ಪುಣ್ಯಫಲಕ್ಕಾಗಿ ನಾಗರ ಪಂಚಮಿ ಸಮಯದಲ್ಲಿ ನಾಗನ ಈ ದೇವಸ್ಥಾನಗಳಿಗೆ ಭೇಟಿ ನೀಡಿ

ಪುಣ್ಯಫಲಕ್ಕಾಗಿ ನಾಗರ ಪಂಚಮಿ ಸಮಯದಲ್ಲಿ ನಾಗನ ಈ ದೇವಸ್ಥಾನಗಳಿಗೆ  ಭೇಟಿ ನೀಡಿ

ನಾಗರ ಪಂಚಮಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಾಗರ ಪಂಚಮಿಯನ್ನ ನಮ್ಮ ದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ನಾಗರ ಪಂಚಮಿ ಸಮಯದಲ್ಲಿ ನಾಗನ ಈ ದೇವಸ್ಥಾನಗಳಿಗೆ ಭೇಟಿ ನೀಡುವುದ್ದರಿಂದ ವಿಶೇಷ ಫಲ ಪ್ರಾಪ್ತಿಯಾಗಲಿದೆ ಅನ್ನೋ ನಂಬಿಕೆ ಇದೆ. ಹಾಗಿದ್ರೆ ಆ ದೇವಸ್ಥಾನಗಳು ಯಾವುದು ಅನ್ನೋದ್ದನ್ನ ನೋಡೋಣ.

ಕುಕ್ಕೆ ಸುಬ್ರಹ್ಮಣ್ಯ

ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ವಿಶ್ವಪ್ರಸಿದ್ಧ ನಾಗಾರಾಧನಾ ಪುಣ್ಯಕ್ಷೇತ್ರವಾಗಿದೆ. ಪುರಾಣಗಳ ಪ್ರಕಾರ, ಗರುಡನ ಭಯದಿಂದ ರಕ್ಷಣೆ ಬೇಡಿ ಬಂದ ಸರ್ಪರಾಜ ವಾಸುಕಿಗೆ ಸುಬ್ರಹ್ಮಣ್ಯ ಸ್ವಾಮಿ ಇಲ್ಲಿಯೇ ಅಭಯ ನೀಡಿದನೆಂದು ಹೇಳಲಾಗುತ್ತದೆ.

ಮನ್ನಾರಸಾಲ ಕ್ಷೇತ್ರ

ಕೇರಳದ ಆಲಪ್ಪುಳ ಜಿಲ್ಲೆಯ ದಟ್ಟ ಅರಣ್ಯದ ನಡುವೆ ನೆಲೆಸಿರುವ ಮನ್ನಾರಸಾಲ ಕ್ಷೇತ್ರವು ಸಾವಿರಾರು ನಾಗರಕಲ್ಲುಗಳು ಮತ್ತು ವಿಗ್ರಹಗಳನ್ನು ಹೊಂದಿರುವ ವಿಸ್ಮಯ ತಾಣ.

‘ನಾಗರಕೋಯಿಲ್’

ತಮಿಳುನಾಡಿನ ಕನ್ಯಾಕುಮಾರಿ ಬಳಿಯಿರುವ ಈ ಪ್ರಸಿದ್ಧ ದೇವಾಲಯದ ಹೆಸರಿನಿಂದಲೇ ಆ ಊರಿಗೆ ‘ನಾಗರಕೋಯಿಲ್’ ಎಂಬ ಹೆಸರು ಬಂದಿದೆ.

ನಾಗಚಂದ್ರೇಶ್ವರ ದೇವಾಲಯ

ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಮೂರನೇ ಮಹಡಿಯಲ್ಲಿದೆ ನಾಗಚಂದ್ರೇಶ್ವರ ಸನ್ನಿಧಿ. ಈ ದೇವಾಲಯದ ಅತಿದೊಡ್ಡ ಪವಾಡವೆಂದರೆ ಇದು ವರ್ಷಕ್ಕೆ ಕೇವಲ ಒಂದು ದಿನ (ನಾಗರ ಪಂಚಮಿಯಂದು ಮಾತ್ರ 24 ಗಂಟೆಗಳ ಕಾಲ) ಭಕ್ತರ ದರ್ಶನಕ್ಕೆ ತೆರೆಯಲ್ಪಡುತ್ತದೆ!

ತಿರುನಾಗೇಶ್ವರಂ

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಬಳಿಯಿರುವ ತಿರುನಾಗೇಶ್ವರಂ ಕ್ಷೇತ್ರವು ನವಗ್ರಹಗಳಲ್ಲಿ ಒಂದಾದ ‘ರಾಹು’ ದೋಷ ಪರಿಹಾರಕ್ಕೆ ಅತ್ಯಂತ ಪ್ರಸಿದ್ಧ. ಇಲ್ಲಿ ಶಿವನನ್ನು ‘ನಾಗನಾಥಸ್ವಾಮಿ’ ಎಂದು ಆರಾಧಿಸಲಾಗುತ್ತದೆ.

Kishor KV

Leave a Reply

Your email address will not be published. Required fields are marked *