ಡೈರೆಕ್ಟ್ ಡೀಲ್.. 8 ಜನ ಟ್ರೇಡ್ – ಸಂಜು, ಜಡ್ಡು, ಶಮಿ.. ಯಾರೆಲ್ಲಾ?
ಸ್ಟಾರ್ಸ್ ನೇ ಬಿಟ್ಟಿದ್ದೇಕೆ ಫ್ರಾಂಚೈಸಿಗಳು?

2026ರ ಐಪಿಎಲ್ ಅಖಾಡ ರಂಗೇರೋಕೆ ಶುರುವಾಯ್ತು. ಅದ್ರಲ್ಲೂ ಈ ಸಲ ಸ್ಟಾರ್ ಪ್ಲೇಯರ್ಗಳೇ ತಂಡಗಳನ್ನ ಚೇಂಜ್ ಮಾಡ್ತಿದ್ದು ನೆಕ್ಸ್ಟ್ ಸೀಸನ್ ತುಂಬಾನೇ ಸ್ಪೆಷಲ್ ಆಗಿರುತ್ತೆ. ಕೆಲ ಫ್ರಾಂಚೈಸಿಗಳು ತಮ್ಮ ತಂಡದ ಐಕಾನಿಕ್ ಪ್ಲೇಯರ್ಗಳನ್ನೇ ಟ್ರೇಡ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್ನಲ್ಲಿ 4 ಸಾವಿರ ರನ್ ಪೂರೈಸಿದ ಕೆ.ಎಲ್ ರಾಹುಲ್
19ನೇ ಸೀಸನ್ ಐಪಿಎಲ್ಗೂ ಮುನ್ನ ಮಿನಿ ಆಕ್ಷನ್ ನಡೆಯಲಿದ್ದು ಫ್ರಾಂಚೈಸಿಗಳಿಂದ ಒಂದಷ್ಟು ಆಟಗಾರರು ಹೊರ ಬರ್ತಾರೆ. ಬಟ್ ಅದಕ್ಕೂ ಮುನ್ನವೇ ಟ್ರೇಡ್ ವಿಂಡೋ ಮೂಲಕ ಡೈರೆಕ್ಟ್ ಆಗಿ ಫ್ರಾಂಚೈಸಿಗಳ ನಡುವೆ ಡೀಲ್ ಆಗಿ ಆಟಗಾರರನ್ನ ಜಾಯ್ನ್ ಮಾಡಿಕೊಂಡಿದ್ದಾರೆ. ಅದ್ರಲ್ಲೂ ದೊಡ್ಡ ದೊಡ್ಡ ಆಟಗಾರರನ್ನೇ ಕೆಲ ಫ್ರಾಂಚೈಸಿಗಳು ಬಿಟ್ಟುಕೊಟ್ಟಿದ್ದಾರೆ.
ಟ್ರೇಡ್ ಡೀಲ್ ಪ್ಲೇಯರ್ಸ್!
ಆಟಗಾರ ಮೂಲ ತಂಡ ಹೊಸ ತಂಡ ಸಂಭಾವನೆ
ರವೀಂದ್ರ ಜಡೇಜಾ ಚೆನ್ನೈ ರಾಜಸ್ಥಾನ ₹14 ಕೋಟಿ
ಸಂಜು ಸ್ಯಾಮ್ಸನ್ ರಾಜಸ್ಥಾನ ಚೆನ್ನೈ ₹18 ಕೋಟಿ
ಸ್ಯಾಮ್ ಕರ್ರನ್ ರಾಜಸ್ಥಾನ ಚೆನ್ನೈ ₹2.4 ಕೋಟಿ
ಮೊಹಮ್ಮದ್ ಶಮಿ ಹೈದರಾಬಾದ್ ಲಕ್ನೋ ₹10 ಕೋಟಿ
ಮಯಾಂಕ್ ಮಾರ್ಕಂಡೆ ಕೊಲ್ಕತ್ತಾ ಮುಂಬೈ ₹30 ಲಕ್ಷ
ಅರ್ಜುನ್ ತೆಂಡೂಲ್ಕರ್ ಮುಂಬೈ ಲಕ್ನೋ ₹30 ಲಕ್ಷ
ನಿತೀಶ್ ರಾಣಾ ರಾಜಸ್ಥಾನ ಡೆಲ್ಲಿ ₹4.2 ಕೋಟಿ
ಡೊನೋವನ್ ಫೆರೆರಾ ಡೆಲ್ಲಿ ರಾಜಸ್ಥಾನ್ ₹1ಕೋಟಿ
ಇಷ್ಟು ಪ್ಲೇಯರ್ಸ್ ಮಿನಿ ಆಕ್ಷನ್ಗೆ ಬರದೇ ಟ್ರೇಡ್ ಡೀಲ್ ಮೂಲಕವೇ ಬೇರೆ ಬೇರೆ ಫ್ರಾಂಚೈಸಿಗಳನ್ನ ಸೇರ್ಕೊಂಡಿದ್ದಾರೆ. ಅದ್ರಲ್ಲೂ ಬಿಗ್ ಸ್ಟಾರ್ಸ್ ತಂಡದಿಂದ ಹೊರಬಿದ್ದಿರೋದು ಅಚ್ಚರಿ ಮೂಡಿಸಿದೆ.

ನೋಡಿರಿ

