RCBಗೆ ಟಾಪ್ 4 ಬೆಂಕಿ ಬ್ಯಾಟರ್ಸ್.. ಸಾಲ್ಟ್ & ಕೊಹ್ಲಿ ಅಡ್ವಾಂಟೇಜ್ ಏನು? – ಪವರ್ ಪ್ಲೇ ಗೇಮ್ ಡಿಸೈಡರ್ ಯಾರು?

18ನೇ ಸೀಸನ್ ಐಪಿಎಲ್ನಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಮೂಲಕ ಟ್ರೋಫಿ ಬರ ನೀಗಿಸಿಕೊಂಡಿದ್ದ ಆರ್‌ಸಿಬಿ ಈ ಸಲ ಎರಡನೇ ಕಪ್ ಮೇಲೆ ಕಣ್ಣಿಟ್ಟಿದೆ. ಅದೂ ಅಲ್ದೇ ತಂಡದಲ್ಲಿ ಆಲ್ಮೋಸ್ಟ್ ಸೇಮ್ ಟೀಂ ಕಂಟಿನ್ಯೂ ಆಗಿದ್ದು ಪ್ಲೇಯಿಂಗ್ 11ನಲ್ಲಿ ಒಂದು ಬದಲಾವಣೆ ಅಷ್ಟೇ ನಿರೀಕ್ಷೆ ಮಾಡ್ಬೋದು. ಬ್ಯಾಟಿಂಗ್, ಬೌಲಿಂಗ್, ಫಿನಿಶರ್ಸ್ ಹೀಗೆ ಎಲ್ಲವೂ ಫಸ್ಟ್ ಕ್ಲಾಸ್ ಆಗಿದೆ. ಅದ್ರಲ್ಲೂ ಬ್ಯಾಟಿಂಗ್ ಕಾಂಬಿನೇಷನ್ ಸಿಕ್ಕಾಪಟ್ಟೆ ಚೆನ್ನಾಗಿದೆ.
ಇದನ್ನೂ ಓದಿ: ಪಾನ್ ತಿಂದು ಎಲ್ಲೆಂದರಲ್ಲಿ ಉಗಿಯುತ್ತೀರಾ? – ರಸ್ತೆಯಲ್ಲಿ ಉಗಿದಿದ್ದಕ್ಕೆ ಬಿತ್ತು 3.4 ಲಕ್ಷ ರೂ. ಫೈನ್!
2025ರ ಐಪಿಎಲ್ ಬಳಿಕ ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಮಿನಿ-ಹರಾಜಿನ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸಿರೋ ಆರ್‌ಸಿಬಿ ಇನ್ನೂ ಸ್ಟ್ರಾಂಗ್ ಆಗಿದೆ. 19 ನೇ ಆವೃತ್ತಿಯು ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಟಾರ್ಟ್ ಆಗಲಿದೆ. ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಈ ಋತುವಿನಲ್ಲಿ ಡಾಮಿನೇಷನ್ ಮಾಡೋಕೆ ರೆಡಿಯಾಗಿದೆ. ಆರ್ಸಿಬಿಯ ಟ್ರೋಫಿ ಡಿಫೆಂಡಿಂಗ್ ಜರ್ನಿಯಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ಸೂಪರ್ ಡೂಪರ್ ಆಗಿದೆ.
ಆರ್ ಸಿಬಿಯ ಬ್ಯಾಟಿಂಗ್ ಬೆನ್ನೆಲುಬು ವಿರಾಟ್ ಕೊಹ್ಲಿ!
ಆರ್‌ಸಿಬಿ ತಂಡದ ಬ್ಯಾಟಿಂಗ್ ವೆಪನ್ನೇ ಕಿಂಗ್ ವಿರಾಟ್ ಕೊಹ್ಲಿ. 2008 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಫ್ರಾಂಚೈಸಿ ಅಗ್ರ ಕ್ರಮಾಂಕದ ಶಕ್ತಿಯಾಗಿದ್ದಾರೆ. ಅದ್ರಲ್ಲೂ 2016ರ ಸೀಸನ್ ಅಂತೂ ಅನ್ಬಿಲೀವಬಲ್ ಆಗಿತ್ತು. 2016ರಲ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿಯಲ್ಲಿ 973 ರನ್ ಗಳಿಸಿದರು. ಒಟ್ಟಾರೆಯಾಗಿ 267 ಐಪಿಎಲ್ ಪಂದ್ಯಗಳಲ್ಲಿ, ಕೊಹ್ಲಿ 39.54 ಸರಾಸರಿಯಲ್ಲಿ 8,661 ರನ್ ಗಳಿಸಿದ್ದಾರೆ ಮತ್ತು 132.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದರಲ್ಲಿ ಎಂಟು ಶತಕಗಳು ಮತ್ತು 63 ಅರ್ಧಶತಕಗಳು ಸೇರಿವೆ. ಅವ್ರಿಗಿರೋ ಎಕ್ಸ್ಪೀರಿಯನ್ಸ್, ಕನ್ಸಿಸ್ಟೆನ್ಸಿ ನೋಡ್ದಾಗ ಈ ಸಲವೂ ಓಪನರ್ ಆಗಿ ಬ್ಯಾಟಿಂಗ್ ಪಿಲ್ಲರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಕಳೆದ ವರ್ಷದಂತೆಯೇ ಸಿಡಿಯುತ್ತಾರಾ ಫಿಲ್ ಸಾಲ್ಟ್?
ಇನ್ನು ಆರ್‌ಸಿಬಿ ಪರ ಮತ್ತೊಬ್ಬ ಓಪನರ್ ಫಿಲ್ ಸಾಲ್ಟ್ ಕೂಡ ಉತ್ತಮ ಆಟಗಾರ. ಕಳೆದ ಮೂರು ಋತುಗಳಲ್ಲಿ ಐಪಿಎಲ್‌ನ ಭಾಗವಾಗಿದ್ದಾರೆ. 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಅವರ ಅತ್ಯುತ್ತಮ ಪ್ರದರ್ಶನ ಬಂದರೆ, 2025 ರಲ್ಲಿ ಆರ್‌ಸಿಬಿ ಪರ ಅವರ ಕೊಡುಗೆ ಅಲ್ಟಿಮೇಟ್ ಆಗಿತ್ತು. ಕಳೆದ ವರ್ಷ ಸಾಲ್ಟ್ 13 ಇನ್ನಿಂಗ್ಸ್‌ಗಳಲ್ಲಿ 175.98 ಸ್ಟ್ರೈಕ್ ರೇಟ್‌ನಲ್ಲಿ 403 ರನ್ ಗಳಿಸಿದರು. ವಿರಾಟ್ ಕೊಹ್ಲಿ ಅವರೊಂದಿಗೆ ನಿರ್ಣಾಯಕ ಆರಂಭಿಕ ಪಾಲುದಾರಿಕೆ ಬಂದಿತ್ತು. ಒಟ್ಟಾರೆಯಾಗಿ, ಸಾಲ್ಟ್ 34 ಐಪಿಎಲ್ ಪಂದ್ಯಗಳಲ್ಲಿ 34.06 ಸರಾಸರಿಯಲ್ಲಿ 1,056 ರನ್ ಗಳಿಸಿದ್ದಾರೆ ಮತ್ತು 10 ಅರ್ಧಶತಕಗಳು ಸೇರಿದಂತೆ 175.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟಾಪ್ ಆರ್ಡರ್ ನಲ್ಲಿ ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್ ತಂಡಕ್ಕೆ ಶಕ್ತಿಯಾಗಲಿದೆ.
ಬ್ಯಾಟಿಂಗ್ ನಲ್ಲೂ ಪವರ್ ಸ್ಟಾರ್ ರಜತ್ ಪಾಟಿದಾರ್!
ಇನ್ನು ನಾಯಕ ರಜತ್ ಪಾಟಿದಾರ್ ಕೂಡ ಗೇಮ್ ವಿನ್ನಿಂಗ್ ಬ್ಯಾಟಿಂಗ್ ಎಬಿಲಿಟಿ ಹೊಂದಿದ್ದಾರೆ. 2021 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದ್ರು. 2022ರಲ್ಲಿ ಏಳು ಇನ್ನಿಂಗ್ಸ್‌ಗಳಲ್ಲಿ 55.50 ಸರಾಸರಿ ಮತ್ತು 152.75 ಸ್ಟ್ರೈಕ್ ರೇಟ್‌ನಲ್ಲಿ 333 ರನ್ ಗಳಿಸಿದರು. 2023 ರ ಸೀಸನ್ ಆಡಿರಲಿಲ್ಲ. 2024 ರಲ್ಲಿ ಮತ್ತೆ ಕಂ ಬ್ಯಾಕ್ ಮಾಡಿದ ಪಾಟಿದಾರ್, 2025 ರಲ್ಲಿ ನಾಯಕನನ್ನಾಗಿ ನೇಮಿಸಲಾಯಿತು. ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಐಪಿಎಲ್ ಪ್ರಶಸ್ತಿಗೆ ಕರೆದೊಯ್ದರು. ಕಳೆದ ಬಾರಿ 14 ಇನ್ನಿಂಗ್ಸ್‌ಗಳಲ್ಲಿ 312 ರನ್‌ಗಳನ್ನು ಗಳಿಸಿದರು. ಒಟ್ಟಾರೆಯಾಗಿ, 42 ಐಪಿಎಲ್ ಪಂದ್ಯಗಳಲ್ಲಿ, ಅವರು 30.86 ಸರಾಸರಿಯಲ್ಲಿ 1,111 ರನ್ ಗಳಿಸಿದ್ದಾರೆ ಮತ್ತು 154.30 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದ್ರಲ್ಲಿ ಒಂದು ಶತಕ ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ. ಆರ್‌ಸಿಬಿ ತಮ್ಮ ಕಿರೀಟವನ್ನು ಉಳಿಸಿಕೊಳ್ಳುವ ಟಾರ್ಗೆಟ್ನೊಂದಿಗೆ ಕಣಕ್ಕಿಳಿತಿದ್ದು ಈ ವರ್ಷವೂ ಬ್ಯಾಟಿಂಗ್ನಲ್ಲಿ ಸದ್ದು ಮಾಡಬಹುದು.
ಪಡಿಕ್ಕಲ್ ಫಾರ್ಮ್ ಆರ್ ಸಿಬಿಗೆ ವರವಾಗುತ್ತಾ?
ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಸೀಸನ್ ಕಂಡಿದ್ದು, ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ 9 ಇನಿಂಗ್ಸ್‌ಗಳಲ್ಲಿ 725 ರನ್ ಗಳಿಸಿದ್ದಾರೆ. 90.62 ಸರಾಸರಿಯೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಇದೇ ರೀತಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಅವರು ಮಿಂಚಿದ್ದು, 6 ಇನಿಂಗ್ಸ್‌ಗಳಲ್ಲಿ 61.80 ಸರಾಸರಿ ಮತ್ತು 167.08 ಸ್ಟ್ರೈಕ್ ರೇಟ್‌ನೊಂದಿಗೆ 309 ರನ್ ಗಳಿಸಿ ಗಮನ ಸೆಳೆದಿದ್ರು. ರಣಜಿ ಟ್ರೋಫಿ ಟೂರ್ನಿಯಲ್ಲು ಅದ್ಭುತ ಪ್ರದರ್ಶನ ಬಂದಿತ್ತು. ಕಳೆದ ಐಪಿಎಲ್ ಸೀಸನ್‌ನಲ್ಲಿ 150.61 ಸ್ಟ್ರೈಕ್ ರೇಟ್‌ನೊಂದಿಗೆ 247 ರನ್‌ಗಳನ್ನು ಕಲೆ ಹಾಕಿದ್ದರು. ಹೀಗಾಗಿ ಈ ಬಾರಿ ಮತ್ತೊಮ್ಮೆ ತಂಡಕ್ಕೆ ಸ್ಟ್ರೆಂಥ್ ಆಗೋ ಎಲ್ಲಾ ಚಾನ್ಸಸ್ ಇದೆ. ಒಟ್ನಲ್ಲಿ ಆರ್ಸಿಬಿಯಲ್ಲಿ ಬ್ಯಾಟಿಂಗ್ ಆರ್ಡರ್ ಕೂಡ ತುಂಬಾನೇ ಸ್ಟ್ರಾಂಗ್ ಆಗಿದೆ. ಅದ್ರಲ್ಲೂ ಕೊಹ್ಲಿ ಮತ್ತು ಸಾಲ್ಟ್ ಕ್ರೀಸ್ ಕಚ್ಚಿ ನಿಂತ್ರೆ ಆರ್ಸಿಬಿಗೆ 2ನೇ ಕಪ್ ಪಕ್ಕಾ.

ನೋಡಿರಿ

