ತೀರ್ಥಹಳ್ಳಿಯಲ್ಲಿ ಪತ್ರೊಡೆ ಎಲೆ ಕೀಳಲು ಮರ ಏರಿದ್ದ ಯುವಕನಿಗೆ ಕರೆಂಟ್ ಶಾಕ್ – ಈ ಸಾವಿಗೆ ಹೊಣೆ ಯಾರು?

ತೀರ್ಥಹಳ್ಳಿಯಲ್ಲಿ ಪತ್ರೊಡೆ ಎಲೆ ಕೀಳಲು ಮರ ಏರಿದ್ದ ಯುವಕನಿಗೆ ಕರೆಂಟ್ ಶಾಕ್ –  ಈ ಸಾವಿಗೆ ಹೊಣೆ ಯಾರು?

ಈಗ ಇದ್ದವರು ನಾಳೆ ಇರಲ್ಲ.. ಕ್ಷಣ ಮಾತ್ರದಲ್ಲಿ ಪ್ರಾಣ ಹೋಗಿ ಬಿಡುತ್ತೆ. ಹೇಗೆ ಹೋಗುತ್ತೆ ಅನ್ನೋದು ಕೂಡ ಗೊತ್ತಾಗಲ್ಲ. ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲೂ ಕೂಡ ಒಂದು ಕರಳು ಹಿಡುಂವ  ಘಟನೆ ನಡೆದಿದೆ. ಒಂದು ಹೊತ್ತಿನ ರುಚಿಯಾದ ತಿಂಡಿಯ ಆಸೆಗೆ ಪ್ರಾಣವೇ ಹೋಗಿದೆ.

ಇದನ್ನೂ ಓದಿ: ಶೂರ್ಪನಖಿ ಶ್ವೇತಾಳ ಪ್ರೇಮಿ ಅರೆಸ್ಟ್ – ಪಾಂಡಿಚೇರಿಯಲ್ಲೇ ಸಿಕ್ಕಿಬಿದ್ದ ಪಾಪಿ ಕೆನತ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಸಮೀಪದಲ್ಲಿ ಮರವೇರಿದ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪತ್ರೊಡೆ ಎಲೆ ಕೀಳಲು ಮರ ಏರಿದ್ದ ಯುವಕ ಮರದ ಪಕ್ಕದಲ್ಲಿದ್ದ ವಿದ್ಯುತ್ ತಗಲಿ ಸಾವನ್ನಪ್ಪಿದ್ದಾರೆ. ಮೃತ ಯುವಕನನ್ನು ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಪತ್ರೊಡೆ ಎಲೆ ಕೀಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡು ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಅಭಿಷೇಕ್​​​​ ಸಾವನ್ನಪ್ಪಿದ್ದು, ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿ ಅಭಿಷೇಕ್ ಇತ್ತೀಚಿಗಷ್ಟೇ ವಿವಾಹವಾಗಿತ್ತು. ಹೆಂಡತಿ ಮಕ್ಕಳು ಅಂತಾ ಆಸೆ ಇಟ್ಟುಕೊಂಡಿದ್ದ ಯುವಕ ಸಾವಿನ ಮನೆ ಸೇರಿದ್ದು, ಅಭಿಷೇಕ್​​ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಇದ್ದಕ್ಕೆ ಕಾರಣ ಅಂತ ಆರೋಪಿ, ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಮರ ನಡುವೆ ವಿದ್ಯುತ್ ತಂತಿ ಹಾದು ಹೋದ್ರು ಕೂಡ ಮೆಸ್ಕಾಂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಈ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

Kishor KV

Leave a Reply

Your email address will not be published. Required fields are marked *