ಯಶ್ ʼಟಾಕ್ಸಿಕ್ʼಗೆ ಕಾನೂನು ಸಂಕಷ್ಟ! – ಟೀಸರ್ ಟೀಕೆ ಮಾಡಿದವರಿಗೆ ನಿರ್ದೇಶಕಿ ತಿರುಗೇಟು

ಎಲ್ಲೆಲ್ಲೂ ಸದ್ಯ ಟಾಕ್ಸಿಕ್‌ನದ್ದೇ ಸುದ್ದಿ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆ ಆಗಿ ಎಲ್ಲೆಡೆ ಅಬ್ಬರಿಸುತ್ತಿದೆ. ಈ ಬೆನ್ನಲ್ಲೇ ಪರ ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಇದೀಗ ಟಾಕ್ಸಿಕ್ ಸಿನಿಮಾ ತಂಡಕ್ಕೆ ಕಾನೂನು ಸಂಕಷ್ಟ ಶುರುವಾಗಿದೆ. ಟಾಕ್ಸಿಕ್ ಟೀಸರ್ ವಿರುದ್ದ ದೂರು ದಾಖಾಲಾಗಿದೆ. ಇದೀಗ ಟೀಸರ್ ಬಗ್ಗೆ ಟೀಕೆ ಮಾಡಿದವರಿಗೆ ನಿರ್ದೇಶಕಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಈ ವಾರದ ಕಿಚ್ಚನ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ್‌ಗೆ! – ಬಿಗ್‌ಬಾಸ್ ವಿರುದ್ದ ರಜತ್ ಅಸಮಾಧಾನ!
ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ನಿರೀಕ್ಷೆಗೆ ತಕ್ಕಂತೆ ಟೀಸರ್ ಬಿಡುಗಡೆ ಮಾಡಿ ಇಡೀ ವಿಶ್ವವೇ ತಿರುಗಿನೋಡುವಂತೆ ಮಾಡಿದೆ. ಎಲ್ಲೆಲ್ಲೂ ಸಿನಿಮಾದ ಟೀಸರ್ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಆದ್ರೀಗ ಸಿನಿಮಾ ಟೀಸರ್ ವಿರುದ್ಧ ಕೇಸ್ ದಾಖಲಾಗಿದೆ. ಟಾಕ್ಸಿಕ್ ಟೀಸರ್‌ನಲ್ಲಿನಲ್ಲಿರುವ ಅಸಭ್ಯ ದೃಶ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಟಾಕ್ಸಿಕ್ ಟೀಸರ್‌ನಲ್ಲಿನ ಅಸಭ್ಯ ದೃಶ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಹೀಗಾಗಿ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದೆ ಎಂದು ಕೇಂದ್ರ ಸೆನ್ಸಾರ್ ಮಂಡಳಿಗೆ ವಕೀಲ ಲೋಹಿತ್ ಕುಮಾರ್ ರಿಂದ ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ದಾಖಲಿಸಿದ್ದಾರೆ. ಟೀಸರ್‌ನಲ್ಲಿ ಕಂಡುಬಂದ ದೃಶ್ಯಗಳನ್ನು ಗಮನಿಸಿದರೆ ಈ ಚಿತ್ರವು ಕುಟುಂಬ ಸದಸ್ಯರೊಂದಿಗೆ ನೋಡಲು ಸೂಕ್ತವಲ್ಲ.ಜೊತೆಗೆ ಚಿತ್ರಮಂದಿರಗಳಲ್ಲಿ ಎ ಸರ್ಟಿಫಿಕೇಟ್ ಇದ್ದರೆ ಮಕ್ಕಳನ್ನು ಪ್ರವೇಶಿಸದಂತೆ ತಡೆಯಲಾಗುತ್ತದೆ. ಆದರೆ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಸಮಸ್ಯೆಯಾಗಿದೆ .ಹೀಗಾಗಿ ಸೆನ್ಸಾರ್ ಮಂಡಳಿ ಟೀಸರ್‌ಗಳಿಗೂ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ವಕೀಲ ಲೋಹಿತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಟೀಸರ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ನಿರ್ದೇಶಕಿ ತಿರುಗೇಟು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಗೀತು ಮೋಹನ್ ದಾಸ್, ಸ್ತ್ರೀ ಸಂತೋಷ, ಸಮ್ಮತಿ, ಆಕೆ ವ್ಯವಸ್ಥೆಯ ಜೊತೆ ಆಟ ಆಡುವುದನ್ನು ಜನ ಗುರುತಿಸಿದಾಗ ಮಜಾವಾಗಿರುತ್ತದೆ” ಎಂದು ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಯಾರ ಹೆಸರನ್ನು ತೆಗೆದುಕೊಳ್ಳದೇ ಪರೋಕ್ಷವಾಗಿ ಆಕೆ ಕಾಮೆಂಟ್ ಮಾಡಿದ್ದರು. ಬಳಿಕ ಅದೇ ಪೋಸ್ಟ್ ಮಾಡಿ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್ ಅವರನ್ನು ಟ್ಯಾಗ್ ಮಾಡಿ “ಈಗ ಇದು ಹೇಳ್ತಿದ್ದೀನಿ” ಎಂದು ಗೀತು ಬರೆದುಕೊಂಡಿದ್ದಾರೆ.

ನೋಡಿರಿ

