ನಾನಾ? ನೀನಾ ನೋಡೇ ಬಿಡೋಣ ಎಂದು ಜಿದ್ದಿಗೆ ಬಿದ್ದ ಹುಲಿಗಳು! – ಬಿಗ್​ ಫೈಟ್​ನಲ್ಲಿ ಗೆದ್ದಿದ್ದು ಯಾರು?

ನಾನಾ? ನೀನಾ ನೋಡೇ ಬಿಡೋಣ ಎಂದು ಜಿದ್ದಿಗೆ ಬಿದ್ದ ಹುಲಿಗಳು! – ಬಿಗ್​ ಫೈಟ್​ನಲ್ಲಿ ಗೆದ್ದಿದ್ದು ಯಾರು?

ಸಫಾರಿ ಹೋದ ಸಂದರ್ಭದಲ್ಲಿ ಕಾಡು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಕೆಲವೊಂದು ಪ್ರಾಣಿಗಳು ಅದರ ಪಾಡಿಗೆ ಇದ್ರೆ, ಕೆಲವು ಪ್ರಾಣಿಗಳು ಪ್ರವಾಸಿಗರ ಮೇಲೆ ಅಟ್ಯಾಕ್‌ ಮಾಡುತ್ತವೆ. ಇನ್ನೂ ಕೆಲ ಪ್ರಾಣಿಗಳು ಅವುಗಳೆ ಕಾದಾಟ ನಡೆಸುತ್ತಿರುತ್ತವೆ. ಇದೀಗ ಹುಲಿಗಳ ಕಾದಾಟದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಫುಲ್ ರಿಲಾಕ್ಸಿಂಗ್ ಮೂಡ್​​​​ನಲ್ಲಿ ಹುಲಿರಾಯ! – ಕೊಳದಲ್ಲಿ ಚೆಂಡಾಟವಾಡುತ್ತಾ ಜಾಲಿ ಮೂಡ್‌ನಲ್ಲಿ ಹುಲಿ!

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಹುಲಿಗಳ ಜಿದ್ದಾಜಿದ್ದಿಯ ಕಚ್ಚಾಟ ಕಂಡು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಉದ್ಯಾನವನದಲ್ಲಿ ಎರಡು ಹುಲಿಗಳು ಕಚ್ಚಾಡಿಕೊಂಡಿವೆ. ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್‌ ಆಗುತ್ತಿದೆ.

ಪಾರ್ಕ್​​​ನಲ್ಲಿ ಎರಡು ಹುಲಿಗಳು ರಾಜ ಗಂಭೀರ್ಯದಲ್ಲಿ ಹೆಜ್ಜೆ ಹಾಕುತ್ತ ಹೋಗುತ್ತಿವೆ. ಸಫಾರಿಗೆ ಬಂದಿದ್ದ ಪ್ರವಾಸಿಗರ ವಾಹನ ನಿಧಾನವಾಗಿ ಚಲಿಸುತ್ತಿರುತ್ತದೆ. ಈ ವೇಳೆ ಏಕಾಏಕಿ ಓಡಿ ಬಂದ ಒಂದು ಹುಲಿ ಇನ್ನೊಂದು ಹುಲಿ ಮೇಲೆ ಅಟ್ಯಾಕ್ ಮಾಡುತ್ತದೆ. ಕೊನೆಗೆ ಇಬ್ಬರೂ ನಾನಾ? ನೀನಾ ಎಂದು ಜಿದ್ದಿಗೆ ಬಿದ್ದು ಕಚ್ಚಾಡಿಕೊಂಡಿವೆ. ಹುಲಿಗಳ ಕದನವನ್ನು ಕಂಡುಕೊಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.

Shwetha M