ಅಕ್ಕನ ತ್ಯಾಗ, ತಮ್ಮನ ಹಠ – ಟಾಕ್ಸಿಕ್ ಅನ್ನೋ ಭ್ರಮೆ! TOXIC FIRST REVIEW

ಅಕ್ಕನ ತ್ಯಾಗ, ತಮ್ಮನ ಹಠ –  ಟಾಕ್ಸಿಕ್ ಅನ್ನೋ ಭ್ರಮೆ! TOXIC FIRST REVIEW

4 ವರ್ಷ..  ₹500 ಕೋಟಿ ಹಣ.. ಸಾವಿರಾರು ತಂತ್ರಜ್ಞರ ಪರಿಶ್ರಮ.. ಇವತ್ತು ತರೆ ಮೇಲೆ ನಮಗೆ ಕಾಣಿಸಿದೆ. 3 ಘಂಟೆ 14 ನಿಮಿಷಗಳ ಟಾಕ್ಸಿಕ್‌ ಸಿನಿಮಾದಲ್ಲಿ ಏನಿದೆ ಅಂದ್ರೆ ಹೇಳುವುದ್ದಕ್ಕೆ ತುಂಬಾ ಇದೆ. ಟಾಕ್ಸಿಕ್ ನಿಜಕ್ಕೂ ಜಗ ಮೆಚ್ಚುವ ಸಿನಿಮಾ ಅಂದ್ರೆ ತಪ್ಪಿಲ್ಲ. ಕನ್ನಡದ ಸಿನಿಮಾ ಹಾಲಿವುಡ್ ರೇಂಜ್‌ಗೆ ಮಾಡಿದ್ದಾರೆ ಅನ್ನೋ ಹೆಮ್ಮೆ ಇದೆ..

ಸಿಂಪಲ್ ಆಗಿ ನೀವು ಈ ಸಿನಿಮಾ ಹೇಗಿದೆ ಅಂತ ಕೇಳಿದ್ರೆ, ಒಬ್ಬ ಕನ್ನಡ ಸಿನಿಮಾ ಫ್ಯಾನ್ ಆಗಿ ಸೂಪರ್ ಆಗಿದೆ ಅಂತ  ಹೇಳಬಹುದು.. ಒಂದು ಸರಿ ನೋಡಬಹುದಾ ಅಂತ ಕೇಳಿದ್ರ, ಖಂಡಿತ ನೋಡಬಹುದು.. ಯಶ್ ಅವರ ಮಾಸ್ ಎಂಟ್ರಿಯಿಂದ ಹಿಡಿದು ಎಂಡ್ ತನಕ ಸಿನಿಮಾ ಏನ್ ಆಗುತ್ತೆ ಅಂತ ನಿಮ್ಮನ್ನ ಕಾಡುತ್ತೆ.. ಕಾತುರದಿಂದ ನೋಡುವಂತೆ ಮಾಡುತ್ತೆ.. ಇಂಡಿಯನ್ ಸಿನಿಮಾರಂಗದಲ್ಲಿಯೇ ಇತಿಹಾಸ ಸೃಷ್ಟಿ ಮಾಡಿದ್ದಾರೆ ಅಂತಲೇ ಹೇಳಬಹುದು. ಫೈಟಿಂಗ್ ಸೀನ್ ಅಂತೂ ನೆಕ್ಸ್ಟ್‌ಲೆವಲ್‌ ಆಗಿ ಕಟ್ಟು ಕೊಟ್ಟಿದ್ದಾರೆ ಗೀತು ಮೋಹನ್ ದಾಸ್‌. ಫಸ್ಟ್ ಆಫ್‌ ಮತ್ತು ಸಕೆಂಡ್ ಆಫ್‌ನಲ್ಲಿ ರಾಯ ಅಬ್ಬರಿಸಿದ್ದಾನೆ.. ಹೆಣ್ಣು ಹೆಂಡದ ನಡುವೆ ರಾಯ ನೆತ್ತರ ಒಕುಳಿ ಹರಿಸಿದ್ದಾನೆ. ಅಕ್ಕನ ತ್ಯಾಗ, ರಾಯನ ಹಠ, ಹೆಣ್ಣನ ಮೇಲಿನ ಮೋಹ ಇಡೀ ಕಥೆಯನ್ನ ತೆಗೆದುಕೊಂಡು ಹೋಗುತ್ತೆ.. ಬ್ಯಾಗ್‌ಗ್ರೌಂಡ್ ಮ್ಯೂಸಿಕ್ ಅಂತು ನೆಕ್ಟ್‌ ಲೆವೆಲ್ ಅಂತಲೇ ಹೇಳಬಹುದು. ಬ್ಯಾಗ್‌ಗ್ರೌಂಡ್‌ನಲ್ಲಿ ಮ್ಯೂಸಿಕ್ ಜೊತೆ ನಮಗೆ ಇಡೀ ಸಿನಿಮಾದಲ್ಲಿ ಕೇಳವುದು ಗನ್‌ಸೌಂಡ್‌.. ದೀಪಾವಳಿ ಟೈಂನಲ್ಲಿ ಹೇಗೆ ಪಟಾಕಿ ಸೌಂಡ್ ಆಗ್ತಾ ಇರುತ್ತೋ, ಹಾಗೇ ಇಡೀ ಸಿನಿಮಾದಲ್ಲಿ ಢಂ ಢಂ ಅನ್ನೋ ಸೌಂಡ್‌ ಕಿವಿಗೆ ಅಪ್ಪಳಿಸತ್ತಲೇ ಇರುತ್ತೆ.

ಏನೆಲ್ಲಾ ಇಷ್ಟ ಆಗುತ್ತೆ ಅಂದ್ರೆ ಯಶ್ ಅವರ ಆ್ಯಕ್ಟಿಂಗ್ ಇಷ್ಟ ಆಗುತ್ತೆ..ಬ್ಯಾಗ್‌ಗ್ರೌಂಡ್ ಮ್ಯೂಸಿಕ್ ಇಷ್ಟ ಆಗುತ್ತೆ.. ಮೇಕಿಂಗ್ ಇಷ್ಟ ಆಗುತ್ತೆ.. ಫೈಟಿಂಗ್ ಇಷ್ಟ ಆಗುತ್ತೆ.. ಸಿನಿಮಾ ಹಾಲಿವುಡ್‌ ಲೆೆವೆಲ್‌ಗೆ ಇದ್ರೂ ಕೂಡ ಕಥೆ ಸಿನಿಮಾದಲ್ಲಿ ನಾವು ಎಲ್ಲಿದೆ ಅಂತ ಹುಡಕಬೇಕು.. ಅಕ್ಕ ತ್ಯಾಗಕ್ಕೆ ರಾಯನ ಹೋರಾಟವಿದ್ರೂ, ಆ ಹೋರಾಟ ಯಾಕೆ ಅನ್ನೋ ಪ್ರಶ್ನೆ ನಮ್ಮನ್ನ ಕಾಡುತ್ತೆ.. ರಾಯ ಮತ್ತು ಅವನ ಮಗನ ನಡುವೆ ನಡೆಯೋ ಹೋರಾಟ ಕೊನೆಯಲ್ಲಿ ಬಿಗ್ ಟ್ವಿಸ್ಟ್ ಕೊಡುತ್ತೆ.. ರಾಯ ಭ್ರಮೆಯಲ್ಲಿ ಕೈಮ್ಯಾಕ್ಸ್ ಎಂಡ್ ಆಗುತ್ತೆ. ನಗೆಟಿವ್ ಅಂತ ಹೇಳುವುದ್ದಕ್ಕೆ ,ಸಾಕಷ್ಟು ಇದ್ರೂ, ಅದು ಯಶ್ ಅವರ ಆ್ಯಕ್ಟಿಂಗ್‌ನಲ್ಲಿ ಮರೆಮಾಚಿ ಹೋಗುತ್ತೆ. ಈ  ಸಿನಿಮಾಕ್ಕೆ ಇನ್ನೇನು ಬೇಕಿತ್ತು ಅನ್ಸುತ್ತೆ.. ಖುಷಿಯಿಂದ ಥಿಯೇಟರ್‌ಗೆ ಹೋದ್ರೆ ಅದೇ ಖುಷಿಯಿಂದ ವಾಪಸ್ ಹೊರಗೆ ಬರಬಹುದಾ ಅನ್ನೋದ್ದಕ್ಕೆ ಉತ್ತರ ಈ ಸಿನಿಮಾ ನೀವೇ ನೋಡಿ ಹೇಳಬಹುಕು. ಕನ್ನಡದ ಮಟ್ಟಿಗೆ ಒಂದು ಒಳ್ಳೆಯ ಸಿನಿಮಾ ಅಂತ ಹೇಳಬಹುದು..

ಹೊಡೆದಾಟ ಬಡಿದಾಟ ಇಷ್ಟು ಬೇಕಿತ್ತಾ?, ವೈಲೆನ್ಸ್‌ ಸಿನಿಮಾವನ್ನ ಡಲ್ ಮಾಡ್ತಾ? ಅಷ್ಟು ನೆತ್ತರು ಯಾವ ಕಾರಣಕ್ಕೆ ಹರಿಯುತ್ತೆ ಅನ್ನೋ ಪ್ರಶ್ನೆಗೆ ಕೊನೆ ತನಕ ಉತ್ತರ ಸಿಗಲ್ಲ.. ಇನ್ನೂ ಹಿಂದಿ, ಇಂಗ್ಲಿಷ್ ಹೆಚ್ಚಾಗಿ ಬಳಸಿದ್ದಾರೆ, ಅದ್ದಕ್ಕೆ ಸಬ್‌ಟೈಟಲ್‌ ಕನ್ನಡದಲ್ಲಿ ಕೊಟ್ಟಿದ್ರೆ ಒಳ್ಳೆದಿತ್ತು ಅನ್ಸುತ್ತೆ. ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋ ಡಿಸ್‌ಕ್ಲೈಮಾರ್ ಸಿನಿಮಾ ಶುರುವಿಂದ ಕೊನೆ ತನಕ ಸ್ಕ್ರೈನ್ ಮೇಲೆ ಇದ್ದೇ ಇರುತ್ತೆ.. ಫ್ಯಾಮಿಲಿ ಜೊತೆ ನೋಡಬಹುದಾ ಅಂತ ಹೇಳಿದ್ರೆ, ನೋಡಬಹುದು , ಆದ್ರೆ ಗಂಡ ಹೆಂಡತಿ ಮಾತ್ರ ಹೋಗಬೇಕು.. ಸಿನಿಮಾ ತಂಡವೇ ಹೇಳಿದ್ದಂತೆ ಇದು 18 ಪ್ಲಸ್ ಸಿನಿಮಾ. ಕೆಟ್ಟ ಪದ ಬಳಕೆ, ಕ್ರೈಂ ದೃಶ್ಯ, ಕೆಲವೋಂದು ಫೈಟಿಂಗ್ ಸೀನ್‌, ರಕ್ತ  ಹರಿಯೋದು, ಯಶ್ ಅವರ ರೋಮ್ಯಾನ್ಸ್‌ ಸೀನ್‌ಗಳು ಮಕ್ಕಳ ಮೇಲೆ ಎಫೆಕ್ಟ್ ಬೀಳಬಹುದು ಅಂತ ಇದ್ದನ್ನ ಓನ್ಲಿ ಅಡಲ್ಟ್ ಸಿನಿಮಾ ಅಂತ ಘೋಷಣೆ ಮಾಡಿದ್ದಾರೆ. ಹೀಗಾಗಿ ಗಂಡ ಹೆಂಡತಿ ಬೇಕಾದ್ರೆ ಹೋಗಿ, ಮಕ್ಕಳು ಹಠ ಮಾಡ್ತಾರೆ ಅಂತ ಕರ್ಕೋಂಡು ಹೋಗುವುದು ಬೇಡ.. ಆ್ಯಕ್ಟಿಂಗ್ ವಿಷ್ಯಕ್ಕೆ ಬಂದ್ರೆ ಯಶ್ ಅವರು ಸೂಪರ್ ಆ್ಯಕ್ಟಿಂಗ್ ಮಾಡಿದ್ದಾರೆ. ಅಪ್ಪ ಮತ್ತು ಮಗನಾಗಿ ಡಬಲ್ ರೋಲ್‌ನಲ್ಲಿ ಚಿಂದಿ ಚಿತ್ರಾನ್ನಾ ಮಾಡಿದ್ದಾರೆ. ನಯನಾ ತಾರ ರಾಯನ ಅಕ್ಕನಾಗಿ  ಪಾತ್ರದಲ್ಲಿ ಮಿಂಚಿದ್ದಾರೆ. ಅಕ್ಕನ ತ್ಯಾಗ ಯಾಕೆ, ತಮ್ಮ ಹಠ ಯಾಕೆ ಅನ್ನೋದು ಸಿನಿಮಾ ನೋಡಿದ್ರೆನೇ ಗೊತ್ತಾಗುತ್ತೆ. ಇನ್ನೂ   ಕಿಯಾರಾ ಅಡ್ವಾಣಿ,  ಹುಮಾ ಖುರೇಷಿ,   ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್ ನಾಯರ್ ಸೇರಿದಂತೆ ಎಲ್ಲರು ತಮ್ಮ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.

Kishor KV

Leave a Reply

Your email address will not be published. Required fields are marked *