ಖಾಕಿ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೈನಿಂಗ್ ನೀಡಿದ್ದ ಡ್ರಗ್ಸ್ ವ್ಯಾಪಾರಿ – ರೇಡ್ ಮಾಡಿದ ಪೊಲೀಸರ ಮೇಲೆ ಅಟ್ಯಾಕ್

ಖಾಕಿ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೈನಿಂಗ್ ನೀಡಿದ್ದ ಡ್ರಗ್ಸ್ ವ್ಯಾಪಾರಿ – ರೇಡ್ ಮಾಡಿದ ಪೊಲೀಸರ ಮೇಲೆ ಅಟ್ಯಾಕ್

ಪೊಲೀಸರು ಎಷ್ಟೇ ಕಾರ್ಯಾಚರಣೆ ನಡೆಸಿದ್ರೂ ಎಷ್ಟೇ ಅಲರ್ಟ್ ಆಗಿದ್ದರೂ ಡ್ರಗ್ಸ್ ಮಾಫಿಯಾಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಕೇರಳದಲ್ಲೂ ಕೂಡ ಇತ್ತೀಚೆಗೆ ಮಾದಕ ವಸ್ತುಗಳ ಮಾರಾಟ ಹೆಚ್ಚಾಗುತ್ತಿದೆ. ಅದರಲ್ಲೂ ಡ್ರಗ್ಸ್ ವ್ಯಾಪಾರಿಯೊಬ್ಬ ಪೊಲೀಸರ ಮೇಲೆಯೇ ದಾಳಿ ಮಾಡಲು ನಾಯಿಗಳಿಗೆ ಟ್ರೈನಿಂಗ್ ಕೊಟ್ಟಿದ್ದ ಅನ್ನೋದು ಗೊತ್ತಾಗಿದೆ.

ನಾವು ನೀವೆಲ್ಲಾ ಸಿನಿಮಾಗಳಲ್ಲಿ ಕೆಂಪು ಬಟ್ಟೆ ತೋರಿಸಿದರೆ ಗೂಳಿಗಳು ಸಿಟ್ಟಾಗಿ ದಾಳಿ ಮಾಡುವುದನ್ನ ನೋಡಿದ್ದೇವೆ. ಆದರೆ ಕೇರಳದಲ್ಲಿ ಖಾಕಿ ತೊಟ್ಟವರ ಮೇಲೆ ನಾಯಿಗಳು ದಾಳಿ ಮಾಡಿವೆ. ಡ್ರಗ್ಸ್‌ (Drug) ವ್ಯಾಪಾರ ಮಾಡುತ್ತಿದ್ದ ಆರೋಪಿಯ ಮನೆಗೆ ದಾಳಿಗೆಂದು ಹೋದ ಮಾದಕವಸ್ತು ನಿಗ್ರಹ ದಳದ ಪೊಲೀಸರರ ಮೇಲೆ ನಾಯಿಗಳು ದಾಳಿ ಮಾಡಿವೆ. ಆರೋಪಿಯ ಕುತಂತ್ರದಿಂದ ಅಲ್ಲಿದ್ದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ (Kerala) ಕೊಟ್ಟಾಯಂನಲ್ಲಿ ನಡೆದಿದೆ. ಆರೋಪಿಯು ಖಾಕಿ ಬಟ್ಟೆ (Police Uniform) ತೊಟ್ಟವರ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ತರಬೇತಿ ನೀಡಿದ್ದ. ಹೀಗಾಗಿ ಖಾಕಿ ಧರಿಸಿ ಹೋಗಿದ್ದ ಎನ್‌ಸಿಬಿ (NCB) ಅಧಿಕಾರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ ಎಂಬ ಭಯಾನಕ ಅಂಶ ಹೊರಬಿದ್ದಿದೆ. ಆದಾಗ್ಯೂ ಪೊಲೀಸರು 17 ಕೇಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ.  ಆದರೆ ಪೊಲೀಸರು ನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದಾಗ ಆರೋಪಿ ಪರಾರಿಯಾಗಿದ್ದಾನೆ. ಅದೃಷ್ಟವವಶಾತ್‌ ಯಾವುದೇ ಪೊಲೀಸರಿಗೆ ನಾಯಿಗಳಿಂದ ಗಾಯಗಳಾಗಿಲ್ಲ.

ಇದನ್ನೂ ಓದಿ : ₹1,500 ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆ – ಮೂತ್ರ ಕುಡಿಸಿ ವಿಕೃತಿ ಮೆರೆದ ಪಾಪಿಗಳು

ಪ್ರಕರಣದ ಬಗ್ಗೆ ಮಾತನಾಡಿದ ಕೊಟ್ಟಾಯಂ ಎಸ್‌ಪಿ (Kottayam SP) ಕೆ ಕಾರ್ತಿಕ್‌  (K.Karthik), ‘ಇಲ್ಲಿ ಇಷ್ಟೊಂದು ನಾಯಿಗಳು ಇರುತ್ತವೆ ಎಂದು ನಾವು ಊಹಿಸಿರಲಿಲ್ಲ. ಕಾರ್ಯಾಚರಣೆಯ ಪ್ರಾರಂಭದಲ್ಲಿ ನಮಗೆ ಅವುಗಳಿಂದ ತೊಂದರೆಯಾಯಿತು. ಖಾಕಿಗಳಿಗೆ ಕಚ್ಚುವಂತೆ ಆರೋಪಿ ನಾಯಿಗಳಿಗೆ ತರಬೇತಿ ನೀಡಿದ್ದಾನೆ’ ಎಂದಿದ್ದಾರೆ. ಆರೋಪಿ ತಾನು ನಾಯಿಯ ತರಬೇತುದಾರ ಎಂದು ಹೇಳಿಕೊಳ್ಳುತ್ತಿದ್ದ. ಹೀಗಾಗಿ ಕೆಲವು ಶ್ರೀಮಂತರು ದಿನಕ್ಕೆ 1000 ರು. ಕೊಟ್ಟು ಈತನ ಮನೆಗೆ ತರಬೇತಿಗೆ ಎಂದು ನಾಯಿ ಬಿಟ್ಟು ಹೋಗುತ್ತಿದ್ದರು. ಈ ವೇಳೆ ಸುತ್ತಮುತ್ತಲಿನ ಮನೆಯ ನಾಯಿಗಳಿಗೆ ಖಾಕಿ ಕಂಡರೆ ದಾಳಿ ಮಾಡುವ ತರಬೇತಿ ನೀಡಿದ್ದಾನೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಈಗ ಇಲ್ಲಿ 13 ನಾಯಿಗಳು ಇದ್ದು ಮಾಲೀಕರನ್ನು ಗುರುತಿಸಿ ವಾಪಸು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Shantha Kumari