸ್ಸಾಂ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸರ್ಕಾರಿ ನೌಕರರ ಪತಿ ಅಥವಾ ಪತ್ನಿ ಜೀವಂತವಾಗಿದ್ದರೆ, ಎರಡು ಮದುವೆಯಾಗುವಂತಿಲ್ಲ. ಎರಡು ಮದುವೆಯಾಗುವುದನ್ನು ನಿಷೇಧಿಸಲಾಗಿದೆ. ದ್ವಿಪತ್ನಿತ್ವದಲ್ಲಿ ತೊಡಗಿಸಿಕೊಂಡರೆ ಭಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪನ ಪುತ್ರನಿಂದ ಮತ್ತೊಂದು ಯಡವಟ್ಟು! – ಕುಡಿದ ಮತ್ತಿನಲ್ಲಿ ಆಡಂ ಬಿದ್ದಪ್ಪ ರಂಪಾಟ!

ಸಿಬ್ಬಂದಿ ಇಲಾಖೆಯ ಕಚೇರಿ ಹೊರಡಿಸಿರುವ ಆದೇಶದಲ್ಲಿ ಸಂಗಾತಿ ಬದುಕಿದ್ದು, ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗುವ ಮೊದಲು ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಹೆಂಡತಿ ಜೀವಂತವಾಗಿರುವ ಯಾವುದೇ ಸರ್ಕಾರಿ ನೌಕರನು  ಸರ್ಕಾರದ ಅನುಮತಿಯನ್ನು ಪಡೆಯದೆ ಮತ್ತೊಂದು ಮದುವೆ ಒಪ್ಪಂದ ಮಾಡಿಕೊಳ್ಳಬಾರದು, ಅಂತೆಯೇ, ಯಾವುದೇ ಮಹಿಳಾ ಸರ್ಕಾರಿ ಉದ್ಯೋಗಿ, ತನ್ನ ಗಂಡ ಬದುಕಿರುವಾಗ ಸರ್ಕಾರದ ಅನುಮತಿ ಪಡೆಯದೆ ಬೇರೊಬ್ಬ  ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ನಿಯಮ ಕೂಡಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಪ್ರಕಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಇದರಲ್ಲಿ ವಿಚ್ಛೇದನ ಮಾನದಂಡದ ಬಗ್ಗೆ ಉಲ್ಲೇಖಿಸಿಲ್ಲ.

Shwetha M