ಪಾಂಡ್ಯ-ಜೈಸ್ವಾಲ್ Swap Deal – KKR ಕ್ಯಾಪ್ಟನ್ ಆಗ್ತಾರಾ ಸೂರ್ಯ?
IPLನಲ್ಲಿ 5 ಬಿಗ್ ಪ್ಲೇಯರ್ಸ್ ಟ್ರೇಡ್?

2026ರ ಐಪಿಎಲ್ ಮುಗ್ದು ತಿಂಗಳು ಕಳೆಯೋ ಮೊದ್ಲೇ ಎರಡು ತಂಡಗಳ ನಡುವೆ ಭರ್ಜರಿ ಡೀಲ್ ಆಗಿದೆ. ಇಬ್ಬರು ಘಟಾನುಘಟಿ ಪ್ಲೇಯರ್ಗಳು ಸ್ವ್ಯಾಪ್ ಡೀಲ್ ಮೂಲಕ ಅದಲುಬದಲಾಗಿದ್ದಾರೆ. ಜೊತೆಗೆ ಮತ್ತೊಂದಷ್ಟು ಪ್ಲೇಯರ್ಸ್ ಕೂಡ ಟ್ರೇಡಿಂಗ್ ಲಿಸ್ಟ್ನಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಕಾಸ್ಟ್ಲಿಯೆಸ್ಟ್ ಪ್ಲೇಯರ್ ಆಗಿದ್ದ ರಿಷಬ್ ಪಂತ್ ಕೊನೆಗೂ ಲಕ್ನೋ ಸೂಪರ್ ಜೇಂಟ್ಸ್ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ. 19ನೇ ಸೀಸನ್ ಮುಗಿದ ಬೆನ್ನಲ್ಲೇ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದ ಪಂತ್ ಈಗ ತಂಡದಿಂದಲೇ ಹೊರಬಂದಿದ್ದಾರೆ. ಅದೂ ಕೂಡ ತಮ್ಮ ಹಿಂದಿನ ತಂಡಕ್ಕೆ ರೀ ಜಾಯ್ನ್ ಆಗ್ತಿದ್ದಾರೆ.
ಇದನ್ನೂ ಓದಿ : T-20 ವಿಶ್ವಕಪ್ ನಿಂದ PAK ಔಟ್ – 1 ಸೋಲು ಭಾರತಕ್ಕೆ ಬರೆ ಎಳೆಯುತ್ತಾ?
ಡೆಲ್ಲಿ ಸೇರಿದ ಪಂತ್.. ಲಕ್ನೋಗೆ ಹಾರಿದ ಕುಲ್ದೀಪ್!
ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಈಗ ತಮ್ಮ ಹೋಂ ಟೀಂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಂದಿದ್ದಾರೆ. ಐಪಿಎಲ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿಯೇ ಇದನ್ನ ಕನ್ಫರ್ಮ್ ಮಾಡಿದೆ. 2025ರ ಐಪಿಎಲ್ ಹರಾಜಿನಲ್ಲಿ ಲಖನೌ ಫ್ರಾಂಚೈಸಿ ಬರೋಬ್ಬರಿ 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಹರಾಜಿನ ಇತಿಹಾಸದಲ್ಲೇ ಅತಿದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರ ಎನ್ನುವ ದಾಖಲೆ ಬರೆದಿದ್ದರು. ಆದ್ರೀಗ 15 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಾರಾಟವಾಗಿದ್ದಾರೆ. ಅಲ್ಲಿಗೆ ಕಳೆದ ಸೀಸನ್‌ಗೆ ಹೋಲಿಸಿದರೆ 12 ಕೋಟಿ ರುಪಾಯಿ ಸಂಬಳ ಕಟ್ ಆಫ್ ಆಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 2016ರಿಂದ 2024ರವರೆಗೆ 111 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ರು. ಡೆಲ್ಲಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದರು. ಅಲ್ದೇ 2021ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 43 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಆದ್ರೆ 2025ರ ಐಪಿಎಲ್ಗೂ ಮುನ್ನ ಲಕ್ನೋ ತಂಡಕ್ಕೆ ಜಾಯ್ನ್ ಆಗಿದರು. ಎಲ್ಎಸ್ಜಿ ಪರ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ ಈಗ ಲಕ್ನೋದಿಂದಲೇ ಹೊರಬಿದ್ದಿದ್ದಾರೆ. ಌಂಡ್ ಕುಲ್ದೀಪ್ ಲಕ್ನೋ ಟೀಂ ಸೇರಿದ್ದಾರೆ.
13.50 ಕೋಟಿಗೆ ಲಕ್ನೋ ಸೇರಿದ ಕುಲ್ದೀಪ್ ಯಾದವ್!
ಮತ್ತೊಂದ್ಕೆಡೆ ಕಳೆದ ಐದು ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಕುಲ್ದೀಪ್ ಯಾದವ್ ಈಗ ಎಲ್ಎಸ್ಜಿ ಪಾಲಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕುಲ್ದೀಪ್ ಸ್ವಲ್ಪ ಡಲ್ ಆಗಿದ್ರು. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನ ಎಲ್‌ಎಸ್‌ಜಿಗೆ ಬಿಟ್ಟುಕೊಟ್ಟಿದೆ. 2022 ರಲ್ಲಿ ಡೆಲ್ಲಿ ಫ್ರಾಂಚೈಸ್‌ಗೆ ಸೇರಿದ ಮಿಸ್ಟ್ರಿ ಸ್ಪಿನ್ನರ್ ಕುಲ್ದೀಪ್ 65 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ತಗೊಂಡಿದ್ರು. ವೈಟ್-ಬಾಲ್ ಬೌಲರ್‌ಗಳಲ್ಲಿ ಒನ್ ಆಫ್ ದಿ ಬೆಸ್ಟ್ ಸ್ಪಿನ್ನರ್ ಆಗಿರೋ ಕುಲ್‌ದೀಪ್ ಅವರು ಪ್ರಸ್ತುತ ₹13.50 ಕೋಟಿ ಶುಲ್ಕದಲ್ಲಿ ಎಲ್‌ಎಸ್‌ಜಿಗೆ ಜಾಯ್ನ್ ಆಗಿದ್ದಾರೆ. ಸದ್ಯ ಅಧಿಕೃತವಾಗಿ ಇವರಿಬ್ಬರು ಸ್ವ್ಯಾಪ್ ಡೀಲ್ ಆಗಿದ್ರೆ ಅತ್ತ ಮತ್ತೊಂದು ಟ್ರೇಡಿಂಗ್ ಮಾತುಕತೆಯೂ ನಡೀತಿದೆ.
ರಾಜಸ್ಥಾನಕ್ಕೆ ಪಾಂಡ್ಯ.. ಮುಂಬೈಗೆ ಜೈಸ್ವಾಲ್ ಪಕ್ಕಾ ಆಯ್ತಾ?
ರಾಜಸ್ಥಾನ ರಾಯಲ್ಸ್ ತಂಡದ ಓಪನರ್ ಯಶಸ್ವಿ ಜೈಸ್ವಾಲ್ ಮುಂದಿನ ಆವೃತ್ತಿಗೆ ಮುಂಬೈ ಇಂಡಿಯನ್ಸ್ ಸೇರ್ತಾರೆ ಅನ್ನೋ ಟಾಕ್ ಇದೆ. 2026ರ ಸೀಸನ್ನಲ್ಲಿ 30.50 ರ ಸರಾಸರಿಯಲ್ಲಿ 427 ರನ್ಸ್ ಕಲೆ ಹಾಕಿದ್ರು. ಆದ್ರೆ ಹಾರ್ದಿಕ್ ಪಾಂಡ್ಯ ಮತ್ತು ಇವ್ರ ನಡುವೆ ಫ್ರಾಂಚೈಸಿಗಳು ಸ್ವ್ಯಾಪ್ ಡೀಲ್ ಲೆಕ್ಕಾಚಾರದಲ್ಲಿವೆ. ರೋಹಿತ್ ಶರ್ಮಾ ಅವರೊಂದಿಗೆ ಓಪನರ್ ಆಗಲು ಜೈಸ್ವಾಲ್ ಅವರನ್ನು ಫ್ಯೂಚರ್ ದೃಷ್ಟಿಯಲ್ಲಿ ಗಾಳ ಹಾಕಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಐಪಿಎಲ್ ವೃತ್ತಿಜೀವನದಲ್ಲಿ 83 ಪಂದ್ಯಗಳಲ್ಲಿ 33.67 ಸರಾಸರಿ ಮತ್ತು 152.79 ರ ಸ್ಟ್ರೈಕ್ ರೇಟ್‌ನಲ್ಲಿ 2,593 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು, 18 ಅರ್ಧಶತಕಗಳು ಮತ್ತು ಟೂರ್ನಮೆಂಟ್ ಇತಿಹಾಸದಲ್ಲಿ ಕೇವಲ 13 ಎಸೆತಗಳಲ್ಲಿ ವೇಗದ ಅರ್ಧಶತಕದ ದಾಖಲೆ ಇದೆ. ಅಲ್ದೇ ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಸಕ್ಸಸ್ ಸಿಕ್ಕಿಲ್ಲ. ಆಲ್ರೌಂಡರ್ ಆಗಿರೋ ಹಾರ್ದಿಕ್ ರನ್ನ ವಿನಿಮಯ ಮಾಡಿಕೊಳ್ಳೋಕೆ ರಾಜಸ್ಥಾನ ಕೂಡ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯ 162 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 146.28 ಸ್ಟ್ರೈಕ್ ರೇಟ್‌ನಲ್ಲಿ 2,955 ರನ್ ಗಳಿಸಿದ್ದಾರೆ ಮತ್ತು 82 ವಿಕೆಟ್‌ಗಳನ್ನು ಪಡೆದಿದ್ದಾರೆ, ಜೊತೆಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. 4 ಬಾರಿ ಮುಂಬೈ ಜೊತೆ ಹಾಗೇ ಗುಜರಾತ್ ನಾಯಕನಾಗಿ ಒಮ್ಮೆ ಟ್ರೋಫಿ ಎತ್ತಿ ಹಿಡಿದಿದ್ದಾರೆ.
ಲಕ್ನೋ ತಂಡದ ಕ್ಯಾಪ್ಟನ್ಸಿ ತಗೊಳ್ತಾರಾ ಸೂರ್ಯ?
ಇದೆಲ್ಲದ್ರ ನಡುವೆ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಬಿಡ್ತಾರೆ ಅನ್ನೋ ಸುದ್ದಿ ಇದೆ. ಟೀಂ ಇಂಡಿಯಾ ಟಿ-20ಐ ತಂಡದ ಕ್ಯಾಪ್ಟನ್ಸಿ ಜೊತೆಗೆ ತಂಡದಿಂದಲೇ ಹೊರಬಿದ್ದಿರೋ ಸೂರ್ಯಕುಮಾರ್ ಯಾದವ್ ಮುಂದಿನ ಐಪಿಎಲ್ಗೂ ಮುನ್ನ ಮುಂಬೈ ಇಂಡಿಯನ್ಸ್ನಿಂದಲೂ ಹೊರಬೀಳೋ ಚಾನ್ಸಸ್ ಜಾಸ್ತಿ ಇದೆ. 2026ರ ಆವೃತ್ತಿಯಲ್ಲಿ ಸೂರ್ಯನ ಬ್ಯಾಟ್ ಕೂಡ ಸೈಲೆಂಟ್ ಆಗಿತ್ತು. ಹೀಗಾಗಿ ಅಂಬಾನಿ ಬ್ರಿಗೇಡ್ ಸೂರ್ಯನಿಗೂ ಗೇಟ್ ಪಾಸ್ ಕೊಡೋ ಪ್ಲ್ಯಾನ್ನಲ್ಲಿದೆ. ಅತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಪ್ರಾಂಚೈಸಿ ಸೂರ್ಯನನ್ನ ತಂಡಕ್ಕೆ ಸೇರಿಸಿಕೊಂಡು ಕ್ಯಾಪ್ಟನ್ಸಿ ನೀಡೋ ಲೆಕ್ಕಾಚಾರದಲ್ಲಿದೆ ಎನ್ನಲಾಗ್ತಿದೆ. ಸೂರ್ಯಕುಮಾರ್ ಯಾದವ್ ಈ ಹಿಂದೆ ಉಪನಾಯಕನಾಗಿ ಸೇವೆ ಸಲ್ಲಿಸಿದ್ದ ಕೆಕೆಆರ್ ಫ್ರಾಂಚೈಸಿಗೆ ಮರಳುವ ಸಾಧ್ಯತೆ ಇದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್ ಜರ್ನಿ ಕೂಡ ಅಷ್ಟಕ್ಕಷ್ಟೇ ಇದೆ. ಹೀಗಾಗಿ ಸೂರ್ಯನಿಗೆ ನಾಯಕತ್ವ ನೀಡೋ ಲೆಕ್ಕಾಚಾರ ನಡೀತಿದೆ. ಸೂರ್ಯಕುಮಾರ್ ಯಾದವ್ 179 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 33.68 ಸರಾಸರಿಯಲ್ಲಿ 4,581 ರನ್ ಗಳಿಸಿದ್ದಾರೆ ಮತ್ತು 148.58 ರ ಸ್ಫೋಟಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ, ಇದರಲ್ಲಿ 31 ಅರ್ಧಶತಕಗಳು ಮತ್ತು 2 ಶತಕಗಳು ಸೇರಿವೆ. ಒಟ್ನಲ್ಲಿ 2027ರ ಐಪಿಎಲ್ ಗೆ ಇನ್ನೂ ಸಾಕಷ್ಟು ಟೈಂ ಇರುವಾಗ್ಲೇ ದೊಡ್ಡ ದೊಡ್ಡ ಬದಲಾವಣೆಗಳೇ ಆಗ್ತಿವೆ.

ನೋಡಿರಿ

