3 ಗಂಟೆ.15 ನಿಮಿಷವೂ ಡಾರ್ಕ್ ಆ್ಯಕ್ಷನ್! ಫಿಲ್ಮಿಂ ಇಂಡಸ್ಟ್ರಿಗೆ BIG ಡ್ಯಾಡಿ ಟಾಕ್ಸಿಕ್

ಟಾಕ್ಸಿಕ್‌ನಲ್ಲಿ ಸ್ಟೈಲ್ ಇದೆ. ವೈಲೆನ್ಸ್ ಇದೆ. ಗ್ಲಾಮಾರ್ ಇದೆ. ಬೋಲ್ಡ್ ಸೀನ್ ಇದೆ. ಯಶ್ ಇದ್ದಾರೆ. ಇಷ್ಟೆಲ್ಲಾ ಇದೆ ಅಂದ್ರೂ ಮೇಲೆ ಕಥೆ ಕೂಡ ಇದ್ದೇ ಇರುತ್ತೆ. ಕಥೆ ಏನು ಅನ್ನೋದ್ದು ನಮ್ಗೆ ಇದೇ ಆಗಸ್ಟ್26ಕ್ಕೆ ಗೊತ್ತಾಗುತ್ತೆ.. ರಿಲೀಸ್‌ಗೆ ಇನ್ನೂ 10 ದಿನ ಬಾಕಿ ಇರುವಾಗಲೇ ಟಾಕ್ಸಿಕ್ ಫುಲ್ ಹವಾಳಿ ಇಡ್ತಿದೆ.
ಟಾಕ್ಸಿಕ್‌ಗೆ ಸಿಕ್ಕಿದೆ ‘A’ ಸರ್ಟಿಫಿಕೇಟ್
ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧಿಕೃತವಾಗಿ ‘ಎ’ ಸರ್ಟಿಫಿಕೇಟ್ ನೀಡಿದೆ. ಚಿತ್ರದ ಮೂಲ ಕನ್ನಡ ಆವೃತ್ತಿಯನ್ನು ವೀಕ್ಷಿಸಿದ ಬೆಂಗಳೂರು ಸೆನ್ಸಾರ್ ಮಂಡಳಿಯು ಈ ಆಫಿಷಿಯಲ್ ಕ್ಲಿಯರೆನ್ಸ್ ನೀಡಿದೆ. ಸಿನಿಮಾವು ಒಟ್ಟು ಮೂರು ಗಂಟೆ 14 ನಿಮಿಷಗಳ ದೀರ್ಘಾವಧಿಯನ್ನು ಹೊಂದಿದೆ. ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆಯೇ ಟಿಕೆಟ್ ಬುಕಿಂಗ್ ಆ್ಯಪ್‌ಗಳು ಮುಂಗಡ ಬುಕಿಂಗ್ ಆರಂಭಿಸಲು ಹಾದಿ ಸುಗಮವಾಗಿದ್ದು, ಪ್ರದರ್ಶನದ ಆನ್‌ಲೈನ್ ಟಿಕೆಟ್‌ಗಳಿಗಾಗಿ ದೇಶಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಮ್ಮ ಮೆಟ್ರೋದಲ್ಲಿ ಟಾಕ್ಸಿಕ್ ಹವಾ
ಈ ಎಲ್ಲದರ ನಡುವೆ ಕೆವಿಎನ್ ಪ್ರೋಡಕ್ಷನ್ಸ್ ಪ್ರಚಾರ ಆರಂಭಿಸಿದೆ. ‘ಟಾಕ್ಸಿಕ್’ ಸಿನಿಮಾ ಟೈಟಲ್ ಸಾಂಗ್ “ಡ್ಯಾಡ್ ಇಸ್ ಹೋಮ್ ಸಿಕ್ಕಾಪಟ್ಟೆ ಪ್ರಸಿದ್ದಿ ಪಡೆದಿದ್ದು, ಇದೇ ಒಂದು ಡೈಲಾಗ್ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋ ಮೇಲೆ ಪೋಸ್ಟರ್‌ಗಳನ್ನ ಅಂಟಿಸಿದ್ದಾರೆ. ಪೋಸ್ಟರ್‌ನಲ್ಲಿ ಯಶ್ ಹೋಮ್ ಎಂದು ನಮೋದಿಸಲಾಗಿದೆ. ಮೆಟ್ರೋದಲ್ಲಿ ವಿಶೇಷವಾಗಿ ಎಲ್ಲಾ ಭಾಷೆಯ ಜನ ಓಡಾಡುತ್ತಾರೆ. ಹೀಗಾಗಿ ಮೆಟ್ರೋದಲ್ಲಿ ಪ್ರಚಾರ ನಡೆಸಲಾಗ್ತಿದೆ. ಪೋಸ್ಟರ್‌ಗಳಲ್ಲಿ ಯಶ್ ಅವರ ಸ್ಟೈಲಿಶ್ ಹಾಗೂ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ ಗನ್ ಹಿಡಿದಿರುವ ಅವರ ಪಾತ್ರದ ಚಿತ್ರಣ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರಿನ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ‘Toxic’ ಮೆಟ್ರೋ ರೈಲುಗಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿದೇಶದಲ್ಲೂ ಟಾಕ್ಸಿಕ್ ಖದರ್ ಜೋರು
‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್‌ನಲ್ಲಿ ಉತ್ತರ ಅಮೆರಿಕಾದ ಮಾರುಕಟ್ಟೆಗಳು ಮುಂಚೂಣಿಯಲ್ಲಿವೆ. ಅಲ್ಲಿನ ಪ್ರೀಮಿಯರ್ ಶೋಗಳ ಮುಂಗಡ ಟಿಕೆಟ್ ಮಾರಾಟ ಈಗಾಗಲೇ **40 ಸಾವಿರ ಡಾಲರ್‌ಗಳ ಗಡಿ ದಾಟಿದೆ** ಎಂದು ವರದಿಯಾಗಿದೆ. ಸಿನಿಮಾ ಇನ್ನೂ ಬಿಡುಗಡೆಯಾಗುವ ಮುನ್ನವೇ ಈ ರೀತಿಯ ಪ್ರತಿಕ್ರಿಯೆ ಸಿಗುತ್ತಿರುವುದು ಯಶ್ ಅವರ ಜಾಗತಿಕ ಅಭಿಮಾನಿ ಬಳಗದ ಸಾಮರ್ಥ್ಯವನ್ನು ತೋರಿಸುತ್ತಿದೆ. ವಿದೇಶಗಳಲ್ಲಿ ಆಗಸ್ಟ್ 25ರಂದು ಪ್ರೀಮಿಯರ್ ಪ್ರದರ್ಶನಗಳು ಆರಂಭವಾಗಲಿವೆ. ಹೀಗಾಗಿ ಭಾರತಕ್ಕಿಂತ ಮುಂಚೆಯೇ ವಿದೇಶಿ ಅಭಿಮಾನಿಗಳಿಗೆ ‘ಟಾಕ್ಸಿಕ್’ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗಲಿದೆ.
ಸದ್ಯ ಟಾಕ್ಸಿಕ್ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿರುವ ನಟ ಯಶ್ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ರಜತ್ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮವಾದ ‘ಆಪ್ ಕಿ ಅದಾಲತ್’ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಕಾರ್ಯಕ್ರಮದ ಪ್ರೋಮೋ ರಿಲೀಸ್ ಆಗಿದೆ. ಬಾಲಿವುಡ್‌ನ ದಿಗ್ಗಜ ಸೆಲೆಬ್ರಿಟಿಗಳು ಈ ಕಾರ್ಯಕ್ರಮದ ಅತಿಥಿಗಳಾಗುತ್ತಾರೆ. ಈ ಸಾಲಿನಲ್ಲಿ ನಮ್ಮ ಕನ್ನಡದ ನಟ ಯಶ್ ಕೂಡ ಸೇರಿಕೊಂಡಿದ್ದಾರೆ.ಕರ್ನಾಟಕದಿಂದ ಆಪ್ ಕಿ ಅದಾಲತ್ ಕುರ್ಚಿಯಲ್ಲಿ ಕುಳಿತ ಮೊದಲ ಸ್ಟಾರ್ ಎನ್ನುವ ಖ್ಯಾತಿಗೆ ಯಶ್ ಪಾತ್ರರಾಗಿದ್ದಾರೆ. ಈ ಕಾರ್ಯಕ್ರಮ ನಿನ್ನೆ ಶನಿವಾರ ಪ್ರಸಾರವಾಗಿದ್ದು, ಯಶ್‌ಗೆ ಕೇಳಿದ ಪ್ರಶ್ನೆ ಸಖತ್ ವೈರಲ್ ಆಗಿದೆ. ನೀವು ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆದ ಬಳಿಕ, ನೀವು ಹೈಯೆಸ್ಟ್ ಪೇಯ್ಡ್ 50 ಕೋಟಿ ರೂಪಾಯಿ ಒಂದು ಸಿನಿಮಾಕ್ಕೆ ಬೇಕು ಎಂದು ಕೇಳಿದ್ದರಂತೆ ಎನ್ನುವ ಪ್ರಶ್ನೆಗೆ ಆಟಿಟ್ಯೂಡ್‌ನಲಲೇ ಉತ್ತರಿಸಿದ ಯಶ್, ‘ಇಲ್ಲ ಸರ್..ಅದಕ್ಕಿಂತ ಹೆಚ್ಚೇ ಕೇಳಿದ್ದೇ..’ ಎಂದು ಕೆಜಿಎಫ್ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ. ಒಟ್ನಲ್ಲಿ ಟಾಕ್ಸಿಕ್ ಇದೇ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಈ ಟಾಕ್ಸಿಕ್’ ಕಣ್ಣಿಗೆ ಮಾತ್ರ ಹಬ್ಬವಾಗುತ್ತಾ? ಮನಸ್ಸಿಗೂ ಹೊಡೆಯುತ್ತಾ? ಅನ್ನೋದ್ದನ್ನ ನೋಡೋಣ.

ನೋಡಿರಿ

