ಬುಲ್‌ಡಾಗ್ ದಾಳಿಗೆ ಪ್ರಾಣ ಕಳೆದುಕೊಂಡ 4 ವರ್ಷದ ಬಾಲಕಿ! – ಚರ್ಮ ಸಮೇತ ಕೂದಲು ಕಿತ್ತು ಕೊಂದ ನಾಯಿ!

ನಾಯಿ ದಾಳಿ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದೆ. ಇದೀಗ ನಾಲ್ಕು ವರ್ಷದ ಬಾಲಕಿ ಮೇಲೆ ಬುಲ್ ಡಾಗ್ ಮಾರಣಾಂತಿಕ ದಾಳಿ ಮಾಡಿದೆ. ಇದ್ರ ಪರಿಣಾಮ ಬಾಲಕಿ ಪ್ರಾಣಪಕ್ಷಿ ಹಾರಿ ಹೋಗಿದೆ.
ಇದನ್ನೂ ಓದಿ: ವರ ಬಿಸಿನೀರು ಕೇಳಿದ್ದಕ್ಕೆ ಮದುವೆಯೇ ಕಾನ್ಸಲ್!
ಈ ಘಟನೆ ಬಿಹಾರದ ಮುಜಫರ್ಪುರದಲ್ಲಿ ನಡೆದಿದೆ. ಶಿವಾನಿ ಮೃತಪಟ್ಟ ಬಾಲಕಿ. ಶಿವಾನಿ ಪೂಜೆಗೆ ಹೊರಟ್ಟಿದ್ದಳು. ಸ್ವಲ್ಪ ದೂರದಲ್ಲಿ ಯುವಕನೊಬ್ಬ ಕಟ್ಟಿದ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ. ಯುವಕ ಸರಪಳಿಯನ್ನು ಕೈಬಿಟ್ಟಿದ್ದರಿಂದ ನಾಯಿ ಮಕ್ಕಳ ಮೇಲೆ ದಾಳಿ ಮಾಡಿದೆ. ಇಬ್ಬರು ಮಕ್ಕಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಶಿವಾನಿ ಮೇಲೆ ನಾಯಿ ದಾಳಿ ಮಾಡಿದೆ. ಬುಲ್‌ಡಾಗ್ ಆಕೆಯ ಕೂದಲು ಸೇರಿದಂತೆ ನೆತ್ತಿಯನ್ನೇ ಕಿತ್ತು ಹಾಕಿತ್ತು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಜಮಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾರು ಪೊಲೀಸ್ ಠಾಣಾಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ.

ನೋಡಿರಿ

