ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಶೂಟಿಂಗ್‌ನಲ್ಲಿ ದುರಂತ – ಕಲಾ ವಿಭಾಗದ ಸಿಬ್ಬಂದಿ ಸಾವು

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಶೂಟಿಂಗ್‌ನಲ್ಲಿ ದುರಂತ – ಕಲಾ ವಿಭಾಗದ ಸಿಬ್ಬಂದಿ ಸಾವು

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಸೆಟ್‌ನಲ್ಲಿ ದುರಂತ ಸಂಭವಿಸಿದೆ. 28 ವರ್ಷದ ಕಲಾ ವಿಭಾಗದ ಸಿಬ್ಬಂದಿ ಕಾರ್ತಿಕೇಯನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ನಿನ್ನ ಮತ್ತೆ ನೋಡುವ ತನಕ ಶಾಂತಿಯಿಲ್ಲ – ದಿಲೀಪ್ ರಾಜ್ ಅಗಲಿಕೆ ನಂತರ ಶ್ರೀವಿದ್ಯಾ ಮೊದಲ ಪೋಸ್ಟ್

ಸೂಪರ್ ಸ್ಟಾರ್ ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಜೈಲರ್ 2 ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಜೈಲರ್ 2 ಸಿನಿಮಾ ಸೆಟ್‌ನಲ್ಲಿ ಅನಾಹುತ ಸಂಭವಿಸಿದೆ. ಚಿತ್ರದ ಕಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಕಾರ್ತಿಕೇಯನ್ ಎಂಬ ಯುವಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ಚೆನ್ನೈನ ಪಣಯೂರ್‌ನಲ್ಲಿರುವ ಖಾಸಗಿ ಸ್ಟುಡಿಯೋವೊಂದರಲ್ಲಿ ಚಿತ್ರದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದವು. ಮನೆಯ ಮಾದರಿಯ ಸೆಟ್ ನಿರ್ಮಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಾಗಿ ಕಾರ್ತಿಕೇಯನ್‌ಗೆ ತೀವ್ರವಾಗಿ ಶಾಕ್ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಈ ಕುರಿತು ಕಾನತ್ತೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಜೈಲರ್ ಮೊದಲ ಭಾಗದಲ್ಲಿ ಶಿವಣ್ಣ ಅವರ ಅತಿಥಿ ಪಾತ್ರ ಇಡೀ ಸಿನಿಮಾಕ್ಕೆ ಒಂದು ದೊಡ್ಡ ಮೈಲೇಜ್ ನೀಡಿತ್ತು. ಥಿಯೇಟರ್‌ನಲ್ಲಿ ಶಿವಣ್ಣನ ಎಂಟ್ರಿಗೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡ ಬೆರಗಾಗಿತ್ತು. ಹೀಗಾಗಿ, ‘ಜೈಲರ್ 2’ ಚಿತ್ರದಲ್ಲೂ ಶಿವಣ್ಣ ಅವರ ಪಾತ್ರ ಮುಂದುವರಿಯಲಿದ್ದು, ಸೀಕ್ವೆಲ್‌ನಲ್ಲಿ ಅವರ ಪಾತ್ರ ಇನ್ನಷ್ಟು ಹೈಲೈಟ್ ಆಗಲಿದೆ. ‘ಜೈಲರ್ 2’ ಸಿನಿಮಾ ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆಯಂತೆ. ಸನ್ ಪಿಕ್ಚರ್ಸ್ ಸಂಸ್ಥೆಯು ಶೀಘ್ರದಲ್ಲೇ ರಿಲೀಸ್ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮೊದಲಾದವರು ನಟಿಸುತ್ತಿದ್ದಾರೆ.

Sulekha

Leave a Reply

Your email address will not be published. Required fields are marked *