ರೀಲ್ಸ್ ಮಾಡಲು ಹೋಗಿ ದುರಂತ..! -ಜಲಪಾತದಲ್ಲಿ ಜಾರಿ ಬಿದ್ದ ಯುವಕ..! – ನೀರಿನಲ್ಲಿ ಇಂಥಾ ಹುಚ್ಚಾಟ ಬೇಡವೇ ಬೇಡ..!

ರೀಲ್ಸ್ ಮಾಡಲು ಹೋಗಿ ದುರಂತ..! -ಜಲಪಾತದಲ್ಲಿ ಜಾರಿ ಬಿದ್ದ ಯುವಕ..! – ನೀರಿನಲ್ಲಿ ಇಂಥಾ ಹುಚ್ಚಾಟ ಬೇಡವೇ ಬೇಡ..!

ಮಳೆಗಾಲದಲ್ಲಿ ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುವುದು. ಜಲಪಾತಗಳು ಧುಮ್ಮಿಕ್ಕಿ ಭೋರ್ಗೆರೆಯುವುದು ಸಾಮಾನ್ಯ. ಇಂಥಾ ಸಮಯದಲ್ಲಿ ನೀರಿನ ಜೊತೆ ಹುಚ್ಚಾಟ ಆಡಬೇಡಿ ಎಂದು ಪದೇ ಪದೇ ಮನವಿ ಮಾಡಿದರೂ ಕೂಡಾ ಈಗಿನ ಮಂದಿ ಅದ್ಯಾಕೋ ಏನೋ ಜೀವಕ್ಕೂ ಬೆಲೆಕೊಡುವುದಿಲ್ಲ. ನೀರಿನ ಅಪಾಯಮಟ್ಟವನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಇನ್ನು ಕೆಲವರಿಗಂತೂ ರೀಲ್ಸ್ ಹುಚ್ಚು. ಇದೀಗ ರೀಲ್ಸ್ ಮಾಡಲು ಹೋಗಿ, ನೀರಲ್ಲಿ ಹುಚ್ಚಾಟ ತೋರಲು ಹೋಗಿ ಅಮೂಲ್ಯ ಜೀವವೊಂದು ಹೊರಟು ಹೋಗಿದೆ. ಜಲಪಾತದ ಬಳಿ ರೀಲ್ಸ್ ಮಾಡಲು ಹೋದಾಗ ಜಾರಿಬಿದ್ದು ಯುವಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ಯುವಕನ ಕೊನೇ ಕ್ಷಣಗಳು ಸ್ನೇಹಿತನ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣನ ಆರ್ಭಟ – ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ದುರಂತ ನಡೆದಿದೆ. ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ರೀಲ್ಸ್ ಮಾಡಲು ಹೋಗಿ ಜಾರಿ ಜಲಪಾತಕ್ಕೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಭದ್ರಾವತಿ ಮೂಲದ 23 ವರ್ಷದ ಯುವಕ ಶರತ್ ಕುಮಾರ್ ಮೃತಪಟ್ಟ ದುರ್ದೈವಿ. ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದಾಗ ಈ ದುರಂತ ನಡೆದಿದ್ದು, ಯುವಕ ಜಲಪಾತದಲ್ಲಿ ಬೀಳುತ್ತಿರುವ ದ್ರಶ್ಯ ಮತ್ತೊಬ್ಬ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸುತ್ತಿದ್ದು,  ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

suddiyaana