ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಅಂತಾ ನದಿಯಲ್ಲಿ ಕಾರು ಓಡಿಸಿದ! – ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನಿಗೆ ಕಾದಿತ್ತು ಶಾಕ್!

ಮಹೀಂದ್ರಾ ಥಾರ್ ಜನಪ್ರಿಯ ಆಫ್-ರೋಡ್ ಎಸ್ಯುವಿಯಾಗಿದೆ. ಹೀಗಾಗಿಯೇ ಅನೇಕರ ಅಚ್ಚುಮೆಚ್ಚಿನ ಕಾರು ಆಗಿದೆ. ಅದರ ಡಿಸೈನ್, ಪರ್ಫಾಮೆನ್ಸ್, ಪ್ರಯಾಣ, ಸುರಕ್ಷತೆ ಸೇರಿದಂತೆ ಎಲ್ಲವೂ ಉತ್ತಮ. ಮಣ್ಣಿನ ದಾರಿ, ಹೊಂಡಗಳಿರುವ ರಸ್ತೆಯಲ್ಲೂ ಸಲೀಸಾಗಿ ಪ್ರಯಾಣ ಮಾಡಬಹುದು. ಹೀಗಾಗಿಯೇ ಮಹೀಂದ್ರಾ ಥಾರ್ ಆಫ್ರೋಡ್ಗೇ ಹೆಚ್ಚು ಫೇಮಸ್. ಆದ್ರೆ ಮಹೀಂದ್ರಾ ಕಾರ್ ಆಫ್ರೋಡ್ನಲ್ಲಿ ಮಾತ್ರಾ ಓಡಾಡಲ್ಲ, ನದಿಯಲ್ಲೂ ಓಡಾಡುತ್ತೆ! ಹೌದು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ ಅಂತಾ ವ್ಯಕ್ತಿಯೊಬ್ಬ ಕಾರ್ ಅನ್ನು ನದಿಯಲ್ಲಿ ಓಡಿಸಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಕೋವಿಡ್ ಪಾಸಿಟಿವ್ ಬಂದ್ರೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ – ದಿನೇಶ್ ಗುಂಡೂರಾವ್
ಹೌದು, ಹಿಮಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವುದನ್ನು ನೋಡಿದ ಕಾರ್ ಚಾಲಕ ತಲೆ ಕೆಡಿಸಿಕೊಂಡಿದ್ದಾನೆ. ಟ್ರಾಫಿಕ್ನಲ್ಲಿ ಸಿಕ್ಕಾಕಿಕೊಂಡರೆ ಸಮಯ ವ್ಯರ್ಥ ಅಂತಾ ಆತ ತನ್ನ ಮಹಿಂದ್ರಾ ಥಾರ್ ಅನ್ನು ನದಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ರಸ್ತೆ ಬಿಟ್ಟು ನದಿಯಲ್ಲಿ ಗಾಡಿ ಓಡಿಸಿದ ಚಾಲಕನಿಗೆ ಬಿತ್ತು ದಂಡ!
ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಇಂತಹ ಅಪಾಯಕಾರಿ ಅಪರಾಧವನ್ನು ಬೇರೆಯವರು ಪುನರಾವರ್ತಿಸದಂತೆ ಖಚಿತಪಡಿಸಿಕೊಳ್ಳಲು, SUV ನ ಚಾಲಕನಿಗೆ ಭಾರಿ ದಂಡವನ್ನು ಸಹ ವಿಧಿಸಲಾಗಿದೆ.
‘ಈ ವಾಹನದ ಮೇಲೆ ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಭವಿಷ್ಯದಲ್ಲಿ ಯಾರೂ ಇಂಥಾ ಅಪರಾಧ ಮಾಡದಂತೆ ನೋಡಿಕೊಳ್ಳಲು, ಪೊಲೀಸರು ಹೇಳಿದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ಎಸ್ಪಿ ಮಯಾಂಕ್ ಚೌಧರಿ ತಿಳಿಸಿದ್ದಾರೆ.