ಹುಟ್ಟುಹಬ್ಬ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ ತಂಗಿ ದಾರುಣ ಸಾವು – ಮನೆಯೇ ಮೃತ್ಯುವಾಗಿದ್ದೇಗೆ?

ಹುಟ್ಟುಹಬ್ಬ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ ತಂಗಿ ದಾರುಣ ಸಾವು – ಮನೆಯೇ ಮೃತ್ಯುವಾಗಿದ್ದೇಗೆ?

ಆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮಗಳ ಹುಟ್ಟುಹಬ್ಬ ಅಂತಾ ಕುಟುಂಬಸ್ಥರೆಲ್ಲಾ ಸೇರಿ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಿದ್ರು. ತಂಗಿಯ ಬರ್ತಡೇಗೆ ಅಣ್ಣನೂ ಕೂಡ ಶುಭಾಶಯ ಕೋರಿದ್ದ. ಆದರೆ ಈ ಖುಷಿ, ಸಂತೋಷ ಹೆಚ್ಚು ಹೊತ್ತು ಉಳಿಯಲೇ ಇಲ್ಲ. ಅದೂ ಯುಗಾಗಿ ಹಬ್ಬದ ದಿನವೇ ಆ ಮನೆಯಲ್ಲಿ ನಡೆಯಬಾರದ್ದು ನಡೆದು ಹೋಗಿದೆ.

ಯುಗಾದಿ ಅಂದರೆ ದಕ್ಷಿಣಭಾರತದ ಪ್ರಸಿದ್ಧ ಹಬ್ಬ. ಹೀಗೆ ವಿಶಾಖಪಟ್ಟಣಂ ನಗರದ ಕಲೆಕ್ಟರೇಟ್ ಬಳಿಯ ರಾಮಜೋಗಿಪೇಟೆ ನಿವಾಸಿಗಳು ಕೂಡ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ಮನೆಯಲ್ಲೇ ಹೊಂಚು ಹಾಕಿ ಕುಳಿತಿದ್ದ ವಿಧಿ ಇಡೀ ಮನೆಯನ್ನೇ ಕೆಡವಿದೆ. ಮೂರು ಅಂತಸ್ತಿನ ಕಟ್ಟಡ ಕುಸಿದು ಅದರಲ್ಲಿ ವಾಸಿಸುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಮೂವರಲ್ಲಿ ಇಬ್ಬರು ಮಕ್ಕಳಾಗಿದ್ದು, ಮತ್ತೊಬ್ಬ ಬಿಹಾರ ಮೂಲದ ಯುವಕ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ಮೂವರಲ್ಲಿ ಓರ್ವ ಬಾಲಕಿಯೂ ಸೇರಿದ್ದು, ಆಕೆಯ ಹುಟ್ಟುಹಬ್ಬದ ದಿನವೇ ಈ ದಾರುಣ ಘಟನೆ ನಡೆದಿದ್ದು, ಸಂಬಂಧಿಕರು ಹಾಗೂ ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ : ಪೊಲೀಸರಿಂದಲೇ ಆರೋಪಿಯ ಅಪಹರಣ – ದುಡ್ಡಿಗೆ ಬೇಡಿಕೆಯಿಟ್ಟ ಖಾಕಿಗಳು ಕಂಬಿಹಿಂದೆ..!

ಕಟ್ಟಡ ಕುಸಿತದ ವೇಳೆ 8 ಮಂದಿ ಇದ್ದರು. ಅವರಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು, ರಕ್ಷಣಾ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಜನರನ್ನು ಹೊರತೆಗೆದಿದ್ದರು. ಅವಶೇಷಗಳಡಿ ಸಿಲುಕಿ ಸಾಕೇತಿ ಅಂಜಲಿ ಎಂಬ 14 ವರ್ಷದ ಬಾಲಕಿ, ಆಕೆಯ ಸಹೋದರ 17 ವರ್ಷದ ದುರ್ಗಾಪ್ರಸಾದ್ ಮತ್ತು ಬಿಹಾರದ ಮತ್ತೊಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ದುರುಂತವೆಂದರೆ ಅಂಜಲಿ ಜನ್ಮದಿನ ಆಚರಿಸಿಕೊಂಡ ಕೇವಲ ಒಂದು ಗಂಟೆಯೊಳಗೆ ಈ ಅವಘಡ ಸಂಭವಿಸಿ ಸಾವನ್ನಪ್ಪಿದ್ದಾಳೆ. ಆಕೆಯ ಜೊತೆಗೆ ಸಹೋದರ ಕೂಡ ಸಾವನ್ನಪ್ಪಿದ್ದಾನೆ. ಮಕ್ಕಳನ್ನ ಕಳೆದುಕೊಂಡಿರುವ ಪೋಷಕರಾದ ರಾಮರಾವ್ ಮತ್ತು ಕಲ್ಯಾಣಿ ಕೂಡ ಗಾಯಗೊಂಡಿದ್ದಾರೆ.

ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು ಎಂಟು ಮಂದಿ ವಾಸಿಸುತ್ತಿದ್ದರು ಎಂದು ಗಾಯಾಳು ರಾಮರಾವ್ ತಿಳಿಸಿದ್ದಾರೆ. ರಾಮರಾವ್ ಅವರ ಕುಟುಂಬ ಮೂರನೇ ಮಹಡಿಯಲ್ಲಿ ವಾಸವಾಗಿದ್ದು, ಮೊದಲ ಮಹಡಿಯಲ್ಲಿ ದಂಪತಿ ಮತ್ತು ಮಕ್ಕಳು ವಾಸವಾಗಿದ್ದು, ನೆಲ ಮಹಡಿಯಲ್ಲಿ ಇಬ್ಬರು ಬ್ಯಾಚುಲರ್ಸ್​ ವಾಸವಾಗಿದ್ದರು ಎಂದು ತಿಳಿದುಬಂದಿದೆ.

suddiyaana