ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರಾ? – ಈ ದಿನದೊಳಗೆ ದಂಡ ಪಾವತಿಸಿದ್ರೆ 50% ರಿಯಾಯಿತಿ!

ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರಾ? – ಈ ದಿನದೊಳಗೆ ದಂಡ ಪಾವತಿಸಿದ್ರೆ 50% ರಿಯಾಯಿತಿ!

ಬೆಂಗಳೂರು: traffic-fine-50-percent-discount. ತಿಳಿದೋ ತಿಳಿಯದೆಯೋ ಸಂಚಾರಿ ನಿಯಮ ಆಗಾಗ ಉಲ್ಲಂಘಿಸುತ್ತೇವೆ. ಆದರೆ ದಂಡ ಪಾವತಿಸುವಷ್ಟರ ಹೊತ್ತಿಗೆ ಜೇಬು ಖಾಲಿಯಾಗೋದಂತು ಪಕ್ಕಾ. ಇದೀಗ ನಿಯಮ ಉಲ್ಲಂಘಿಸಿರುವವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯಿತಿ ನೀಡಿದೆ.

ಇ – ಚಲನ್ ಮೂಲಕ ವಿಧಿಸಿದ್ದ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವವರು ಮತ್ತು ಪ್ರಕರಣ ಕೋರ್ಟ್ ನಲ್ಲಿ ಇದ್ದರೆ ಅಂತಹವರು ಇದೇ ಫೆಬ್ರವರಿ 11ರೊಳಗೆ ದಂಡ ಪಾವತಿಸಿದರೆ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ (traffic-fine-50-percent-discount.) ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಶುದ್ಧ ಗಾಳಿಗಾಗಿ 140 ಕೋಟಿ ರೂಪಾಯಿಗಳ ಯೋಜನೆ- ಸರ್ಕಾರದಿಂದ ಸಿಕ್ತು ಅನುಮೋದನೆ

ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಸರ್ಕಾರಕ್ಕೆ ದಂಡ ಕಡಿತಗೊಳಿಸುವ ಕುರಿತು ಈ ಹಿಂದೆ ಮನವಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ, ಕಾನೂನು‌ ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ ಬಿ.ವೀರಪ್ಪರವರ ನೇತೃತ್ವದಲ್ಲಿ ಜ.27 ರಂದು ಸಭೆ ನಡೆಸಿ ನಿರ್ಣಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 2.35 ಕೋಟಿ ಪ್ರಕರಣ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರಿಂದ 1,144 ಕೋಟಿ ರೂ. ದಂಡ ಮೊತ್ತ ಬಾಕಿಯಿದೆ. ಆದ್ದರಿಂದ ಇ-ಚಲನ್ ಮೂಲಕ ದಂಡ ಕಟ್ಟದೆ ಬಾಕಿ ಉಳಿಸಿಕೊಂಡವರು ಇನ್ನಾದರೂ ದಂಡ ಪಾವತಿಸಲಿ ಎಂದು ಈ ಆದೇಶ ಹೊರಡಿಸಲಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ನೆರೆಯ ರಾಜ್ಯ ತೆಲಂಗಾಣದಲ್ಲಿ ಸಾಲ ಮೇಳದ ಮಾದರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಿಯಾಯಿತಿ ಮೇಳ ಆಯೋಜಿಸಲಾಗಿತ್ತು. ಈ ರಿಯಾಯಿತಿ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿತ್ತು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಸಾರಿಗೆ ಇಲಾಖೆ ಆಯುಕ್ತರು ಈ ಮಾದರಿ ಅನುಸರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

suddiyaana