ಪಾಲಕ್ ಸೊಪ್ಪು ಎಂದು ತಿಂದ ಜನ – ಅಮಲಲ್ಲಿ ತೇಲಾಡಿದ ನೂರಾರು ಮಂದಿ

ಆಸ್ಟ್ರೇಲಿಯಾ: ಪಾಲಕ್ ಸೊಪ್ಪು ತಿಂದು ನೂರಾರು ಜನರು ಅಸ್ವಸ್ಥರಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಪಾಲಕ್ ಸೊಪ್ಪು ತಿಂದು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ವಿಷಕಾರಿ ಪಾಲಕ್ ಎಂದೇ ಕರೆಯುವ ‘ಥಾರ್ನ್ ಆ್ಯಪಲ್’ ಅನ್ನು ಜನರು ಸೇವಿಸಿದ್ದಾರೆ. ಇದನ್ನು ಸೇವಿಸಿದ ಜನರು ಹೆಲುಸಿನೆಶನ್ ಮತ್ತು ಡೆಲಿರಿಯಂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ – ಸಾವಿನ ಸಂಖ್ಯೆ 34ಕ್ಕೆ ಏರಿಕೆ
ಹೆಲುಸಿನೆಶನ್ ಮತ್ತು ಡೆಲಿರಿಯಂ ಸಮಸ್ಯೆಗೆ ಒಳಗಾದವರು ಭ್ರಮೆಗೊಳಗಾಗುತ್ತಾರೆ. ಇದರಿಂದಾಗಿ ಮನುಷ್ಯನ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಪಾಲಕ್ ಸೊಪ್ಪು ಸೇವಿಸಿದ ಜನರ ಹೃದಯ ಬಡಿತದಲ್ಲಿ ಏರುಪೇರು, ಮಂದ ದೃಷ್ಟಿ ಮುಂತಾದ ಲಕ್ಷಣಗಳನ್ನೂ ಎದುರಿಸುತ್ತಿದ್ದಾರೆ.
ರಿವೇರಿಯಾ ಫಾರ್ಮ್ಸ್ ಬ್ರ್ಯಾಂಡ್ ನ ಪಾಲಕ್ ತಿಂದು ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಡಿಸೆಂಬರ್ 16 ರ ಎಕ್ಸ್ಪೈರಿ ಡೇಟ್ ಹೊಂದಿರುವ ಯಾವುದೇ ಬ್ರಾಂಡ್ ನ ಪ್ಯಾಕೇಜ್ ಮಾಡಿದ ಪಾಲಕ್ ಅನ್ನು ಸೇವಿಸದಂತೆ ನ್ಯೂ ಸೌತ್ ವೇಲ್ಸ್ ಹೆಲ್ತ್ ಹೇಳಿದೆ. ಯಾವುದೇ ಪಾಲಕ್ ಸೊಪ್ಪನ್ನು ಸೇವಿಸಿದ ಮೇಲೆ ಏನೇ ಸಮಸ್ಯೆ ಕಾಣಿಸಿಕೊಂಡರೂ ತಡ ಮಾಡದೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಘಟನೆಯಿಂದ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ.