ಐಪಿಎಲ್ ಸಂಭ್ರಮದ ನಡುವೆ ಕೊರೊನಾ ಆತಂಕ – ಜಾರಿಯಾಗುತ್ತಾ ಟಫ್ ರೂಲ್ಸ್?

ಐಪಿಎಲ್ ಸಂಭ್ರಮದ ನಡುವೆ ಕೊರೊನಾ ಆತಂಕ – ಜಾರಿಯಾಗುತ್ತಾ ಟಫ್ ರೂಲ್ಸ್?

ಎಲ್ಲೆಡೆ ಐಪಿಎಲ್ ಹವಾ ಜೋರಾಗಿದೆ. ಅದರಲ್ಲೂ ಬೆಂಗಳೂರಿನಲ್ಲಂತೂ ಕ್ರೀಡಾಭಿಮಾನಿಗಳು ಐಪಿಎಲ್ ಗುಂಗಿನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ತವರು ನೆಲದಲ್ಲೇ ಆರ್ಸಿಬಿ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಆರ್‌ಸಿಬಿ ಗೆಲುವಿನ ಖುಷಿಯಲ್ಲಿರುವ ಬೆಂಗಳೂರಿಗರಿಗೆ ಮತ್ತೊಂದು ಆತಂಕವೂ ಎದುರಾಗಿದೆ. ಐಪಿಎಲ್ ಮ್ಯಾಚ್ ನೋಡಲು 30-35 ಸಾವಿರ ಜನ ಒಂದಡೆ ಗುಂಪು ಸೇರುತ್ತಿರುವುದು ಕೊರೊನಾ ವೈರಸ್ ಏರಿಕೆಯ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:  ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಪಾಸಿಟಿವ್  – 20 ಸಾವಿರ ಗಡಿದಾಟಿದ ಸಕ್ರಿಯ ಪ್ರಕರಣ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನೋಡಲು ಬೆಳಿಗ್ಗೆಯಿಂದ ಸಾಯಂಕಾಲದವರೆಗು ಅಭಿಮಾನಿಗಳು ಸೇರಿದ್ದರು. ಸ್ಟೇಡಿಯಂ ಭರ್ತಿಯಾಗಿತ್ತು. ಆದರೆ, ಇಷ್ಟು ಜನ ಒಂದೇ ಕಡೆ ಸೇರಿದ್ದರಿಂದ ಕೊರೊನಾ ವೈರಸ್ ಹರಡುವ ಆತಂಕವೂ ಹೆಚ್ಚಾಗಿದೆ. ಈಗಾಗಲೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಗುಂಪು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಕ್ರೀಡಾಂಗಣದಲ್ಲಿ ಕೊರೊನಾ ವೈರಸ್ ರೂಲ್ಸ್ ಜಾರಿ ಮಾಡಲು ಚಿಂತನೆ ನಡೆಸಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದು, ಯಾವೆಲ್ಲ ರೂಲ್ಸ್ ಜಾರಿ ಮಾಡಬಹುದು ಎಂದು ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಒಂದು ವೇಳೆ ಕೊರೊನಾ ವೈರಸ್ ಏರಿಕೆಯಾದರೆ, ಮೈದಾನದ ಒಳಗೆ ಪ್ರವೇಶಿಸುವಾಗ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಅನ್ನು ಜಾರಿ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಾ ರಂದೀಪ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಾವಳಿ ಮತ್ತೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,400 ದಾಟಿದೆ. ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಶೇ 59ರಷ್ಟು ಹೊಸ ಪ್ರಕರಣಗಳು ದೃಢಪಟ್ಟಿವೆ. ಏಪ್ರಿಲ್ 1ರಂದು ರಾಜ್ಯದಲ್ಲಿ 284 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.

suddiyaana