ಟಾಕ್ಸಿಕ್‌ಗೆ ಒಲಿದ ವರ‘ಲಕ್ಷ್ಮಿ’ – ಬುಕಿಂಗ್‌ನಲ್ಲೇ ಕೋಟಿ ಕೋಟಿ ಕಮಾಯಿ
ಯಶ್ ಕ್ರೇಜ್ಗೆ ಬಾಕ್ಸ್ ಆಫೀಸ್ ಉಡೀಸ್

ಟಾಕ್ಸಿಕ್‌ಗೆ ಒಲಿದ ವರ‘ಲಕ್ಷ್ಮಿ’ – ಬುಕಿಂಗ್‌ನಲ್ಲೇ  ಕೋಟಿ ಕೋಟಿ ಕಮಾಯಿಯಶ್ ಕ್ರೇಜ್ಗೆ ಬಾಕ್ಸ್ ಆಫೀಸ್ ಉಡೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ  ‘ಟಾಕ್ಸಿಕ್’ಸಿನಿಮಾ ಇದೇ 26ಕ್ಕೆ ರಿಲೀಸ್ ಆಗ್ತಿದೆ, ಈಗಾಗಲೇ ಅದ್ದಕ್ಕೆ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಆದ್ರೆ ನಾವು ಇಲ್ಲಿ ಗಮನಿಸಬೇಕಾಗಿದ್ದು ಈ ಚಿತ್ರತಂಡ ತೆಗೆದುಕೊಂಡ ದೊಡ್ಡ ನಿರ್ಧಾರ. ಅದೇನಪ್ಪ ಅಂದ್ರೆ ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಬೃಹತ್ ಪ್ರಿ-ರಿಲೀಸ್ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿರುವುದು. ಈ ಹಿಂದೆಲ್ಲಾ ಸಿನಿಮಾ ಹಿಟ್ ಆಗಬೇಕಾದ್ರೆ ಚಿತ್ರತಂಡ ಟಿವಿ ಚಾನೆಲ್‌ಗಳಲ್ಲಿ ಕುಳಿತಿ ಇಂಟರ್ವ್ಯೂಗಳನ್ನು ನೀಡ್ತಾ ಇದ್ವು, ಆದ್ರೆ ‘ಟಾಕ್ಸಿಕ್ ಟೀಂ ಬೇರೆ ತರವೇ ಪ್ರಚಾರಕ್ಕೆ ಮುಂದಾಗಿದೆ.

ಟಿವಿ ಸಂದರ್ಶನಗಳ ಬದಲಾಗಿ, ಪ್ರಮುಖ ನಗರಗಳಿಗೆ ಖುದ್ದಾಗಿ ಭೇಟಿ ನೀಡುತ್ತಿದೆ. ಅಲ್ಲಿನ ಸೋಶಿಯಲ್ ಮೀಡಿಯಾದ ಇನ್​ಫ್ಲುಯೆನ್ಸರ್ ಹಾಗೂ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗುವ ಮೂಲಕ ಅದ್ಧೂರಿ ಪ್ರಿ-ರಿಲೀಸ್ ಕಾರ್ಯಕ್ರಮಗಳನ್ನು ನಡೆಸಿ ಪ್ರಚಾರ ಮಾಡಲು ಚಿತ್ರತಂಡ ಮಾಸ್ ಪ್ಲಾನ್ ಮಾಡಿದೆ. ಶನಿವಾರ ಅಂದ್ರೆ 22ರಂದು ಹೈದರಾಬಾದ್‌ನಲ್ಲಿ ಪ್ರಿ-ರಿಲೀಸ್ ಇವೆಂಟ್ ಕಾರ್ಯಕ್ರಮವನ್ನ ಚಿತ್ರತಂಡ ಅದ್ಧೂರಿಯಾಗಿ ಮಾಡಿದೆ. ಹಾಗೇ ಭಾನುವಾರ   ತಮಿಳುನಾಡು ಅಭಿಮಾನಿಗಳಿಗಾಗಿ ಚೆನ್ನೈನಲ್ಲಿ ಅದ್ಧೂರಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್‌ 24ಕ್ಕೆ  ಮಲಯಾಳಂ ಪ್ರೇಕ್ಷಕರನ್ನು ರಂಜಿಸಲು ಮುಂದಾದ್ರೆ,   ಉತ್ತರ ಭಾರತದಲ್ಲಿ 25ಕ್ಕೆ  ಬೃಹತ್ ಪ್ರಿ-ರಿಲೀಸ್ ಈವೆಂಟ್ ನೆರವೇರಲಿದೆ. 26ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಕನ್ನಡ ಸಿನಿಮಾ ಆಗಿ ಬೆಂಗಳೂರಿನಲ್ಲಿ ಯಾಕೆ ಪ್ರಿ ರಿಲೀಸ್ ಇವೆಂಟ್ ಮಾಡ್ತಿಲ್ಲ ಅಂದ್ರೆ, ಈಗಾಗಲೇ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಿದೆ. ಹೀಗಾಗಿ ಬೆಂಗಳೂರಿನಲ್ಲಿ ರಿಲೀಸ್‌ಗೂ ಮುಂಚೆ ಯಾವುದೇ ಪ್ರೀ ರಿಲೀಸ್ ಈವೆಂಟ್‌ನನ್ನ ಚಿತ್ರತಂಡ ಮಾಡ್ತಿಲ್ಲ.

ಟಾಕ್ಸಿಕ್ ಟಿಕೆಟ್‌ಗಳು ಸೋಲ್ಡ್‌ ಔಟ್

ಟಾಕ್ಸಿಕ್‌ ಕ್ರೇಜ್ ಹೇಗಿದೆ ಅಂದ್ರೆ ಇಡೀ ಭಾರತ ಚಿತ್ರರಂಗವೇ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದೆ.   ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಅಧಿಕೃತವಾಗಿ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಚಿತ್ರಮಂದಿರಗಳ ಶೋಗಳು ‘ಸೋಲ್ಡ್ ಔಟ್’ ಆಗುವ ಮೂಲಕ ಇಡೀ ಚಿತ್ರರಂಗವೇ ಬೆರಗಾಗುವಂತೆ ಮಾಡಿವೆ.

21ಕ್ಕೆ ಟಿಕೆಟ್ ಬುಕಿಂಗ್ ವಿಂಡೋ ಓಪನ್ ಆಗುತ್ತಿದ್ದಂತೆ ಪ್ರೇಕ್ಷಕರು ಮತ್ತು ಅಭಿಮಾನಿಗಳು ಬುಕಿಂಗ್ ಆ್ಯಪ್‌ಗಳಿಗೆ ಮುಗಿಬಿದ್ದು, ಟೆಕೆಟ್ ಖರೀದಿಸಿದ್ದಾರೆ. ಫಸ್ಟ್‌ ಡೇ ಟಿಕೆಟ್ ಆಲ್‌ಮೋಸ್ಟ್‌ ಎಲ್ಲಾ ಥಿಯೇಟರ್‌ಗಳಲ್ಲಿ ಸೋಲ್ಡ್‌ ಔಟ್ ಆಗಿದೆ.  400 ರೂ.ಗಳಿಂದ 1500 ರೂ ತನಕ ಟಿಕೆಟ್ ಬೆಲೆ ಇದೆ.

ಸ್ಯಾಕ್‌ನಿಲ್ಕ್ ವರದಿ ಪ್ರಕಾರ, ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮುಂಗಡ ಬುಕಿಂಗ್ ಮೂಲಕ 19.44 ಕೋಟಿ ರೂಪಾಯಿ ಗಳಿಸಿದೆ. ಈ ಪೈಕಿ ಕರ್ನಾಟಕವೇ ಮುಂಗಡ ಬುಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಕನ್ನಡ ಆವೃತ್ತಿಯ ಮುಂಗಡ ಬುಕಿಂಗ್ ಮೂಲಕ 7.22 ಕೋಟಿ ರೂಪಾಯಿ ಗಳಿಸಿದೆ ಟಾಕ್ಸಿಕ್.ಇನ್ನು ಹಿಂದಿಯಲ್ಲಿ 3.86 ಕೋಟಿ ರೂಪಾಯಿ ಗಳಿಸಿದೆ. ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಇತರ ಭಾಷೆಗಳಿಂದಲೂ ಸಾಕಷ್ಟು ಕೋಟಿ ರೂಪಾಯಿ ಗಳಿಸಿದೆ. ಒಟ್ಟು 2.6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಯಶ್ ಟಾಕ್ಸಿಕ್ ನೋಡಲು ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಗ್ಲೋಬಲ್ ಸಿನಿಮಾ ಮೂಲಕ ದಾಖಲೆ ಬರೆಯಲು ಸಜ್ಜಾಗಿರುವ ಯಶ್ ಈಗಾಗಲೇ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ.

ಇನ್ನೂ BookMyShow’ನಲ್ಲಿ 1.1 ಮಿಲಿಯನ್ ಆಸಕ್ತಿ  ಪಡೆದ 13ನೇ ಭಾರತೀಯ ಚಿತ್ರವಾಗಿ ‘Toxic’ ಹೊರಹೊಮ್ಮಿದೆ: ‘Toxic’ ಚಿತ್ರವು ‘BookMyShow’ನಲ್ಲಿ 1.1 ಮಿಲಿಯನ್ ಆಸಕ್ತಿಯನ್ನು ದಾಖಲಿಸಿದೆ. ಈ ಮೈಲಿಗಲ್ಲನ್ನು ತಲುಪಿದ 13ನೇ ಭಾರತೀಯ ಚಿತ್ರವಾಗಿ ‘Toxic’ ಗುರುತಿಸಿಕೊಂಡಿದೆ.’KGF Chapter 2’ನ ಭಾರಿ ಯಶಸ್ಸಿನ ನಂತರ, ಯಶ್ ಅವರ ವೃತ್ತಿಜೀವನದಲ್ಲಿ ಈ ಮಟ್ಟದ ಜನಪ್ರಿಯತೆಯನ್ನು ಅಥವಾ ನಿರೀಕ್ಷೆಯನ್ನು ಪಡೆದ ಎರಡನೇ ಚಿತ್ರ ಇದಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

 

 

Kishor KV

Leave a Reply

Your email address will not be published. Required fields are marked *