ಮರೆಯಾದ ಕ್ರೀಡಾತಾರೆ – ಎರಡು ಬಾರಿ ವಿಶ್ವಚಾಂಪಿಯನ್ ಶಿಪ್ ಗೆದ್ದ ಟೋರಿ ಬೋವಿ ಇನ್ನಿಲ್ಲ

ಮರೆಯಾದ ಕ್ರೀಡಾತಾರೆ – ಎರಡು ಬಾರಿ ವಿಶ್ವಚಾಂಪಿಯನ್ ಶಿಪ್ ಗೆದ್ದ ಟೋರಿ ಬೋವಿ ಇನ್ನಿಲ್ಲ

ಒಲಿಂಪಿಕ್ಸ್ ಕ್ರೀಡೆಯಲ್ಲಿ ಮೂರು ಪದಕಗಳು ಹಾಗೂ ಎರಡು ಬಾರಿ ವಿಶ್ವಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದ ಅಮೇರಿಕಾದ ಟೋರಿ ಬೋವಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ 32 ವರ್ಷದ ಬೋವಿ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಲು ಹಿಂದೇಟು ಹಾಕಿದೆ ಎಂಬ ಆರೋಪಗಳು ಕೇಳಿಬಂದಿದೆ.

ಇದನ್ನೂ ಓದಿ:  ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಕೆ.ಎಲ್ ರಾಹುಲ್ – ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೂ ಡೌಟ್..!

ಬೋವೀ ಅವರ ಸಾವಿನ ಸುದ್ದಿಯನ್ನು ಅವರ ನಿರ್ವಹಣಾ ಕಂಪನಿ ಮತ್ತು USA ಟ್ರ್ಯಾಕ್ ಮತ್ತು ಫೀಲ್ಡ್ ಬುಧವಾರ ಘೋಷಿಸಿತು. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ತಮ್ಮ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಟೋರಿ ಬೋವಿ ಹಠಾತ್ ನಿಧನವು ಆಘಾತ ತಂದಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ. ಟೋರಿ 2016ರ ಒಲಿಂಪಿಕ್‌ನಲ್ಲಿ ಮೂರು ಪದಕಗಳನ್ನು ಬಾಚಿಕೊಂಡಿದ್ದರು. 4*100 ಮೀಟರ್ ರಿಲೇನಲ್ಲಿ ಚಿನ್ನದ ಪದಕ 100 ಮೀಟರ್ ರಿಲೇನಲ್ಲಿ ಬೆಳ್ಳಿ ಹಾಗೂ 200 ಮೀಟರ್ ಓಟದಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದರು. 2017ರ ವಿಶ್ವಚಾಂಪಿಯನ್‌ ಶಿಪ್‌ನಲ್ಲಿ 100 ಮೀಟರ್ ಓಟ ಮತ್ತು 4*100 ಮೀಟರ್ ರಿಲೇನಲ್ಲಿ ಚಿನ್ನದ ಪದಕ ಗಳಿಸಿದ್ದರು. ಕೊನೆಯದಾಗಿ 2022ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

suddiyaana