ಶುರುವಾಯ್ತು ಟಾಕ್ಸಿಕ್ ಕಿಕ್ – ಯಶ್ ರೆಟ್ರೋ ಸ್ಟೈಲ್ ಗೆ ಫ್ಯಾನ್ಸ್ ಫಿದಾ

ಶುರುವಾಯ್ತು ಟಾಕ್ಸಿಕ್ ಕಿಕ್ – ಯಶ್ ರೆಟ್ರೋ ಸ್ಟೈಲ್ ಗೆ ಫ್ಯಾನ್ಸ್ ಫಿದಾ

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬರ್ತ್‌ಡೇ ಸಂಭ್ರಮ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ರಾತ್ರಿ ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡ್ಕೊಂಡು ರಾಕಿಂಗ್ ಸ್ಟಾರ್‌ಗೆ ಮಾರ್ನಿಂಗ್ ಟೈಮ್‌ನಲ್ಲಿ ಒಂದೊಳ್ಳೇ ಸರ್‌ಪ್ರೈಸ್ ಸಿಕ್ಕಿದೆ. ಟಾಕ್ಸಿಕ್ ಸಿನಿಮಾ ತಂಡ ಯಶ್ ಬರ್ತ್‌ಡೇಗೆ ಮತ್ತು ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ನೀಡಿದೆ.

ಇದನ್ನೂ ಓದಿ:ಡಿವೋರ್ಸ್‌ ಲಾಯರ್‌ ಮದುವೆ ಕತೆ.. _”ವಧು”ಗೆ ವರನಾಗಿ ಅಭಿಷೇಕ್‌ ಎಂಟ್ರಿ! – ದೊಡ್ಡ ತಾರಾಬಳಗ.. ಹಿಟ್‌ ಆಗುತ್ತಾ?

ಕೆಜಿಎಫ್ ಟು ರಿಲೀಸ್ ಆದ್ಮೇಲೆ ರಾಕಿಂಗ್ ಸ್ಟಾರ್ ಯಶ್ ರನ್ನ ತೆರೆಮೇಲೆ ನೋಡಲು ಫ್ಯಾನ್ಸ್ ಕಾಯ್ತಾ ಇದ್ದಾರೆ. ಟಾಕ್ಸಿಕ್ ಸಿನಿಮಾ ಮೂಲಕವಾದ್ರೂ ರಾಕಿಭಾಯ್ ಕಣ್ಮುಂದೆ ಬರಬೇಕು ಅಂತಾ ಫ್ಯಾನ್ಸ್ ಕೇಳಿಕೊಳ್ತಾನೇ ಇದ್ರು. ಇದೀಗ ಫ್ಯಾನ್ಸ್ ಗೆ ಯಶ್ ಬರ್ತಡೇ ಖುಷಿ ಜೊತೆಗೆ ಟಾಕ್ಸಿಕ್ ಸಿನಿಮಾ ತಂಡ ಕೂಡಾ ಬಿಗ್ ಸರ್‌ಪ್ರೈಸ್ ನೀಡಿದೆ. ‘ಟಾಕ್ಸಿಕ್’ ಚಿತ್ರದ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ವತಿಯಿಂದ ಈ ಚಿತ್ರದ ಗ್ಲಿಂಪ್ಸ್​ನ ರಿಲೀಸ್ ಮಾಡಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ‘ಟಾಕ್ಸಿಕ್’ ತಂಡ ಈ ಮೊದಲೇ ಘೋಷಣೆ ಮಾಡಿತ್ತು. ಪೋಸ್ಟರ್ ರಿಲೀಸ್ ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಅದ್ರಂತೆ, ಯಶ್ ಹುಟ್ಟುಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆ 25 ನಿಮಿಷಕ್ಕೆ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿದ್ದವರು ಮಾಯಾಲೋಕದಲ್ಲಿ ನಶೆಯಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಡ್ರಿಂಕ್ಸ್ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ. ಸದ್ಯ ರಿಲೀಸ್ ಆಗಿರೋದು ಒಂದು ಗ್ಲಿಂಪ್ಸ್ ಮಾತ್ರ. ಇದ್ರಲ್ಲಿ ಯಶ್ ಲುಕ್ ಮಸ್ತ್ ಆಗಿದೆ.

ಯಶ್ ಬರ್ತ್‌ಡೇ ಪ್ರಯುಕ್ತ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದು ಸಿನಿಮಾದಲ್ಲಿ ಬರುವ ಒಂದು ಕ್ಲಿಪ್ ಎನ್ನಲಾಗಿದೆ. ‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್​ನಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡಾ ನಟಿಸುತ್ತಿದ್ದಾರೆ.

suddiyaana