ಫಾರಿನ್‌ನಲ್ಲೂ ಟಾಕ್ಸಿಕ್ BIG ಡೀಲ್ – ರಿಲೀಸ್‌ಗೂ ಮುಂಚೆಯೇ 1000 ಕೋಟಿ ಕಲೆಕ್ಷನ್‌?
OTT ಕಿತ್ತಾಟ.. ಗೆದ್ದಾಯ್ತು ಯಶ್‌  

ಫಾರಿನ್‌ನಲ್ಲೂ ಟಾಕ್ಸಿಕ್ BIG ಡೀಲ್ –   ರಿಲೀಸ್‌ಗೂ ಮುಂಚೆಯೇ 1000 ಕೋಟಿ ಕಲೆಕ್ಷನ್‌?OTT ಕಿತ್ತಾಟ.. ಗೆದ್ದಾಯ್ತು ಯಶ್‌  

 

ಟಾಕ್ಸಿಕ್ ಕ್ರೇಜ್ ಜೋರಾಗಿದೆ. ಕೆಜಿಎಫ್ ನಂತ್ರ ಬರ್ತಿರೋ ಯಶ್‌ರನ್ನ ನೋಡೋಕೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲ ಸಖತ್ ಸೌಂಡ್ ಮಾಡ್ತಿದೆ. ಈ ಸಿನಿಮಾ ಖರೀದಿಗೆ ದೊಡ್ಡ ದೊಡ್ಡ ಸಂಸ್ಥೆಗಳು ಕ್ಯೂನಲ್ಲಿ ನಿಂತಿವೆ.  ಆಂಧ್ರ-ತೆಲಂಗಾಣ ವಿತರಣೆ ಹಕ್ಕು ಸೋಲ್ಡ್ ಆಗುತ್ತಿದ್ದಂತೆ ಮತ್ತೊಂದು ಡೀಲ್ ಅನ್ನು ಚಿತ್ರತಂಡ ಮುಗಿಸಿದೆ. ಓವರ್‌ಸೀಸ್ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಂಗ್ಲಿಷ್ ಭಾಷೆಯನ್ನು ಹೊರತು ಪಡಿಸಿ ಭಾರತದ ಎಲ್ಲಾ ಭಾಷೆಗಳ ಹಕ್ಕುಗಳನ್ನು ವಿದೇಶದಲ್ಲಿ PHF ವಿತರಣಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.  ಟಾಕ್ಸಿಕ್ ಮೇಲೆ ಭಾರತೀಯ ಚಿತ್ರರಂಗವೇ ಕಣ್ಣಿಟ್ಟಿದ್ದು, ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ಟಾಕ್ಸಿಕ್ ಪ್ರೀ ರಿಲೀಸ್ ಬ್ಯುಸಿನೆಸ್ ಚರಿತ್ರೆಯನ್ನು ಸೃಷ್ಟಿಸುತ್ತೆ ಅನ್ನೋ ಟಾಕ್ ಕೂಡ ಇದೆ. ಸಿನಿಮಾ  ರಿಲೀಸ್‌ಗೂ ಮುನ್ನ ಒಂದು ಸಾವಿರ ಕೋಟಿ ಡೀಲ್ ಮಾಡುತ್ತೆ ಎನ್ನಲಾಗ್ತಿದೆ.

ತೆಲುಗಿನಲ್ಲಿ 120 ಕೋಟಿ ಮೊತ್ತಕ್ಕೆ ಮಾರಾಟ

ಈಗಾಗಲೇ ಟಾಕ್ಸಿಕ್ ಚಿತ್ರ ಬಿಡುಗಡೆ ಮುನ್ನವೇ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳು ಐತಿಹಾಸಿಕ ದರಕ್ಕೆ ಮಾರಾಟವಾಗಿವೆ. ತೆಲುಗಿನಲ್ಲಿ ಪ್ರಮುಖ ವಿತರಕ ಮತ್ತು ನಿರ್ಮಾಪಕ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆಯು ಟಾಕ್ಸಿಕ್ ಚಿತ್ರದ ತೆಲುಗು ಪ್ರದೇಶದ ವಿತರಣೆ ಹಕ್ಕುಗಳನ್ನು ಖರೀದಿಸಿದೆ. ಇದಕ್ಕಾಗಿ ಅವರು ಬರೋಬ್ಬರಿ 120 ಕೋಟಿ ರೂಪಾಯಿ ಮೊತ್ತವನ್ನು ನೀಡಿರುವುದು ಮೊದಲ ಬಾರಿಗೆ ತೆಲುಗು ಭಾಷೆ ಹೊರಗಿನ ಸಿನಿಮಾವೊಂದು ಈ ಮಟ್ಟದ ಬೆಲೆ ಸಾಧಿಸಿರುವ ಕೀರ್ತಿ ಟಾಕ್ಸಿಕ್ ಚಿತ್ರಕ್ಕೆ ಸಲ್ಲುತ್ತದೆ. ಹಾಗೇ ಟಾಕ್ಸಿಕ್ ಚಿತ್ರಕ್ಕಾಗಿ ತಮಿಳುನಾಡು ಮತ್ತು ಕೇರಳದಲ್ಲೂ ಅಪಾರ ಬೇಡಿಕೆ ಸೃಷ್ಟಿಯಾಗಿದ್ದು, . ತಮಿಳುನಾಡಿನ ವಿತರಣೆ ಹಕ್ಕುಗಳನ್ನು ಸನ್ ನೆಟ್‌ವರ್ಕ್ ಪಡೆಯುವ ಸಾಧ್ಯತೆ ಇದೆ.

ಟಾಕ್ಸಿಕ್‌ಗಾಗಿ OTTಯಲ್ಲಿ ಫೈಟ್  

ಟಾಕ್ಸಿಕ್ ಚಿತ್ರದ ಹಕ್ಕು ಖರೀದಿಗೆ ಒಟಿಟಿ ನಡುವೆ ಕೂಡ ಫೈಟ್ ನಡೆಯುತ್ತಿದೆ. ನೆಟ್‌ಫ್ಲಿಕ್ಸ್, ZEE5, ಅಮೇಜಾನ್ ಪ್ರೈಮ್ ಸೇರಿದಂತೆ ಫೇಮಸ್ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪರಸ್ಪರ ಸ್ಪರ್ಧಿಸುತ್ತಿವೆ. ಯಶ್ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿದ್ದು, ಚಿತ್ರದ ಕಂಟೆಂಟ್ ಬಗ್ಗೆ ಕ್ರೇಜ್ ಹೆಚ್ಚಿರುವುದರಿಂದ ಕೆಲವು ಒಟಿಟಿ ಸಂಸ್ಥೆಗಳು 300 ಕೋಟಿ ಮೊತ್ತದ ಆಫರ್ ನೀಡಿದ್ದರೆಂಬ ಮಾತುಗಳು ಕೇಳಿಬರುತ್ತಿದೆ.

ವಿದೇಶದಲ್ಲೂ ಹೆಚ್ಚಾಯ್ತು ಟಾಕ್ಸಿಕ್ ಹವಾ  

ಈ ಚಿತ್ರದ ವಿದೇಶಿ ಹಂಚಿಕೆ ಹಕ್ಕನ್ನು ಫಾರ್ಸ್ ಫಿಲ್ಮ್ ಬರೋಬ್ಬರಿ 105 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈ ಡೀಲ್​​ನ ಹಿಂದೆ ಸಾಕಷ್ಟು ಲೆಕ್ಕಾಚಾರ ಇದೆ. ಟಾಕ್ಸಿಕ್  ಸಿನಿಮಾ ಕೇಲವ ಭಾರತದ ಭಾಷೆಗಳಲ್ಲಿ ಅಷ್ಟೇ ಅಲ್ಲ ಇಂಗ್ಲಿಷ್ ಅಲ್ಲೂ ರಿಲೀಸ್ ಆಗಲಿದೆ. ಈಗ ಫಾರ್ಸ್ ಫಿಲ್ಮ್​ಗೆ ನೀಡಿದ್ದು ಕೇವಲ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಆವೃತ್ತಿಗಳನ್ನು ಮಾತ್ರ. ಹೀಗಾಗಿ, ಇಂಗ್ಲಿಷ್ ಹಕ್ಕನ್ನು ಇನ್ನೊಂದು ಸಂಸ್ಥೆಗೆ ತಂಡ ನೀಡಲಿದೆ. ಫಾರ್ಸ್ ಫಿಲ್ಮ್​ ಜೊತೆ ಇಷ್ಟು ದೊಡ್ಡ ಡೀಲ್ ಮಾಡಿಕೊಳ್ಳಲು ಧುರಂಧರ್ 2 ಜೊತೆಗಿನ ಫೈಟ್ ಅಂತ ಹೇಳಲ್ತಾಗಿದೆ. ಫಾರ್ಸ್​ ಫಿಲ್ಮ್ಸ್ ಸಿನಿಮಾ ಹಂಚಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿದೆ. ಅಲ್ಲದೆ, ಇದು ದುಬೈ ಮೂಲದ ಕಂಪನಿ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಇದು ಸಾಕಷ್ಟು ಹಿಡಿತ ಹೊಂದಿದೆ. ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ‘ಧುರಂಧರ್’ ಸಿನಿಮಾ ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್ ಆಗಿರಲಿಲ್ಲ. ಅದೇ ರೀತಿ, ‘ಧುರಂಧರ್ 2’ ಸಿನಿಮಾ ಕೂಡ ಈ ಭಾಗದಲ್ಲಿ ರಿಲೀಸ್ ಆಗೋದಿಲ್ಲ. ಈ ಕಾರಣದಿಂದ ‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ ಹಾಗೂ ಯಶ್ ಫಾರ್ಸ್ ಫಿಲ್ಮ್​ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ₹1000 ಕೋಟಿ ಬ್ಯುಸಿನೆಸ್ ಮಾಡಲಿದೆ ಎಂದು ಅಂದಾಜು ಮಾಡಲಿದೆ.

ಟಾಕ್ಸಿಕ್‌ಗೆ ಮತ್ತೊಂದು ವಿಘ್ನ

ಇನ್ನೂ ಟಾಕ್ಸಿಕ್‌ಗೆ ಮತ್ತೊಂದು ವಿಘ್ನ ಎದುರಾಗಿದೆ. ಕ್ರೈಸ್ತರಿಗೆ ಮುಜುಗರ ತರಲಾಗಿದೆ ಎಂದು ಆರೋಪಿಸಿ, ನ್ಯಾಷನಲ್‌ ಕ್ರಿಶ್ಚಿಯನ್‌ ಫೆಡರೇಷನ್‌  ದೂರು ನೀಡಿದೆ. ಟಾಕ್ಸಿಕ್‌ ಸಿನಿಮಾದಲ್ಲಿ ಕ್ರೈಸ್ತರ ದೇವದೂತ ಸಂತ ಮಿಕಯೇಲ್‌ಗೆ ಅಪಮಾನ ಮಾಡಲಾಗಿದೆ. ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ ಯೂಟ್ಯೂಬ್ ಪೋಸ್ಟ್‌ಗಳನ್ನ ತೆಗೆಯಬೇಕು, ಸಿನಿಮಾದಲ್ಲಿ ಚಿತ್ರೀಕರಣ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಸೂಚನೆ ನೀಡಬೇಕು ಎಂದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ.  ಒಟ್ನಲ್ಲಿ ಟಾಕ್ಸಿಕ್‌ ಕ್ರೇಜ್ ಒಂದ್ಕಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದ್ಕಡೆ ವಿಘ್ನಗಳು ಎದುರಾಗುತ್ತಿದೆ.

Kishor KV

Leave a Reply

Your email address will not be published. Required fields are marked *