764 ಅಡಿ ಎತ್ತರದಿಂದ ಬಂಗೀ ಜಂಪ್ – ಚೀನಾದ ಮಕಾವು ಟವರ್ ನಿಂದ ಹಾರಿದ ವ್ಯಕ್ತಿಗೆ ಕಾದಿತ್ತು ಆಘಾತ

764 ಅಡಿ ಎತ್ತರದಿಂದ ಬಂಗೀ ಜಂಪ್ – ಚೀನಾದ ಮಕಾವು ಟವರ್ ನಿಂದ ಹಾರಿದ ವ್ಯಕ್ತಿಗೆ ಕಾದಿತ್ತು ಆಘಾತ

ಕೆಲವರು ಸಾಧನೆ ಮಾಡಬೇಕು ಅಂತಾ ಏನೇನೋ ಕಸರತ್ತು ನಡೆಸುತ್ತಾರೆ. ಅದರಲ್ಲೂ ಮತ್ತೆ ಕೆಲವರ ಸಾಹಸಗಳು ಭಯಾನಕವಾಗಿರುತ್ತವೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಮಾಡುವ ಅದೆಷ್ಟೋ ಸಾಹಸಿಗಳೂ ಇದ್ದಾರೆ. ಹೀಗೆಯೇ ಇಲ್ಲೊಬ್ಬ ಅತೀ ಎತ್ತರದಿಂದ ಬಂಗೀ ಜಂಪ್ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಎತ್ತರದಿಂದ ಜಂಪ್ ಮಾಡುವುದು ಒಂದು ಸಾಹಸವೇ. ಅದರಲ್ಲೂ ವಿಶ್ವದ ಅತಿ ಎತ್ತರದ ಬಂಗೀ ಜಂಪ್ ಗೆ ಚೀನಾದ ಮಕಾವು ಟವರ್ ಪ್ರಸಿದ್ಧಿ ಪಡೆದಿದೆ. ಮಕಾವು ಟವರ್ ನಿಂದ ಬಂಗೀ ಜಂಪ್ ಮಾಡಿ ಪ್ರವಾಸಿಗರು ಎಂಜಾಯ್ ಮಾಡ್ತಾರೆ. ಮಕಾವು ಗೋಪುರ 764 ಅಡಿ ಎತ್ತರ ಇದೆ. 56 ವರ್ಷದ ವ್ಯಕ್ತಿಯೊಬ್ಬರು 764 ಅಡಿ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸ ಮಾಡುವ ವೇಳೆ ವ್ಯಕ್ತಿಗೆ ಯಾವುದೇ ಸಮಸ್ಯೆ ಆಗ್ಲಿಲ್ಲ. ಆದರೆ ಬಂಗೀ ಜಂಪ್ ಮುಗಿಸಿ ಬಂದ್ಮೇಲೆ ಅವರಿಗೆ ಉಸಿರಾಟದ ತೊಂದರೆ ಶುರುವಾಗಿದೆ. ಸ್ವಲ್ಪ ಸಮಯದ ನಂತರ ಅವರ ಉಸಿರಾಟವು ಸಂಪೂರ್ಣವಾಗಿ ನಿಂತುಹೋಗಿದೆ.

ಇದನ್ನೂ ಓದಿ : ಚಿಕನ್ ಸಾರು ಮಾಡಿಲ್ಲವೆಂದು ಪತ್ನಿಯನ್ನು ಕೊಲೆಗೈದಿದ್ದ ಪಾಪಿ ಪತಿಗೆ 6 ವರ್ಷ ಜೈಲು ಶಿಕ್ಷೆ!

ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿರುವ ಸ್ಕೈಟವರ್‌ನ ಮಾದರಿಯಲ್ಲಿ ಮಕಾವು ಗೋಪುರದ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣ 1998 ರಲ್ಲಿ ಶುರುವಾಯ್ತು. ಸಾಹಸಿಗಳಿಗೆ ಇದೊಂದು ಅಧ್ಬುತ ಅನುಭವ ಎನ್ನಬಹುದು.  ಗಂಟೆಗೆ 200 ಕಿಮೀ ವೇಗದಲ್ಲಿ 233 ಮೀಟರ್ ಎತ್ತರದ ಪ್ಲಾಟ್‌ಫಾರ್ಮ್‌ನಿಂದ ಅಂದ್ರೆ 61 ನೇ ಮಹಡಿಯಿಂದ ಕೆಳಗಿ  ಬೀಳುತ್ತೀರಿ. ನೆಲದಿಂದ ಸುಮಾರು 30 ಮೀಟರ್‌ಗಳಷ್ಟು ಎತ್ತರದಲ್ಲಿ ಪುಟಿಯುತ್ತೀರಿ.  ಮಕಾವು ಗೋಪುರವು 338m (1100ft) ಎತ್ತರವಾಗಿದೆ. ಆದರೆ ಬಂಗೀ ಜಂಪಿಂಗ್ 233m (764ft) ಎತ್ತರದಿಂದ ನಡೆಯುತ್ತದೆ. ಬಂಗೀ ಜಂಪ್ ಮಾಡುವ ಬದಲು ಸುರಕ್ಷತೆ ಬಗ್ಗೆ ಅಲ್ಲಿನ ಸಿಬ್ಬಂದಿ ಗಮನ ಹರಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಮೆಡಿಕಲ್ ದಾಖಲೆಯನ್ನು ನೀಡಬೇಕಾಗುತ್ತದೆ. ಅಧಿಕ ರಕ್ತದೊತ್ತಡ, ಅಸ್ತಮಾ ಮತ್ತು ಮಧುಮೇಹ, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗಳಿಗೆ ಬಂಗೀ ಜಂಪ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಈ ಟವರ್ ಮಕಾವು ಪೆನಿನ್ಸುಲಾ, ತೈಪಾ ಮತ್ತು ಕೊಲೋನ್‌ನ 360-ಡಿಗ್ರಿ ವೀಕ್ಷಣೆಗಳನ್ನು ನೀಡುತ್ತವೆ. ಗೋಪುರವು ಹಲವಾರು ರೆಸ್ಟೋರೆಂಟ್‌ಗಳು, ಸಿನಿಮಾ, ಕ್ಯಾಸಿನೊ, ನೆಲ ಅಂತಸ್ತಿನ ಹೊರಾಂಗಣ ಪ್ಲಾಜಾದಲ್ಲಿ ವಾಟರ್‌ಫ್ರಂಟ್ ವೀಕ್ಷಣೆಗಳು ಮತ್ತು ಟಾಯ್ಸ್‌ಆರ್’ಯುಸ್ ಮತ್ತು ಐಎಸ್‌ಎ ಔಟ್‌ಲೆಟ್‌ಗಳನ್ನು ಒಳಗೊಂಡಿರುವ ಶಾಪಿಂಗ್ ಅನ್ನು ಒಳಗೊಂಡಿದೆ. ಇದ್ರಲ್ಲಿ ಪಾಲ್ಗೊಳ್ಳಲು ಮೊದಲೇ ಬುಕ್ಕಿಂಗ್ ನಡೆಯುತ್ತದೆ. ಒಬ್ಬ ವ್ಯಕ್ತಿ 2,888 ಮಕಾನೀಸ್ ಪಟಾಕಾ ಅಂದಾಜು 30,000 ರೂಪಾಯಿ ಪಾವತಿಸಬೇಕಾಗುತ್ತದೆ.

Shantha Kumari