ಪಕ್ಕದಲ್ಲಿ ತಂದೆಯ ಶವ, ಪ್ರಜ್ಞೆ ತಪ್ಪಿದ ತಾಯಿ! – ದಟ್ಟ ಅರಣ್ಯದಲ್ಲಿ 5 ವರ್ಷದ ಬಾಲಕನ ಹೋರಾಟ!

ದಟ್ಟ ಕಾಡು.. ಕಗ್ಗತ್ತಲು.. ತಂದೆ ಶವ.. ಪ್ರಜ್ಞೆ ತಪ್ಪಿದ ಅಮ್ಮ.. ಪಕ್ಕದಲ್ಲಿ ಐದು ವರ್ಷದ ಬಾಲಕ.. ಇಬ್ಬರನ್ನ ಉಳಿಸಲು ಪುಟ್ಟ ಬಾಲಕನ ಹೋರಾಟ.. ಅಬ್ಬಾ ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಒಡಿಶಾದಲ್ಲಿ. ತಂದೆ ತಾಯಿ ಜಗಳ ಮಾಡಿಕೊಂಡು ಮಗನ ಮುಂದೆಯೇ ವಿಷ ಸೇವಿಸಿದ್ದಾರೆ. ಇದೀಗ ಗಂಡ-ಹೆಂಡ್ತಿ ದುಡುಕಿನ ನಿರ್ಧಾರದಿಂದ ಬಾಲಕ ಈಗ ಅನಾಥವಾಗಿದ್ದಾನೆ.
ಇದನ್ನೂ ಓದಿ: ಧ್ರುವಂತ್ ಮೋಸದ ಉಸ್ತುವಾರಿ! – ಫಿನಾಲೆ ಟಾಸ್ಕ್ನಿಂದ ಹೊರ ಬಿದ್ದ ಗಿಲ್ಲಿನಟ?
ಅಷ್ಟಕ್ಕೂ ಆಗಿದ್ದೇನು?
ಒಡಿಶಾ ಮೂಲದ ದುಷ್ಮಂತ್ ಮಾಝಿ ಮತ್ತು ಅವರ ಪತ್ನಿ ರಿಂಕಿ ಮಾಝಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ರಿಂಕಿಯ ಪೋಷಕರ ಮನೆಗೆ ಹೋಗಿ ಬೈಕ್ನಲ್ಲಿ ವಾಪಾಸ್ ಹೊರಟಿದ್ದಾರೆ. ಈ ವೇಳೆ ಯಾವುದೋ ಕಾರಣಕ್ಕೆ ಗಂಡ, ಹೆಂಡ್ತಿ ಮಧ್ಯೆ ಜಗಳ ಶುರುವಾಗಿದೆ. ಬಳಿಕ ರಸ್ತೆ ಪಕ್ಕದಲ್ಲಿದ್ದ ಕಾಡಿಗೆ ತೆರಳಿದ್ದಾರೆ. ಬಳಿಕ ಇವರಿಬ್ಬರು ವಿಷ ಸೇವಿಸಿದ್ದಲ್ಲದೆ, ಬಾಲಕನಿಗೂ ವಿಷ ಕುಡಿಸಿದ್ದಾರೆ. ದುಷ್ಮಂತ್ ವಿಷ ಸೇವಿಸಿ ಸಾವನ್ನಪ್ಪಿದರೆ, ಅವರ ಪತ್ನಿ ರಿಂಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೋಷಕರು ತಮ್ಮ ಚಿಕ್ಕ ಮಗನಿಗೂ ವಿಷ ನೀಡಿದ್ದರೂ, ಅವನು ಹೇಗೋ ಬದುಕುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಾಲಕ ಇಡೀ ರಾತ್ರಿ ದಟ್ಟ ಅರಣ್ಯದಲ್ಲಿ ಹೆತ್ತವರ ಪಕ್ಕದಲ್ಲೇ ಕುಳಿತಿದ್ದ. ಬಳಿಕ ಬಾಲಕ ಸಹಾಯಕ್ಕಾಗಿ ಬೆಳಗ್ಗೆ, ಕಾಡಿನಿಂದ ಹೊರಬಂದು ಹತ್ತಿರದ ರಸ್ತೆಗೆ ಹೋಗಿ ಸಹಾಯ ಕೇಳಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು, ಅವನ ತಾಯಿ ಮತ್ತು ಅವನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ರಿಂಕಿ ಮಾಝಿ ಅಂಗುಲ್ ಜಿಲ್ಲೆಯ ಛೇಂಡಿಪಾಡ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ವಿಷ ನೀಡಲಾಗಿದ್ದರೂ, ಮಗು ಬದುಕುಳಿದಿದ್ದು, ವೈದ್ಯಕೀಯ ಆರೈಕೆಯ ನಂತರ ಸ್ಥಿರವಾಗಿದೆ ಎಂದು ವರದಿಯಾಗಿದೆ. ನಂತರ ಹೆಚ್ಚಿನ ಆರೈಕೆಗಾಗಿ ಅವನನ್ನು ಅವನ ಅಜ್ಜಿಯರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಡಿರಿ

