ಭಾರತ ಗೆದ್ದಿದ್ದಕ್ಕೆ PCB ಬರ್ಬಾದ್! – ಪಾಕ್ ಪಂದ್ಯ ನೋಡೋರೇ ಗತಿ ಇಲ್ವಾ?
GOLD ಸೋತಿದ್ದಕ್ಕೆ ನವಾಜ್ ಕಣ್ಣೀರು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕ್ರಿಕೆಟ್ ಜಗತ್ತಿಗೇ ಬಾಸ್. ಬಿಸಿಸಿಐ Net Worth $2.2 ಬಿಲಿಯನ್ ಅಂದ್ರೆ ಇಂಡಿಯನ್ ಕರೆನ್ಸಿನಲ್ಲಿ ಹೇಳೋದಾದ್ರೆ ₹18,760 ಕೋಟಿಗೂ ಜಾಸ್ತಿ. ಉಳಿದಿರೋ 9 ಪ್ರಮುಖ ಕ್ರಿಕೆಟ್ ಬೋರ್ಡ್ಗಳ ಒಟ್ಟಾರೆ ಆಸ್ತಿ ಸೇರಿದ್ರೂ ಭಾರತದ ಹತ್ತಿರಕ್ಕೆ ಬರೋಕೂ ಆಗಲ್ಲ. ಹೀಗೆ ಒನ್ ಮ್ಯಾನ್ ಶೋ ಥರ ಇರೋ ಭಾರತದ ಮುಂದೆ ಪ್ರತೀ ಸಲ ಬಿಲ್ಡಪ್ ಕೊಡೋ ಪಾಕಿಸ್ತಾನ ಈಗ ತನ್ನ ದೇಶದಲ್ಲೇ ಬೆಲೆ ಇಲ್ಲದಂತಾಗಿದೆ. ಪಾಕ್ ಪಂದ್ಯಗಳನ್ನ ಬೇರೆ ದೇಶದವ್ರು ಇರ್ಲಿ ತನ್ನ ದೇಶದಲ್ಲೇ ನೋಡೋರು ಗತಿ ಇಲ್ಲ. ಆಟಗಾರರ ಫೇಲ್ಯೂರ್ ಪಿಸಿಬಿಯನ್ನ ದಿವಾಳಿ ಮಾಡಿದೆ.
ಇದನ್ನೂ ಓದಿ : ICC RANKINGನಲ್ಲಿ ಭಾರತದ ದರ್ಬಾರ್! – ಶ್ರೇಯಸ್ ಅಯ್ಯರ್ ಭರ್ಜರಿ ಜಂಪ್!
ಪಾಕಿಸ್ತಾನ ಕ್ರಿಕೆಟ್ ಟೀಂ ಅಂದ್ರೆ ಈ ಕಾಮಿಡಿ ಆಗೋಗಿದೆ. ಪಂದ್ಯಗಳನ್ನ ಗೆಲ್ಲಲ್ಲ. ಆಟಗಾರರ ನೂರೆಂಟು ಅವತಾರ. ಪದೇ ಪದೇ ಕ್ಯಾಪ್ಟನ್ಸ್ ಬದಲಾವಣೆ. ಕೋಚ್ಗಳನ್ನ ಚೇಂಜ್ ಮಾಡೋದು.. ಆಟಗಾರರನ್ನೂ ಅದಲು ಬದಲು ಮಾಡೋದು. ಹೀಗೆ.. ಆದ್ರೆ ಕೊನೆಗೆ ಯಾವ್ ಟ್ರಿಕ್ಕೂ ವರ್ಕ್ ಆಗ್ತಿಲ್ಲ.. ಪಾಕಿಸ್ತಾನ ಸೋಲೋದೂ ತಪ್ಪುತ್ತಿಲ್ಲ. ಭಾರತದ ವಿರುದ್ಧ ಅಂತೂ ಕಂಪ್ಲೀಟ್ ಸರೆಂಡರ್. ಇತ್ತೀಚೆಗೆ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಸೋತ ಮೇಲಂತೂ ಅವ್ರದ್ದೇ ದೇಶದಲ್ಲಿ ಮಾನ ಮೂರು ಕಾಸಿಗೆ ಹರಾಜಾಗಿದೆ.
ಆಟಗಾರರ ಕಳಪೆ ಪ್ರದರ್ಶನ.. ಬಿಡ್ಡಿಂಗ್ ಕೂಗುವವರೇ ಇಲ್ಲ!
ಕ್ರಿಕೆಟ್ ಮಂಡಳಿಗಳ ಫೈನಾನ್ಶಿಯಲ್ ಗ್ರೋತ್ ಡಿಸೈಡ್ ಆಗೋದೇ ಆಟಗಾರರ ಪ್ರದರ್ಶನದ ಮೇಲೆ. ಌಂಡ್ ವ್ಯೂವರ್ಶಿಪ್ ಮೇಲೆ. ಈ ವಿಚಾರದಲ್ಲಿ ಭಾರತ ನೆಕ್ಸ್ಟ್ ಲೆವೆಲ್ನಲ್ಲಿದೆ. ಆದ್ರೆ ಪಾಕಿಸ್ತಾನ ಕ್ರಿಕೆಟ್ ತಂಡದ ಸಾಲು ಸಾಲು ಸೋಲು, ಆಟಗಾರರ ಉದ್ಧಟತನದಿಂದಾಗಿ ಪ್ರಾಯೋಜಕರೇ ಇಲ್ಲದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬರ್ಬಾದ್ ಆಗೋ ಥರ ಮಾಡ್ತಿದೆ. ಏಷ್ಯನ್ ಗೇಮ್ಸ್ನಲ್ಲಿ ಭಾರತದ ವಿರುದ್ಧ ಸೋತ ಮೇಲಂತೂ ಇನ್ನೂ ಕೆಳಮಟ್ಟಕ್ಕೆ ಇಳಿದಿದ್ದಾರೆ. ಪಾಕಿಸ್ತಾನದಲ್ಲಿ ಮುಂಬರುವ 25 ಅಂತಾರಾಷ್ಟ್ರೀಯ ಪಂದ್ಯಗಳ ಹೋಂ ಸಿರೀಸ್ಗಾಗಿ ಬ್ರಾಡ್ ಕಾಸ್ಟರ್ಸ್ ಅಂದ್ರೆ ಪ್ರಸಾರ ಹಕ್ಕುಗಳನ್ನು ಪಿಸಿಬಿ ಬಿಡ್ಡಿಂಗ್ ಕರೆದಿತ್ತು. 14 ಏಕದಿನ ಪಂದ್ಯಗಳು, ಆರು ಟಿ20ಐಗಳು, 5 ಟೆಸ್ಟ್ ಪಂದ್ಯಗಳು ಸೇರಿ ಒಟ್ಟು 25 ಪಂದ್ಯಗಳನ್ನು ಒಳಗೊಂಡ ಪ್ರಸಾರ ಹಕ್ಕುಗಳ ಹರಾಜಿಗಾಗಿ 600 ಮಿಲಿಯನ್ ಅಂದ್ರೆ 60 ಕೋಟಿ ಪಿಕೆಆರ್ ಬೆಲೆಯನ್ನ ನಿಗದಿ ಮಾಡಿತ್ತು. ಸೋ ಇದು ರಿಸರ್ವ್ ಪ್ರೈಸ್. ಆದ್ರೆ ಬಿಡ್ಡಿಂಗ್ನಲ್ಲಿ ಪೈಪೋಟಿಯೇ ಇರಲಿಲ್ಲ. ಹೀಗಾಗಿ ಪಿಸಿಬಿ ಸರ್ಕಾರಿ ಸ್ವಾಮ್ಯದ ಚಾನೆಲ್ ಪಿಟಿವಿ ಸ್ಪೋರ್ಟ್ಸ್ ಜೊತೆ ಕೇವಲ 35 ಕೋಟಿ ಪಾಕಿಸ್ತಾನಿ ರೂಪಾಯಿಗಳಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದು ಸಾಲ್ದು ಅಂತಾ ಪಿಸಿಬಿಗೆ ಬರಬೇಕಿರೋ ಬಾಕಿ ಪಟ್ಟಿಯೇ ದೊಡ್ಡದಿದೆ.
ಪಿಸಿಬಿಗೆ ಪ್ರಸಾರಕದಿಂದ ಬಾಕಿಯೇ ಬಂದಿಲ್ಲ..!
ಪಿಸಿಬಿಗೆ ಹೊಸ ಬ್ರಾಡ್ ಕಾಸ್ಟರ್ಸ್ ಸಿಕ್ತಿಲ್ಲ ಅನ್ನೋ ಚಿಂತೆ ಒಂದ್ಕಡೆಯಾದ್ರೆ ಹಿಂದಿನ ಬಾಕಿಯೇ ಬಂದಿಲ್ಲ. ಈ ಹಿಂದೆ ಪ್ರಸಾರ ಹಕ್ಕು ಪಡೆದಿದ್ದ ಕನಿಷ್ಠ ಮೂರು ಪ್ರಮುಖ ಪ್ರಸಾರ ಸಂಸ್ಥೆಗಳು ಪಿಸಿಬಿಗೆ 100 ಕೋಟಿ ಪಾಕಿಸ್ತಾನಿ ರೂಪಾಯಿಗೂ ಹೆಚ್ಚು ಬಾಕಿ ಹಣವನ್ನು ಪಾವತಿಸಿಲ್ಲ. ಹೀಗಿದ್ರೂ ಹರಾಜಿನಲ್ಲಿ ಭಾಗವಹಿಸುವುದಕ್ಕೆ ಈ ಸಂಸ್ಥೆಗಳಿಗೆ ಪಿಸಿಬಿಯು ಯಾವುದೇ ರೀತಿ ರಿಸ್ಟ್ರಿಕ್ಷನ್ಸ್ ಹೇರಿರಲಿಲ್ಲ. ಹೀಗಿದ್ರೂ ಹಿಂದಿನ ಬ್ರಾಡ್ಕಾಸ್ಟರ್ಸ್ ಯಾರು ಬಿಡ್ನಲ್ಲಿ ಭಾಗಿಯಾಗಿಲ್ಲ. ಅಂದ್ರೆ ಯಾರಿಗೂ ಇಂಟ್ರೆಸ್ಟೇ ಇಲ್ಲ. ಹೀಗಾಗಿ ಗತಿ ಇಲ್ಲದೆ ಬಿಡ್ ಸಲ್ಲಿಸಿದ್ದ ಏಕೈಕ ಸಂಸ್ಥೆಗೆ ಅದೂ ಕೂಡ ಅರ್ಧಬೆಲೆಗೆ ತನ್ನ ರೈಟ್ಸ್ ಬಿಟ್ಟುಕೊಟ್ಟಿದೆ. ಪಾಕಿಸ್ತಾನ ತಂಡದ ಸತತ ಸೋಲುಗಳು ಮತ್ತು ಪ್ಲೇಯರ್ಗಳ ಕಳಪೆ ಪ್ರದರ್ಶನದಿಂದ ನೋಡೋರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಜಾಹೀರಾತು ಮತ್ತು ಟಿವಿ ನೆಟ್ವರ್ಕ್ಗಳು ಕೂಡ ಇಂಟ್ರೆಸ್ಟ್ ತೋರಿಸ್ತಿಲ್ಲ. ಇದೇ ಕಾರಣಕ್ಕೆ ಪಿಸಿಬಿಗೆ ವ್ಯಾಲ್ಯೂನೇ ಇಲ್ಲದಂತಾಗಿದೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಏನ್ ಗೊತ್ತಾ. ಪಾಕಿಸ್ತಾನ ಹೀಗೆ ತನ್ನ 25 ಪಂದ್ಯಗಳ ಪ್ರಸಾರ ಹಕ್ಕುಗಳಿಗಾಗಿ ಇಷ್ಟೆಲ್ಲಾ ಸರ್ಕಸ್ ಮಾಡ್ತಿದ್ರೆ ಭಾರತ ಒಂದೇ ಪಂದ್ಯದಲ್ಲಿ ಇದಕ್ಕಿಂತಲೂ ಜಾಸ್ತಿ ಗಳಿಕೆ ಮಾಡ್ತಿದೆ.
ಭಾರತದಲ್ಲಿ ಒಂದೇ ಪಂದ್ಯಕ್ಕೆ ₹67.75 ಕೋಟಿ ಪಡೆಯುವ ಬಿಸಿಸಿಐ!
ಪಾಕಿಸ್ತಾನದ ಇಡೀ 25 ಅಂತರರಾಷ್ಟ್ರೀಯ ಪಂದ್ಯಗಳ ಪ್ರಸಾರ ಹಕ್ಕು ಒಟ್ಟಾರೆಯಾಗಿ ಕೇವಲ ₹35 ಕೋಟಿ ಪಾಕಿಸ್ತಾನಿ ರೂಪಾಯಿಗೆ ಮಾರಾಟವಾಗಿದೆ. ಇದನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿದ್ರೆ ಹತ್ತತ್ರ ₹10.5 ಕೋಟಿ ರೂಪಾಯಿ ಆಗುತ್ತೆ. ಆದರೆ ಭಾರತದಲ್ಲಿ ಬಿಸಿಸಿಐ ಪ್ರಸ್ತುತ ಅಂದ್ರೆ 2023-2028ರ ಸೈಕಲ್ನಲ್ಲಿ ತನ್ನ ದೇಶದಲ್ಲಿ ನಡೆಯುವ ಪ್ರತಿ ಒಂದು ಪಂದ್ಯಕ್ಕೆ ಏನಿಲ್ಲ ಅಂದ್ರೂ ₹67.75 ಕೋಟಿ ಭಾರತೀಯ ರೂಪಾಯಿ ಆದಾಯವನ್ನು ಪಡೆಯುತ್ತಿದೆ. ಇನ್ನು ಒಟ್ಟಾರೆಯಾಗಿ ಕಂಪೇರ್ ಮಾಡಿದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಒಟ್ಟು ಆಸ್ತಿಗಿಂತ ಬಿಸಿಸಿಐನ ನೆಟ್ ವರ್ತ್ ಬರೋಬ್ಬರಿ 40 ಪಟ್ಟು ಹೆಚ್ಚು ಇದೆ. ಇನ್ನು ಐಸಿಸಿ ಪಾಲು ಅಂತಾ ನೋಡಿದ್ರೆ ಒಂದು ವರ್ಷಕ್ಕೆ ಬಿಸಿಸಿಐ 231 ಮಿಲಿಯನ್ ಡಾಲರ್ ಅಂದ್ರೆ ಐಸಿಸಿ ಆದಾಯದಲ್ಲಿ ಶೇಕಡಾ 38.5ರಷ್ಟು ಪಾಲನ್ನು ಭಾರತಕ್ಕೆ ನೀಡುತ್ತೆ. ಅದೇ ಪಾಕಿಸ್ತಾನಕ್ಕೆ 34.5 ಮಿಲಿಯನ್ ಡಾಲರ್ ಅಂದ್ರೆ ಶೇ.5.75ರಷ್ಟು ಪಾಲು ನೀಡುತ್ತೆ. ಸೋ ಅಲ್ಲಿಗೆ ಐಸಿಸಿಯಿಂದಲೂ ಬಿಸಿಸಿಐ 6 ಪಟ್ಟು ಹೆಚ್ಚು ಹಣ ಪಡೆಯುತ್ತದೆ. ಸೋ ಅಲ್ಲಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಯಾವ ಌಂಗಲ್ನಲ್ಲೂ ಬಿಸಿಸಿಐಗೆ ಫೈಟ್ ಕೊಡೋದಿರ್ಲಿ ಹತ್ತಿರಕ್ಕೆ ಬರೋದೂ ಕಷ್ಟ ಅನ್ನೋದು ಇಲ್ಲೇ ಕ್ಲಿಯರ್ ಆಗಿ ಗೊತ್ತಾಗ್ತಿದೆ. ಮತ್ತೊಂದ್ಕಡೆ ಆಟಗಾರರು ಭಾರತದ ವಿರುದ್ಧ ಗೆಲ್ಲೋಕಾಗದೇ ಕಣ್ಣಿರಿಡ್ತಿದ್ದಾರೆ.
ಭಾರತದ ಎದುರು ಏಷ್ಯನ್ ಗೇಮ್ಸ್ ಸೋತಿದ್ದಕ್ಕೆ ಕೊರಗಿದ ನವಾಜ್!
ಅಕ್ಟೋಬರ್ 3ರಂದು ಜಪಾನ್ನಲ್ಲಿ ನಡೆದ ಮೆನ್ಸ್ ಕ್ರಿಕೆಟ್ ಗೋಲ್ಡ್ ಮೆಡಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವ್ನ ಸೋಲಿಸಿ ಚಾಂಪಿಯನ್ ಆಯ್ತು. ಈ ಪಂದ್ಯದಲ್ಲಿ ಪಾಕ್ ಪರ ಕೊನೇವರೆಗೂ ಫೈಟ್ ಕೊಟ್ಟಿದ್ದ ಬ್ಯಾಟರ್ ಹಸನ್ ನವಾಜ್ ಇನ್ನೂ ಕೂಡ ಈ ಸೋಲಿನ ನೋವಿನಲ್ಲೇ ಇದ್ದಾರೆ.. ಕೇವಲ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ಗಳ ನೆರವಿನಿಂದ 96 ರನ್ ಚಚ್ಚಿದರು. ಭಾರತ ನೀಡಿದ 212 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ರನ್ ಚೇಸ್ನಲ್ಲಿ ಪಾಕಿಸ್ತಾನ ತಂಡ ಕೆಲವು ತಪ್ಪುಗಳನ್ನು ಮಾಡಿತು. ಇದೇ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಸೋಲಿನ ನೋವು ತನ್ನನ್ನು ಇನ್ನೂ ಕಾಡುತ್ತಿದೆ. ಅಷ್ಟೇ ಅಲ್ಲ ಭಾರತದ ಪರ ಕೊನೆಯಲ್ಲಿ ಒಬ್ಬ ಬೌಲರ್ ಕೊರತೆ ಇತ್ತು. ಜಸ್ಪ್ರೀತ್ ಬುಮ್ರಾ ಅವರ ಕೇವಲ ಒಂದು ಓವರ್ ಮಾತ್ರ ಬಾಕಿ ಇತ್ತು. ಹೀಗಾಗಿ ಪಕ್ಕಾ ಲೆಕ್ಕಾಚಾರದೊಂದಿಗೆ ಬ್ಯಾಟ್ ಮಾಡುತ್ತಿದ್ದ ತಮಗೆ ಪಂದ್ಯವನ್ನು ಗೆಲ್ಲುವ ಕಾನ್ಫಿಡೆನ್ಸ್ ಇತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ. ಈ ಸೋಲಿನ ನೋವು ನನ್ನನ್ನು ಈಗಲೂ ಕಾಡುತ್ತಿದೆ ಎಂದಿದ್ದಾರೆ. ಒಟ್ನಲ್ಲಿ ಭಾರತ ಕ್ರಿಕೆಟ್ನಲ್ಲಿ ಹೆಮ್ಮರವಾಗಿ ಬೆಳೆದಾಗಿದೆ. ಹೀಗಿರುವಾಗ ಪಾಕಿಸ್ತಾನ ನಾವು ಭಾರತಕ್ಕೆ ಪೈಪೋಟಿ ನೀಡ್ತೀವಿ ಗೆಲ್ತೀವಿ ಅನ್ನೋದೆಲ್ಲಾ ಉದ್ಧಟತನದಂತೆ ತೋರುತ್ತೆ. ಇದು ಹೀಗೇ ಮುಂದುವರಿದ್ರೆ ಪಿಸಿಬಿ ದಿವಾಳಿಯಾಗೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

