ರೀಲ್ಸ್‌ ಮಾಡುವಾಗ ರೈಲಿಗೆ ಸಿಲುಕಿ ಮೂವರು ಯುವಕರು ಸಾವು – ನದಿಗೆ ಹಾರಿ ಇಬ್ಬರು ಬಚಾವ್!

ರೀಲ್ಸ್‌ ಮಾಡುವಾಗ ರೈಲಿಗೆ ಸಿಲುಕಿ ಮೂವರು ಯುವಕರು ಸಾವು – ನದಿಗೆ ಹಾರಿ ಇಬ್ಬರು ಬಚಾವ್!

ಇವಾಗಂತೂ ಸೋಶಿಯಲ್ ಮೀಡಿಯಾ ಜಮಾನ. ಅದ್ರಲ್ಲೂ ರೀಲ್ಸ್ ಮಾಡೋರಿಗಂತೂ ಲೆಕ್ಕವೇ ಇಲ್ಲ ಬಿಡಿ. ಕುಂತಲ್ಲಿ, ನಿಂತಲ್ಲಿ, ಊಟ ಮಾಡುವಾಗ, ನಿದ್ದೆ ಮಾಡುವಾಗ ಅಷ್ಟೇ ಯಾಕೆ ಶವದ ಮುಂದೆಯೂ ರೀಲ್ಸ್ ಮಾಡಿ ತಮ್ಮ ಹುಚ್ಚಾಟ ತೋರುತ್ತಾರೆ. ಇದೀಗ ಇಲ್ಲೊಂದು ಯುವಕರ ಗುಂಪು ರೀಲ್ಸ್‌ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವಾಗ ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು ಮತ್ತಿಬ್ಬರು ನದಿಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದರ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ:  ಮಳೆಯ ಆರ್ಭಟಕ್ಕೆ ನಲುಗಿದ ತಮಿಳುನಾಡು –  ಮಳೆ ನಿಂತರೂ ತಗ್ಗುತ್ತಿಲ್ಲ ಪ್ರವಾಹ ಸ್ಥಿತಿ!

ಪಶ್ಚಿಮ ಬಂಗಾಳದ ಮಾಲ್ಡಾದ ಸ್ಥಳೀಯ ರೈಲ್ವೇ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ರೈಲ್ವೆ ಸೇತುವೆಯ ಮೇಲೆ ರೀಲ್ಸ್ ಮಾಡುತ್ತಿದ್ದಾಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಬುಧವಾರ ಈ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಮೃತರ ಸ್ನೇಹಿತರಿಬ್ಬರು ಕೊನೆಯ ಕ್ಷಣದಲ್ಲಿ ನದಿಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಮಾಲ್ಡಾ ವಿಭಾಗದ ಅಜಿಮ್‌ಗಂಜ್-ನ್ಯೂ ಫರಕ್ಕಾ ವಿಭಾಗದ ಸುಜ್ನಿಪಾರಾ ಮತ್ತು ಅಹಿರೋನ್ ನಿಲ್ದಾಣಗಳ ನಡುವಿನ ರೈಲ್ವೆ ಸೇತುವೆಯ ಮೇಲೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದಾಗ 13053 ಹೌರಾ-ರಾಧಿಕಪೂರ್ ಕುಲಿಕ್ ಎಕ್ಸ್‌ಪ್ರೆಸ್‌ ರೈಲು ಮೂವರು ಯುವಕರು ಡಿಕ್ಕಿ ಹೊಡೆದಿದೆ ಎಂದು ಇಆರ್ ಅಧಿಕಾರಿ ತಿಳಿಸಿದ್ದಾರೆ.

Shwetha M