ಹವಾ ಎಬ್ಬಿಸಿದ ಟಾಕ್ಸಿಕ್ – ಕಾರ್ ಸೀನ್ ಬೇಕಿತ್ತಾ?

ಲಾಂಗ್ ಗ್ಯಾಪ್.. ಹೈ ಎಕ್ಸ್ಪೆಕ್ಟೇಷನ್ಸ್.. ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸ್ಟೈಲಲ್ಲಿ ಟೀಸರ್ ಮೂಲಕ ಫ್ಯಾ ನ್ಸ್ ಮುಂದೆ ಬಂದಾಯ್ತು. ಬರೋಬ್ಬರಿ 4 ವರ್ಷದಿಂದ ಯಶ್ಗಾಗಿ ಕಾಯ್ತಿದ್ದ ಅಭಿಮಾನಿಗಳು ಈ ಟೀಸರ್ ನೋಡಿದ್ಮೇಲೆ ಕನ್ಫ್ಯೂಸ್ ಆಗಿದ್ದಾರೆ. ಮೇಕಿಂಗ್ ನೋಡಿ ವ್ಹಾವ್ ಅನ್ಬೇಕಾ ಕಾರ್ ಸೀನ್ ನೋಡಿ ಸುಮ್ನಾಗಬೇಕಾ ಅನ್ನೋ ಗೊಂದಲದಲ್ಲಿದ್ದಾರೆ.
ಟಾಕ್ಸಿಕ್ ಸಿನಿಮಾ. ಸ್ಯಾಂಡಲ್ವುಡ್ನಲ್ಲಿ ಈ ಸಿನಿಮಾ ಟಾಕ್ ಶುರುವಾಗಿಯೇ ಮೂರು ನಾಲ್ಕು ವರ್ಷಗಳೇ ಕಳೆದಿರಬಹುದು. ಕೆಜಿಎಫ್ ಸಕ್ಸಸ್ ನಂತರ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ರು. ಹತ್ರಹತ್ರ ನಾಲ್ಕು ವರ್ಷಗಳಿಂದ ಯಶ್ ತೆರೆಮೇಲೆ ಬಂದಿಲ್ಲ ಅನ್ನೋದು ಕೂಡಾ ಸತ್ಯವೇ. ಇವತ್ತು ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ. ಇದೇ ಖುಷಿಯಲ್ಲಿ ಯಶ್ ಫ್ಯಾನ್ಸ್ ಗೆ ಸರ್ಪ್ರೈಸ್ ಸಿಕ್ಕಿದೆ. ಅದುವೇ ಟಾಕ್ಸಿಕ್ ಸಿನಿಮಾದ ಟೀಸರ್. ಈ ಬಗ್ಗೆ ಹೇಳಲೇಬೇಕು. ಇದು ಸ್ಯಾಂಡಲ್ವುಡ್ ಮಟ್ಟಿಗೆ EXTRA ಲೆವೆಲ್. ಹಾಲಿವುಡ್ ಸಿನಿಮಾದ ಯಾವ ಟೀಸರ್ಗೂ ಕಡಿಮೆಯಿಲ್ಲ. ಬಟ್.. ಈ ಸಿನಿಮಾ ನಿಜಕ್ಕೂ ದೊಡ್ಡವರಿಗೆ ಮಾತ್ರಾನಾ.. 18 ವರ್ಷದ ಒಳಗಿನವರು ನೋಡುವ ಹಾಗಿಲ್ವಾ.. ? ಈ ಪ್ರಶ್ನೆ ಟೀಸರ್ ನೋಡಿದ ಪ್ರತಿಯೊಬ್ಬರನ್ನೂ ಕಾಡುತ್ತಿದೆ.
ಇದನ್ನೂ ಓದಿ: ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಡಾಕ್ಟರ್ ಜೀ ನೆನಪು ಮಾತ್ರ – ಡಾ. ಚಂದ್ರಶೇಖರ್ ಉಡುಪರಿಗೆ ಭಾವುಕ ವಿದಾಯ
ಥೇಟ್ ಹಾಲಿವುಡ್ ಸಿನಿಮಾ ಗೆಟಪ್ನಲ್ಲಿ ಒಂದೊಂದು ಸೀನ್ ಕಂಡಿದೆ. ಹಸಿ-ಬಿಸಿ ದೃಶ್ಯ ಮಾತ್ರ ಮಕ್ಕಳ ಮುಂದೆ ನೋಡೋಕ್ಕಂತೂ ಆಗಲ್ಲ. ಯಶ್, ‘ಕೆಜಿಎಫ್’ ಸಿನಿಮಾಕ್ಕಿಂತಲೂ ಹೆಚ್ಚು ರಗಡ್ ಆಗಿ ಟಾಕ್ಸಿಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಗಾಗಿ ವಿಲನ್ ಸರ್ಚ್ ಮಾಡುತ್ತಿರುತ್ತಾರೆ. ಮುಂದೆಯೇ ಕಾರ್ ಇದೆ. ಕಾರೊಳಗೆ ಕಂಡು ಬರುವ ಆ ಸೀನ್ ಮಾತ್ರ ಟೀಸರ್ ಗೆ ಅವಶ್ಯಕತೆ ಇತ್ತಾ ಅನ್ನೋ ಪ್ರಶ್ನೆ ದೊಡ್ಡವರನ್ನು ಕಾಡುತ್ತಿದೆ. ಯಾಕೆಂದರೆ, 18 ವರ್ಷದೊಳಗಿನ ಯಶ್ ಫ್ಯಾನ್ಸ್ ಗೆ ಖಂಡಿತಾ ಈ ಟೀಸರ್ ತೋರಿಸೋಹಾಗಿಲ್ಲ. ಸ್ಮಶಾನದ ಮುಂದೆ ಕಾರಿನಲ್ಲಿ ಲೇಡಿ ಜೊತೆ ಯಶ್ ಇರುವ ರೀತಿ ನೋಡಿದ್ರೆ ಇದು ಓನ್ಲಿ ಫಾರ್ ಅಡಲ್ಟ್ಸ್ ಗೆ ಅನ್ನೋ ಹಾಕಿದೆ.
ಟಾಕ್ಸಿಕ್ ಹೀರೋ ರಾಯ ಅನ್ನೋ ಹೆಸ್ರಲ್ಲಿ ಯಶ್ ಅವರನ್ನ ಇಂಟ್ರಡ್ಯೂಸ್ ಮಾಡಲಾಗಿದೆ. ರಾಯ ಪಾತ್ರದ ‘ಶಕ್ತಿ’ಯನ್ನು ಈ ರೀತಿ ತೋರಿಸಿದ್ದಾರೆ ಡೈರೆಕ್ಟರ್. ಕಳೆದ ವರ್ಷ ಬಿಡುಗಡೆ ಆಗಿದ್ದ ಟೀಸರ್ನಲ್ಲಿ ಸಾಕಷ್ಟು ವಿದೇಶಿ ಯುವತಿಯರು ಅರೆನಗ್ನರಾಗಿ, ಮಾದಕ ನೃತ್ಯ ಮಾಡುತ್ತಿರುವ ದೃಶ್ಯಗಳಿದ್ವು. ‘ಟಾಕ್ಸಿಕ್’ ಸಿನಿಮಾದ ಅಡಿಬರಹದಲ್ಲೇ ಇದು ಮಕ್ಕಳಿಗೆ ಅಥವಾ ಅಪ್ತಾಪ್ತರಿಗಲ್ಲ ಎಂಬ ಸುಳಿವು ಸಿಕ್ಕಿದೆ. ‘ಟಾಕ್ಸಿಕ್’ ಸಿನಿಮಾದ ಟ್ಯಾಗ್ಲೈನ್ ‘ಎ ಫೇರಿ ಟೇಲ್ ಆಫ್ ಗ್ರೋನ್ ಅಪ್ಸ್’ ಅಂದರೆ, ಒಂದು ದೊಡ್ಡವರ ಕತೆ ಎಂದಿದೆ. ಈ ಸಿನಿಮಾದಲ್ಲಿ ಫೈಟಿಂಗ್, ಹೀರೋಯಿಸಂ ಜೊತೆಗೆ ಹಸಿ-ಬಿಸಿ ದೃಶ್ಯಗಳು ಸಾಕಷ್ಟಿವೆ ಅನ್ನೋದನ್ನ ಈ ಟ್ಯಾಗ್ಲೈನ್ ಹೇಳ್ತಿದೆ.ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗ್ತಿದೆ. ಈ ಸಿನಿಮಾಗೆ ಎ ಸರ್ಟಿಫಿಕೇಟ್ ಸಿಗೋದ್ರಲ್ಲಿ ನೋ ಡೌಟ್. ಅದೇನೇ ಆದ್ರೂ ಫ್ಯಾನ್ಸ್ ಇದುವರೆಗೂ ಯಶ್ ರನ್ನ ಈ ಲುಕ್ನಲ್ಲಿ ನೋಡಿಲ್ಲ. ಇದೇ ಮೊದಲ ಬಾರಿಗೆ ಯಶ್ ದೊಡ್ಡವರ ಚಿತ್ರದ ಮೂಲಕ ಭರ್ಜರಿ ಎಂಟ್ರಿಕೊಡ್ತಿದ್ದಾರೆ. ಬರ್ತಡೇ ಗಿಫ್ಟ್ ಆಗಿ ರಿಲೀಸ್ ಆಗಿರೋ ಟೀಸರ್ ಕೂಡಾ ಮಿಲಿಯನ್ ಗಟ್ಟಲೆ ವೀವ್ಸ್ ಪಡೀತಿದೆ.

ನೋಡಿರಿ

