TOXIC ₹235 ಕೋಟಿ OTT ಡೀಲ್? ಸೇಫ್‌ಜೋನ್‌ಗೆ ಹೋದ್ರಾ ಪ್ರೊಡ್ಯೂಸರ್?
ಯಶ್ ಕೈ ಹಿಡಿಯುತ್ತಾ ಪೇ ಪರ್ ವ್ಯೂ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ Toxic ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದೀಗ ಚಿತ್ರದ OTT ಡೀಲ್ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ಅದೇನು ಅಂದ್ರೆ, Toxic ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು ಬರೋಬ್ಬರಿ ₹235 ಕೋಟಿಗೆ ಡೀಲ್ ಆಗಿವೆ ಅನ್ನೋ ಸುದ್ದಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ.
ಟಾಕ್ಸಿಕ್ ರಿಲೀಸ್‌ಗೂ ಮುನ್ನವೇ ಯಶ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು. KGF ನಂತರ ಯಶ್ ಅವರ ಮುಂದಿನ ಸಿನಿಮಾ ಅನ್ನೋ ಕಾರಣಕ್ಕೆ ಟಾಕ್ಸಿಕ್‌ಗೆ ದೊಡ್ಡ ಮಟ್ಟದ ಓಪನಿಂಗ್ ನಿರೀಕ್ಷಿಸಲಾಗಿತ್ತು.ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರ ಪ್ರತಿಕ್ರಿಯೆ ಮಿಶ್ರವಾಗಿದ್ದು, ಕಲೆಕ್ಷನ್ ವಿಚಾರದಲ್ಲೂ ದಿನದಿಂದ ದಿನಕ್ಕೆ ಏರಿಳಿತ ಕಾಣ್ತಿದೆ. ಸಿನಿಮಾ ಎಷ್ಟು ಕೋಟಿ ಗಳಿಸಿದೆ ಅನ್ನೋದರ ಬಗ್ಗೆ ಬೇರೆ ಬೇರೆ ಟ್ರೇಡ್ ವರದಿಗಳು ಬೇರೆ ಬೇರೆ ಸಂಖ್ಯೆಗಳನ್ನ ನೀಡುತ್ತಿವೆ. ಹೀಗಾಗಿ ಅಧಿಕೃತ ನಿರ್ಮಾಪಕರ ಅಂಕಿ-ಅಂಶಗಳಿಲ್ಲದೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಫೈನಲ್ ಕಲೆಕ್ಷನ್ ಅಂತ ಹೇಳೋದು ಸರಿಯಾಗಲ್ಲ. 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಮೊದಲ ವೀಕೆಂಡ್ ನಂತ್ರ ಕಲೆಕ್ಷನ್ ಸ್ವಲ್ಪ ಡಲ್ ಆಗಿದೆ. ಈ ನಡುವೆ OTT ರೈಟ್ಸ್ ಸಖತ್ ಟ್ರೆಂಡ್ ಆಗ್ತಿದೆ. ಟಾಕ್ಸಿಕ್ ಕಲೆಕ್ಷನ್ ನಡುವೆ ಸಿನಿಮಾದ OTT ಡೀಲ್ ವಿಚಾರ ಈಗ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಇಂದಿನಿಂದ ಪ್ರಜಾಸೇವೆ ಅಭಿಯಾನ ಆರಂಭ – ಇದರಿಂದ ಜನರಿಗೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಹೌದು ಕೆಲವು ವರದಿಗಳ ಪ್ರಕಾರ, ಎಲ್ಲಾ ಭಾಷೆಗಳ Toxic ಡಿಜಿಟಲ್ ರೈಟ್ಸ್ ಅನ್ನು ZEE5 ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಈ ಡೀಲ್‌ನಲ್ಲಿ OTT ಜೊತೆಗೆ ಸ್ಯಾಟಲೈಟ್ ಹಕ್ಕುಗಳೂ ಸೇರಿವೆ ಎಂಬ ಮಾತು ಕೇಳಿಬರುತ್ತಿದೆ. ಈ ಮೊತ್ತ ನಿಜವಾಗಿದ್ದರೆ, ಕನ್ನಡ ಸಿನಿಮಾವೊಂದು OTT ಹಕ್ಕುಗಳಿಂದಲೇ ಇಷ್ಟು ದೊಡ್ಡ ಮೊತ್ತ ಪಡೆಯುತ್ತಿರುವುದು ಇದೇ ಮೊದಲು, ಅಲ್ಲದೇ ಇದು ಮತ್ತೊಂದು ದಾಖಲೆಯಾಗಲಿದೆ.
ಟಾಕ್ಸಿಕ್ ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಎದುರಿಸುತ್ತಿರುವ ಸಮಯದಲ್ಲೇ ಇಂತಹ ದೊಡ್ಡ OTT ಡೀಲ್ ಸುದ್ದಿಯಾಗಿದೆ. ನಿಮಾ ಥಿಯೇಟರ್ ಕಲೆಕ್ಷನ್ ಹೇಗೇ ಇರಲಿ, OTT ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ದೊಡ್ಡ ಮೊತ್ತ ಬಂದರೆ ನಿರ್ಮಾಪಕರಿಗೆ ಅದು ಬಹಳ ದೊಡ್ಡ ಸೇಫ್‌ಜೋನ್ ಆಗಬಹುದು. ಯಾಕಂದ್ರೆ ಥಿಯೇಟರ್ ಕಲೆಕ್ಷನ್ 400 ಕೋಟಿಯಾದ್ರೆ, OTTಯಿಂದ 235 ಕೋಟಿ ಬಂದ್ರೆ, ಒಟ್ಟು 635 ಕೋಟಿ ಆಗಲಿದೆ. ಹಾಕಿದ ದುಡ್ಡಿನ ಜೊತೆ ಲಾಭ ಕೂಡ ಬರುತ್ತೆ. ಆದರೆ ₹235 ಕೋಟಿ ಅನ್ನೋ ಮೊತ್ತ ನಿಜವೇ? ಅದು ಕೇವಲ OTT ರೈಟ್ಸ್‌ಗಾ? ಅಥವಾ OTT ಜೊತೆಗೆ ಸ್ಯಾಟಲೈಟ್ ರೈಟ್ಸ್‌ಗೂ ಸೇರಿದ್ದಾ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ
KGF ನಂತರ ಯಶ್ ಅವರಿಗೆ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ದೊಡ್ಡ ಪ್ರೇಕ್ಷಕರಿದ್ದಾರೆ. Toxic ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಒಂದೇ ಭಾಷೆಯ ಸಿನಿಮಾ ಎಂದು ನೋಡದೆ, ಹಲವು ಮಾರುಕಟ್ಟೆಗಳ ಒಟ್ಟಾರೆ ಮೌಲ್ಯವನ್ನು ಪರಿಗಣಿಸಬಹುದು. ₹235 ಕೋಟಿ ಕೇವಲ OTT ಹಕ್ಕುಗಳ ಮೊತ್ತವಲ್ಲದೆ, ಡಿಜಿಟಲ್ + ಸ್ಯಾಟಲೈಟ್ ಹಕ್ಕುಗಳ ಒಟ್ಟು ಪ್ಯಾಕೇಜ್ ಆಗಿದ್ದರೆ ದೊಡ್ಡ ಮೊತ್ತ ಅರ್ಥವಾಗಬಹುದು. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾಗಳಿಗೆ ನಿರ್ಮಾಪಕರು ತಮ್ಮ ಹೂಡಿಕೆಯನ್ನು ವಿವಿಧ ಹಕ್ಕುಗಳ ಮಾರಾಟದ ಮೂಲಕ ರಿಕವರ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಥಿಯೇಟರ್ ರನ್ ಮುಗಿದ ಬಳಿಕ OTTಯಲ್ಲಿ ಹೊಸ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯವೂ ಸಿನಿಮಾದ ಬೆಲೆಯನ್ನು ಹೆಚ್ಚಿಸಬಹುದು. ಸಿನಿಮಾ OTTಯಲ್ಲಿ ಸಾಮಾನ್ಯ ಸಬ್ಸ್ಕ್ರಿಪ್ಷನ್‌ಗೆ ಮಾತ್ರವಲ್ಲದೆ PPV ಮಾದರಿಯಲ್ಲೂ ಲಭ್ಯವಾದರೆ, ಪ್ಲಾಟ್‌ಫಾರ್ಮ್‌ಗೆ ಹೆಚ್ಚುವರಿ ಆದಾಯದ ನಿರೀಕ್ಷೆ ಇರಬಹುದು.
ಇನ್ನೊಂದು ವರದಿಯ ಪ್ರಕಾರ, ₹235 ಕೋಟಿ ಬೆಲೆಯ ಬೇಡಿಕೆಯ ಕಾರಣದಿಂದ ಕೆಲವು ದೊಡ್ಡ OTT ಪ್ಲಾಟ್‌ಫಾರ್ಮ್‌ಗಳು ಹಿಂದೆ ಸರಿದ್ದಾವೇ ಅನ್ನೋ ಮಾತು ಕೂಡ ಕೇಳಿಬಂದಿದೆ. ನಂತರ ZEE5 ಮೂಲಕ ಪೇ-ಪರ್-ವ್ಯೂ ಮಾದರಿಯಲ್ಲಿ ಸಿನಿಮಾ ಬರಬಹುದು ಎಂಬ ಚರ್ಚೆಯೂ ನಡೆದಿದೆ. ಆದರೆ ಇದೂ ಕೂಡ ಅಧಿಕೃತವಾಗಿ ದೃಢಪಟ್ಟಿಲ್ಲ.
ಹೀಗಾಗಿ ಸದ್ಯಕ್ಕೆ ಹೇಳಬಹುದಾದದ್ದು ಒಂದೇ — Toxic OTT ಡೀಲ್ ಬಗ್ಗೆ ₹235 ಕೋಟಿ ಅನ್ನೋ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆದರೆ ಅಧಿಕೃತ ಕನ್ಫರ್ಮೇಷನ್ ಬರುವವರೆಗೂ ಇದನ್ನು ಖಚಿತವಾದ ಡೀಲ್ ಅಂತ ಹೇಳಲು ಸಾಧ್ಯವಿಲ್ಲ. ಅಂತಿಮವಾಗಿ, ನಿರ್ಮಾಪಕರು ಅಥವಾ ZEE5 ಅಧಿಕೃತವಾಗಿ ಘೋಷಣೆ ಮಾಡಿದಾಗ ಮಾತ್ರ ಈ ₹235 ಕೋಟಿ ಡೀಲ್‌ನ ನಿಜವಾದ ಚಿತ್ರಣ ಹೊರಬರಲಿದೆ.

ನೋಡಿರಿ

