ತಾವರಕೆರೆಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು
ಬಡ ಕೂಲಿಕಾರ್ಮಿಕರ ಪ್ರಾಣ ಲೆಕ್ಕಕ್ಕೆ ಇಲ್ಲವೇ?

ತಾವರಕೆರೆಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವುಬಡ ಕೂಲಿಕಾರ್ಮಿಕರ ಪ್ರಾಣ ಲೆಕ್ಕಕ್ಕೆ ಇಲ್ಲವೇ?

ತಾವರೆಕರೆಯ ಮಾದಪಟ್ಟಣ ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದೆ. ಕ್ರಷರ್ ಬಂಡೆ ಮೇಲೆ ಕೆಲಸ ಮಾಡ್ತಿದ್ದ ವೇಳೆ ಬಂಡೆ ಕುಸಿದು ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯಗೆ ಶಾಸಕರ ದುಂಬಾಲು – ಡಿಕೆಶಿ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ?

ಬೆಂಗಳೂರು ದಕ್ಷಿಣ ತಾಲೂಕಿನ ತಾವರಕೆರೆ ಬಳಿ ಬೆಳಗ್ಗೆ 7.30ರ ಸುಮಾರಿಗೆ ಭೀಕರ ದುರಂತ ಸಂಭವಿಸಿದೆ. ಕ್ರಷರ್ ಬಂಡೆ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆ ಬಿದ್ದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಶಂಕೆಯಿದೆ. ಇನ್ನು ಕೆಲ ಕಾರ್ಮಿಕರು ಸಿಲುಕಿರುವ ಶಂಕೆ ವ್ಕಕ್ತವಾಗಿದೆ. ತಾವರೆಕರೆ ಪೊಲೀಸ್ ಠಾಣವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಕಾವೇರಿ ಕಂಪನಿಗೆ ಸೇರಿದ ಕ್ರಷರ್​ನಲ್ಲಿ ದುರಂತ ಸಂಭವಿಸಿದೆ. ಇಂದು ಬೆಳಗ್ಗೆ (ಗುರುವಾರ) ಕೆಲಸ ಮಾಡುವಾಗ ಈ ದುರ್ಘಟನೆ ನಡೆದಿದೆ.

ಕ್ರಷರ್‌ನ ಕೆಳಭಾಗದಲ್ಲಿ ಕಲ್ಲು ಪುಡಿ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ, ಕ್ರಷರ್ ಮೇಲಿನ ಭಾಗದಿಂದ ಬಂಡೆ ನೇರವಾಗಿ ಕೂಲಿ ಕಾರ್ಮಿಕರ ಮೇಲೆಯೇ ಬಿದ್ದಿದೆ. ಮೃತಪಟ್ಟವರು ಬಡ ಕೂಲಿ ಕಾರ್ಮಿಕರು. ಅಸ್ಸಾಂ ಮೂಲದವರು ಎಂದು ಹೇಳಲಾಗುತ್ತಿದೆ. ಈ ಭೀಕರ ದುರಂತಕ್ಕೆ ಸಂಬಂಧಪಟ್ಟವರ ಸಂಪೂರ್ಣ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.

Sulekha

Leave a Reply

Your email address will not be published. Required fields are marked *