IPLಗೆ ಮ್ಯಾಕ್ಸಿ, ಫಾಫ್ ಗುಡ್ ಬೈ – UNSOLD ಟೆನ್ಷನ್.. PSLಗೆ ಎಂಟ್ರಿ!
ರಸೆಲ್ ನಿವೃತ್ತಿ ಯಾರಿಗೆಲ್ಲಾ ಪ್ಲಸ್?  

IPLಗೆ ಮ್ಯಾಕ್ಸಿ, ಫಾಫ್ ಗುಡ್ ಬೈ – UNSOLD ಟೆನ್ಷನ್.. PSLಗೆ ಎಂಟ್ರಿ!ರಸೆಲ್ ನಿವೃತ್ತಿ ಯಾರಿಗೆಲ್ಲಾ ಪ್ಲಸ್?  

2026ರ ಐಪಿಎಲ್​ಗೆ ಸಜ್ಜಾಗ್ತಿರೋ ಫ್ರಾಂಚೈಸಿಗಳು ಮಿನಿ ಆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಡಿಸೆಂಬರ್ 16ಕ್ಕೆ ಅಬುದಾಬಿಯಲ್ಲಿ ಮಿನಿ ಹರಾಜು ನಡೆಯಲಿದ್ದು ಆಟಗಾರರ ಶಾರ್ಟ್ ಲಿಸ್ಟ್ ರೆಡಿ ಮಾಡಿಕೊಳ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಆಕ್ಷನ್ ನಡೆಯೋ ಮುನ್ನವೇ ಕೆಲ ದಿಗ್ಗಜ ಆಟಗಾರರು ಐಪಿಎಲ್​ನಿಂದಲೇ ಹಿಂದೆ ಸರಿದಿದ್ದಾರೆ. ವರ್ಷಗಳ ಕಾಲ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟವ್ರೇ ದಿಢೀರ್ ಯುಟರ್ನ್ ಹೊಡೆದಿದ್ದಾರೆ. ಇದ್ರಲ್ಲಿ ಆರ್​ಸಿಬಿಯ ಮಾಜಿ ಆಟಗಾರರೂ ಇದ್ದಾರೆ.

ಇದನ್ನೂ ಓದಿ : JUSTICE FOR ರಿಂಕು ಸಿಂಗ್ – ದುಬೆ & ಸುಂದರ್ ಗಂಭೀರ್ ಮಕ್ಕಳಾ?

ಅಬುಧಾಬಿಯಲ್ಲಿ ನಡೆಯಲಿರುವ 2026ರ ಐಪಿಎಲ್ ಮಿನಿ ಹರಾಜಿನಲ್ಲಿ 10 ಫ್ರಾಂಚೈಸಿಗಳಿಗೆ 77 ಆಟಗಾರರನ್ನ ಖರೀದಿ ಮಾಡುವ ಅವಕಾಶ ಇದೆ. ಇದರಲ್ಲಿ 31 ವಿದೇಶಿ ಪ್ಲೇಯರ್ಸ್ ಖರೀದಿ ಮಾಡ್ಬೇಕು. ಒಟ್ಟಾರೆ 1,355 ಕ್ರಿಕೆಟಿಗರು ಅಖಾಡದಲ್ಲಿದ್ದಾರೆ. ಭಾರತದಿಂದ 1,062 ಮತ್ತು ವಿದೇಶದಿಂದ 293 ಆಟಗಾರರು ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಆದ್ರೆ ತಂಡದಿಂದ ಬಿಡುಗಡೆಯಾದ ಕೆಲ ಸ್ಟಾರ್ ಪ್ಲೇಯರ್​ಗಳೇ ಐಪಿಎಲ್​ನಿಂದಲೇ ದೂರ ಸರಿಯೋಕೆ ಮುಂದಾಗಿದ್ದಾರೆ. ಕೆಲವ್ರು ನಿವೃತ್ತಿ ಘೋಷಿಸಿದ್ರೆ ಇನ್ನೂ ಕೆಲವ್ರು ಬೇರೆ ಲೀಗ್​ಗಳತ್ತ ಮುಖ ಮಾಡಿದ್ದಾರೆ.

ಅಚ್ಚರಿ ಎನ್ನುವಂತೆ ಐಪಿಎಲ್ ನಿವೃತ್ತಿ ಘೋಷಿಸಿದ ರಸೆಲ್!

ಕೆರೆಬಿಯನ್ ನಾಡಿದ ದೈತ್ಯ ದಾಂಡಿಗ ಈ ಬಾರಿ ಐಪಿಎಲ್ ಮಿನಿ ಆಕ್ಷನ್​ನ ಒನ್ ಆಫ್ ದಿ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಆಗಿದ್ರು. ಸಾಕಷ್ಟು ಫ್ರಾಂಚೈಸಿಗಳು ಆಲ್​ರೌಂಡ್ ಕೋಟಾಗಾಗಿ ಕಣ್ಣಿಟ್ಟಿದ್ರು. 2026ರ ಐಪಿಎಲ್ ಮಿನಿ ಹರಾಜಿಗೆ ಕೆಕೆಆರ್ ಫ್ರಾಂಚೈಸಿ ಅವ್ರನ್ನ ರಿಲೀಸ್ ಮಾಡಿತ್ತು. ಆದ್ರೆ ಅಚ್ಚರಿ ಎನ್ನುವಂತೆ ರಸೆಲ್ ಐಪಿಎಲ್​ನಿಂದಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕೆಕೆಆರ್ ಪರ 2 ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದು ಮಿಡಲ್ ಆರ್ಡರ್ ಪವರ್ ಹಿಟ್ಟರ್ ಮತ್ತು ಡೆತ್-ಓವರ್ ಬೌಲಿಂಗ್ ಸ್ಪೆಷಲಿಸ್ಟ್ ಆಗಿದ್ರು. ಆದ್ರೆ ದಿಢೀರ್ ನಿವೃತ್ತಿ ಘೋಷಿಸಿದ್ದು ಕೆಕೆಆರ್‌ನ ಪವರ್ ಕೋಚ್ ಉಳಿಯಲಿದ್ದಾರೆ.

ಮಿನಿ ಆಕ್ಷನ್ ಗೆ ಹೆಸರು ನೋಂದಾಯಿಸದ ಮ್ಯಾಕ್ಸ್ ವೆಲ್!

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರನ್ನ ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದೆ. ಆದ್ರೆ 37 ವರ್ಷದ ಮ್ಯಾಕ್ಸ್‌ವೆಲ್ ಐಪಿಎಲ್ 2026 ರ ಮಿನಿ-ಹರಾಜಿಗೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ. ಹಾಗೇ ಮುಂದಿನ ದಿನಗಳಲ್ಲೂ ವಾಪಸ್ ಬರಲ್ಲ ಎನ್ನುವಂತೆಯೇ ಮಾತನಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್​ನಲ್ಲಿರೋ ಮ್ಯಾಕ್ಸಿ ಈ ಬಾರಿ ಅನ್​ಸೋಲ್ಡ್ ಭೀತಿಯಿಂದಲೇ ಹಿಂದೆ ಸರಿದಿರೋ ಸಾಧ್ಯತೆ ಇದೆ. ಆರ್​ಸಿಬಿ ಪರವೂ ಆಡಿದ್ದ ಮ್ಯಾಕ್ಸಿ ಒನ್ಸ್ ಅಪಾನ್ ಎ ಟೈಂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಒಟ್ಟಾರೆ ಐಪಿಎಲ್​ನಲ್ಲಿ141 ಪಂದ್ಯಗಳಲ್ಲಿ ಆಡಿದ್ದು 2819 ರನ್ ಗಳಿಸಿದ್ದಾರೆ ಮತ್ತು 41 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪಿಎಸ್ ಎಲ್ ನತ್ತ ಮುಖ ಮಾಡಿದ ಆರ್ ಸಿಬಿ ಮಾಜಿ ನಾಯಕ?

2022ರಿಂದ ಮೂರು ವರ್ಷಗಳ ಕಾಲ ಆರ್​ಸಿಬಿ ಕ್ಯಾಪ್ಟನ್ ಆಗಿದ್ದ ಫಾಫ್ ಡುಪ್ಲೆಸಿಸ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ರು. ಆದ್ರೆ ಈಗ ತಂಡದಿಂದ ರಿಲೀಸ್ ಮಾಡಲಾಗಿತ್ತು. ಸೋ ಮಿನಿ ಆಕ್ಷನ್​ನಲ್ಲಿ 40 ವರ್ಷದ ಫಾಫ್ ಅನ್​ಸೋಲ್ಡ್ ಆಗೋ ಟೆನ್ಷನ್​ನಲ್ಲಿದ್ರು. ಹೀಗಾಗಿ ಐಪಿಎಲ್​ ಮಿನಿ-ಹರಾಜಿನಲ್ಲಿ ಭಾಗವಹಿಸುವುದಿಲ್ಲ ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್ (PSL) ನಲ್ಲಿ ಆಡುವುದಾಗಿ ಘೋಷಿಸಿದ್ದಾರೆ. 154 ಐಪಿಎಲ್ ಪಂದ್ಯಗಳನ್ನ ಆಡಿದ್ದ ಫಾಫ್ 4773 ರನ್ಸ್ ಕಲೆ ಹಾಕಿದ್ದಾರೆ.

ಐಪಿಎಲ್ ಬಿಟ್ಟು ಪಾಕ್ ಲೀಗ್ ನತ್ತ ಹೊರಟ ಮೊಯಿನ್ ಅಲಿ!

38 ವರ್ಷದ ಇಂಗ್ಲಿಷ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಐಪಿಎಲ್ 2026 ರ ಹರಾಜಿನಿಂದ ಹೊರಗುಳಿದಿದ್ದಾರೆ. ಮುಂದಿನ ಆವೃತ್ತಿಯಲ್ಲಿ  ಫಾಫ್ ಡು ಪ್ಲೆಸಿಸ್ ಜೊತೆಗೆ ಪಿಎಸ್‌ಎಲ್‌ನಲ್ಲಿ ಆಡಲಿದ್ದಾರೆ. ಸತತ ಎಂಟು ಸೀಸನ್​ಗಳಿಂದ ಐಪಿಎಲ್ ಆಡಿದ್ದು 73 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳ ಜೆರ್ಸಿ ತೊಟ್ಟಿದ್ದು 1,167 ರನ್‌ಗಳನ್ನು ಗಳಿಸಿದ್ದಾರೆ ಮತ್ತು 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಈ ನಾಲ್ವರು ಆಟಗಾರರು ಹೊರ ಬಿದ್ದಿರೋದ್ರಿಂದ ಬೇರೆ ವಿದೇಶಿ ಆಟಗಾರರಿಗೆ ಡಿಮ್ಯಾಂಡ್ ಜಾಸ್ತಿ ಆಗ್ಬೋದು. ಯಾಕಂದ್ರೆ ವಿದೇಶಿ ಕೋಟಾದಲ್ಲಿ ಖರೀದಿ ಮಾಡಬೇಕಿರೋದ್ರಿಂದ ಕ್ಯಾಮರೂನ್ ಗ್ರೀನ್, ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ವನಿಂದು ಹಸರಂಗಗೆ ಡಿಮ್ಯಾಂಡ್ ಕ್ರಿಯೇಟ್ ಆಗ್ಬೋದು.

Shantha Kumari