ಲಡಾಖ್ ಗಡಿಯಲ್ಲಿ ಚೀನಾ ತಂಟೆಗೆ ಭಾರತದ ಟಕ್ಕರ್ – ಚೆನ್ಮೋ ಸೆಕ್ಟರ್‌ಗೆ ಪ್ರವಾಸಿಗರ ಭೇಟಿಗೆ ಅನುಮತಿ

ಲಡಾಖ್ ಗಡಿಯಲ್ಲಿ ಚೀನಾ ತಂಟೆಗೆ ಭಾರತದ ಟಕ್ಕರ್ – ಚೆನ್ಮೋ ಸೆಕ್ಟರ್‌ಗೆ ಪ್ರವಾಸಿಗರ ಭೇಟಿಗೆ ಅನುಮತಿ

ಲಡಾಖ್ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಗೆ ಟಕ್ಕರ್ ಕೊಡಲು ಭಾರತ ಸರ್ಕಾರ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಚೀನಾ ಗಡಿಗೆ ಹತ್ತಿರದಲ್ಲೇ ಇರುವ ಲಡಾಖ್‌ನ ಭಾಗವಾಗಿರುವ ಚಂಗ್ ಚೆನ್ಮೋ ಸೆಕ್ಟರ್‌ಗೆ ಇನ್ಮುಂದೆ ಪ್ರವಾಸಿಗರು ಭೇಟಿ ನೀಡಬಹುದು. ಅಷ್ಟೇ ಅಲ್ಲ, ಈ ಭಾಗದ ರಸ್ತೆಗಳಲ್ಲಿ ಬೈಕರ್‌ಗಳಿಗೂ ಕೂಡ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಚಂಗ್ ಚೆನ್ಮೋ ಭಾಗದಲ್ಲಿ ಭಾರತೀಯ ಸೇನೆ ಪೆಟ್ರೋಲಿಂಗ್ ಕೂಡ ನಡೆಸುತ್ತಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ  ʼಸಾಮಾನ್ಯʼ ಪಾಸ್‌ ಪೋರ್ಟ್‌! – ರಾಜತಾಂತ್ರಿಕ ಪಾಸ್‌ಪೋರ್ಟ್‌ ಗೆ ಕೋರ್ಟ್‌ ನಿರಾಕರಿಸಿದ್ದೇಕೆ?  

ಕಳೆದ ನಾಲ್ಕು ವರ್ಷಗಳಿಂದ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆ ನಿಯೋಜನೆಗೊಂಡಿದೆ. ಇದುವರೆಗೂ ಚಂಗ್ ಚೆನ್ಮೋ ಸೆಕ್ಟರ್‌ನಲ್ಲಿ ಸೇನೆ ಹೊರತಾಗಿ ಇನ್ಯಾರಿಗೂ ಪ್ರವೇಶ ಇರಲಿಲ್ಲ. 1959ರಲ್ಲಿ ಚೀನಾ ಸೈನಿಕರ ದಾಳಿಗೆ 10 ಮಂದಿ ಸಿಆರ್‌ಪಿಎಫ್ ಯೋಧರು ಈ ಪ್ರದೇಶದಲ್ಲಿ ಹುತಾತ್ಮರಾಗಿದ್ದರು. ಆದ್ರೀಗ ಈ ಸೂಕ್ಷ್ಮ ವಲಯದಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗಂತಾ ಚೀನಾ ಏನೂ ಸುಮ್ಮನೆ ಕುಳಿತಿಲ್ಲ. ಉತ್ತರಾಖಂಡ್ ಭಾಗದಲ್ಲಿರುವ ಗಡಿ ಪ್ರದೇಶದ ಬಳಿಕ ಚೀನಾ ಒಂದು ಗ್ರಾಮವನ್ನೇ ನಿರ್ಮಾಣ ಮಾಡುತ್ತಿದೆ. ಭಾರತದ ಗಡಿಯಿಂದ ಕೇವಲ 11 ಕಿಲೋ ಮೀಟರ್ ದೂರದಲ್ಲಿ ಗ್ರಾಮದ ನಿರ್ಮಾಣ ನಡೀತಿದ್ದು, ಸುಮಾರು 250 ಮನೆಗಳನ್ನ ಕಟ್ಟಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

suddiyaana