ಕಾರ್ ಸೀನ್ ಆಯ್ತು.. ಈಗ ** ಮಾತು! – It’s Over.. ಯಶ್ಗೆ ಏನಾಯ್ತು?
ಟಾಕ್ಸಿಕ್ನಲ್ಲಿ ರಾಯ.. ರೂಮಿ ದರ್ಬಾರ್!

ಯಶ್ ಫ್ಯಾನ್ಸ್ ಕಾತುರತೆಗೆ ಕಡೆಗೂ ಬ್ರೇಕ್ ಬಿದ್ದಿದೆ. ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಟಾಕ್ಸಿಕ್ ಪ್ರಪಂಚದ ಝಲಕ್ ಹೊರ ಬಂದಿದೆ.. ಇನ್ನೇನಿದ್ರೂ ರಾಯನದ್ದೇ ದರ್ಬಾರ್.. ವೈಲೆಂಟ್ ರಾಯನಾಗಿ ಟಾಕ್ಸಿಕ್ನಲ್ಲಿ ಯಶ್ ಘರ್ಜನೆ ಮಾಡಿದ್ದಾರೆ. 1 ನಿಮಿಷ 55 ಸೆಕೆಂಡ್ ಇರುವ ಟಾಕ್ಸಿಕ್ ಟೀಸರ್ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು! – ಏನಾಯ್ತು?
ಕೆಜಿಎಫ್-2 ಬಳಿಕ ಮುಂದೇನು ಅಂತ ಕೇಳ್ತಿದ್ದವರಿಗೆ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಮೂಲಕ ಉತ್ತರ ಕೊಡಲು ಸಜ್ಜಾಗಿದ್ದಾರೆ. ಮಾರ್ಚ್ 19 ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ಇದೀಗ ಟಾಕ್ಸಿಕ್ ನ ಆಕ್ಷನ್ ಪ್ಯಾಕ್ಡ್ ಟೀಸರ್ ಧೂಳೆಬ್ಬಿಸಿದೆ. ಇಟ್ಸ್ ಓವರ್.. ವೆನ್ ಐ ಸೇ.. ಇಟ್ಸ್ ಓವರ್ ಎನ್ನುತ್ತಾ ಯಶ್ ಡುಯೆಲ್ ಶೇಡ್ನಲ್ಲಿ ದರ್ಶನ ಕೊಟ್ಟಿದ್ದಾರೆ.
ಹೌದು, ಈ ಹಿಂದೆ ರಿಲೀಸ್ ಆಗಿದ್ದ ಯಶ್ ಅವರ ಕ್ಯಾರೆಕ್ಟರ್ ಟೀಸರ್ ದೊಡ್ಡ ಹಿಟ್ ಆಗಿತ್ತು. ಇದೀಗ ರಿಲೀಸ್ ಆದ ಟೀಸರ್ನಲ್ಲೂ ಯಶ್ ಫುಲ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಲ ಯುದ್ಧವೇ ಬೇರೆ ಅನ್ನೋ ಡೈಲಾಗ್ ಮೂಲಕ ಶುರುವಾಗುತ್ತೆ ಟೀಸರ್ ಶುರುವಾಗಿದೆ. ಅಲ್ಲಿಂದ ಫೈರಿಂಗ್ ಸೌಂಡ್, ರಕ್ತ, ಆಕ್ಷನ್, ಫೈಟ್ ದೃಶ್ಯಗಳೇ ಕಾಣಿಸಿಕೊಳ್ಳುತ್ತೆ. ಈ ಮೂಲಕ ಚಿತ್ರದ ಜಬರ್ದಸ್ತ್ ಸನ್ನಿವೇಶಗಳನ್ನು ಮಿಕ್ಸ್ ಮಾಡಿ ಟೀಸರ್ ಕಟ್ ಮಾಡಲಾಗಿದೆ. ಅದಕ್ಕೆ ರವಿ ಬಸ್ರೂರು ಹಂಟಿಂಗ್ ಬಿಜಿಎಂ ಸೇರಿಸಲಾಗಿದೆ. ಮೇಕಿಂಗ್, ವಿಷ್ಯುವಲ್ಸ್ ಎಲ್ಲವೂ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. ಯಶ್ ನಾನಾ ಗೆಟಪ್ಗಳಲ್ಲಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. ರೆಟ್ರೋ ಶೈಲಿಯಲ್ಲಿ ಟಾಕ್ಸಿಕ್ ಸಿನಿಮಾ ಮೂಡಿ ಬರ್ತಿರೋದು ಗೊತ್ತಾಗುತ್ತಿದೆ.
ಟಾಕ್ಸಿಕ್ ಸಿನಿಮಾದಲ್ಲಿ 60-70ರ ದಶಕದ ಗೋವಾಗ ಹಿನ್ನೆಲೆಯ ಕಥೆಯನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ರಕ್ತಸಾಗರ ಹರಿಸೋ ರಾಯ ಡುಯಲ್ ಶೇಡ್ ದರ್ಶನವಾಗುತ್ತೆ. ಒಂದ್ಕಡೆ ಗಡ್ಡ ಬಿಟ್ಟಿರೋ ಲುಕ್ ಇದ್ರೆ, ಇನ್ನೊಂದ್ಕಡೆ ಯಶ್ ಕ್ಲೀನ್ ಶೇವ್ ನಲ್ಲಿ ಸಿಕ್ಕಾಪಟ್ಟೆ ಯಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಯ, ರೂಮಿ ಎಂಬ ಎರಡು ಪಾತ್ರದಲ್ಲಿ ಯಶ್ ನಟಿಸಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇನ್ನು ಈ ಸಲ ಯುದ್ಧಾನೇ ಬೇರೆ ಅನ್ನೋ ಡೈಲಾಗ್ ಮೂಲಕ ಶುರುವಾದ ಟೀಸರ್, ಮುಂದೆ ರಾಯಲ್ ಸರ್ಕಸ್ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಎಲ್ಲರನ್ನು ಎದುರಾಕಿಕೊಂಡು ಗೆಲ್ಲೋಕೆ ಆಗಲ್ಲ, ಬಿಟ್ಟುಕೊಟ್ಟುಬಿಡು ರಾಯ.. ಎಲ್ಲಾ ಮುಗೀತು ಎನ್ನುವ ಹಿನ್ನೆಲೆ ಧ್ವನಿ ಕೇಳಿಸುತ್ತದೆ. ಆಗ ರಾಯನ ಪರಿಚಯವಾಗುತ್ತದೆ. ಎಲ್ಲಾ ಮುಗೀತು ನಿಜ.. ಆದರೆ ನಾನು ಹೇಳಿದಾಗ.. ಅಲ್ಲಿವರೆಗೂ ಸ್ವಲ್ಪ ಸಭ್ಯತೆ, ಗೌರವ ಇರಲಿ ಎಂದು ರಾಯ ಹೇಳಿದ್ದಾನೆ. ಟೀಸರ್ ಕೊನೆಗೆ ಯಶ್ ಯಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಕತ್ತಿ ಹಿಡಿದು ಅಬ್ಬರಿಸಿ, ಮರ ಕತ್ತರಿಸುವ ಯಂತ್ರ ಬಳಸಿ ಮನುಷ್ಯನ ತಲೆ ಕತ್ತರಿಸುವಷ್ಟು ಕಿರಾತಕನಾಗಿ ಐ ಯ್ಯಾಮ್ ಹೋಮ್ ಡ್ಯಾಡಿ ಎನ್ನುವ ಡೈಲಾಗ್ ಪ್ಲೇ ಆಗಿದೆ. ಇನ್ನು ಈ ಹಿಂದಿನ ಟೀಸರ್ನಲ್ಲಿ ಕಾರ್ ಸೀನ್ ಸಂಚಲನ ಮೂಡಿಸಿತ್ತು. ಆದ್ರೆ ಈ ಬಾರಿ ಯಶ್ ಡೈಲಾಗ್ ಚರ್ಚೆಗೆ ಗ್ರಾಸವಾಗಿದೆ.
ಟಾಕ್ಸಿಕ್ ಟೀಸರ್ನಲ್ಲಿ ಪ್ರತಿಯೊಂದು ಸೀನ್ ಕೂಡಾ ಅದ್ಭುತವಾಗಿದೆ ಮೂಡಿಬಂದಿದೆ. ಸಿನಿಮಾದ ಮೇಕಿಂಗ್, ಕ್ಯಾಮರಾ ವರ್ಕ್ ಗೆ ಸಿನಿಮಾ ಪ್ರೇಮಿಗಳು ಔಟ್ ಆಫ್ ಔಟ್ ಮಾರ್ಕ್ ಕೊಟ್ಟಿದ್ದಾರೆ. ಇನ್ನೂ ಪಾತ್ರವರ್ಗ ಬಗ್ಗೆ ಹೇಳೋದೇ ಬೇಡ ಪ್ರತಿಯೊಬ್ಬರ ಆಕ್ಟಿಂಗ್ ಕೂಡ ಸೂಪರ್ ಆಗಿ ಮೂಡಿ ಬಂದಿದೆ. ಗೀತು ಮೋಹನ್ ದಾಸ್ ಟಾಕ್ಸಿಕ್ ನಿರ್ದೇಶನ ಮಾಡಿದ್ದು, ನಿರ್ದೇಶಕಿ ಜೊತೆ ಯಶ್ ಕೂಡ ಸೇರಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಹಾಗಾಗಿ ಈ ಸಿನಿಮಾ ಬಗ್ಗೆ ವೀಕ್ಷಕರು ಡಬಲ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾರ್ಚ್ 19ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅಂದೇ ಧುರಂಧರ್-2 ಕೂಡ ರಿಲೀಸ್ ಆಗಲಿದ್ದು, ಟಾಕ್ಸಿಕ್ ಸಿನಿಮಾ ಧುರಂದರ್ 2 ಗೆ ಟಕ್ಕರ್ ಕೊಡೋದು ಫಿಕ್ಸ್ ಆಗಿದೆ.

ನೋಡಿರಿ

