ಭಾರತ 10 ಶ್ರೀಮಂತ ವ್ಯಕ್ತಿಗಳು ಯಾರು ಗೊತ್ತಾ? ಇಲ್ಲಿದೆ ಮಾಹಿತಿ|
ಶ್ರೀಮಂತರ ಪಟ್ಟಿಯಿಂದ ಅಂಬಾನಿಗೆ ಎಷ್ಟನೇ ಸ್ಥಾನ?

ಭಾರತ 10 ಶ್ರೀಮಂತ ವ್ಯಕ್ತಿಗಳು ಯಾರು ಗೊತ್ತಾ? ಇಲ್ಲಿದೆ ಮಾಹಿತಿ|ಶ್ರೀಮಂತರ ಪಟ್ಟಿಯಿಂದ ಅಂಬಾನಿಗೆ ಎಷ್ಟನೇ ಸ್ಥಾನ?

ಭಾರತದ ಅಭಿವದ್ಧಿಯತ್ತ ಸಾಗುತ್ತಿದೆ.. ವಿಶ್ವದಲ್ಲಿ ನಂಬರ್ ಒನ್ ಆಗಿ ಬೆಳೆಯೋಕೆ ಹೋಗುತ್ತಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿದೆ. ಹಾಗಿದ್ರೆ ಭಾರತದ ಟಾಪ್ 10 ಶ್ರೀಮಂತರು ಯಾರು? ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವಂತೆ, ದೇಶದ ಶ್ರೀಮಂತ ವ್ಯಕ್ತಿಗಳು ಆಸ್ತಿ ಹೇಗೆಲ್ಲಾ ಹೆಚ್ಚಾಗುತ್ತಿದೆ. ಬಿಡುಗಡೆಯಾದ ಟಾಪ್‌ 10 ಪಟ್ಟಿಯಲ್ಲಿ  ಮುಖೇಶ್ ಅಂಬಾನಿ ಎಷ್ಟೇನೆ ಸ್ಥಾನದಲ್ಲಿದ್ದಾರೆ  ಅನ್ನೋ ಇಂಟ್ರಿಸ್ಟಿಂಗ್ ಮಾಹಿತಿ ನೋಡೋಣ ಬನ್ನಿ

ಇದನ್ನೂ ಓದಿ: ಸೈಬರ್ ಕ್ರೈಂ ಅಡ್ಡವಾದ ಕರ್ನಾಟಕ – ನಿರುದ್ಯೋಗಿಗಳೇ ಇವರ ಟಾರ್ಗೆಟ್!

2024 ಫೋರ್ಬ್ಸ್ ಇಂಡಿಯಾದ ಶ್ರೀಮಂತರ  ಪಟ್ಟಿಯನ್ನ ರಿಲೀಸ್ ಮಾಡಿದೆ.  ಸೆಪ್ಟಂಬರ್ ತನಕ ಕಲೆ ಹಾಕಿರೋ ಪ್ರಕಾರ ಪೋರ್ಬ್ಸ್ ಸಂಸ್ಥೆ ಭಾರತ ಶ್ರೀಮಂತರ ಪಟ್ಟಿಯನ್ನ ರಿಲೀಸ್ ಮಾಡಿದೆ. ಹಾಗಿದ್ರೆ ಈ ಶ್ರೀಮಂತರ ಪಟ್ಟಿಯಲ್ಲಿ   ಯಾರೆಲ್ಲಾ  ಇದ್ದಾರೆ ಅನ್ನೋದನ್ನ ಮೊದಲಿಗೆ ನೋಡೋಣ ಬನ್ನಿ..

ಭಾರತದ ನಂ-1 ಶ್ರೀಮಂತ- ಮುಖೇಶ್ ಅಂಬಾನಿ

ಭಾರತದ ಟಾಪ್ ಟಾಪ್‌ 10 ರ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನವನ್ನ ಪಡೆದಿದ್ದಾರೆ. ಇವರು ತಮ್ಮನ 66 ನೇ ವಯಸ್ಸಿನಲ್ಲಿ 119.5  ಬಿಯಾನ್ ಡಾಲರ್ ಆಸ್ತಿಯನ್ನ ಹೊಂದಿದ್ದಾರೆ. ಇವರು ಸಾಕಷ್ಟು ಕ್ಷೇತ್ರದಲ್ಲಿ ತಮ್ಮ ಚಾಪು ಮೊಡಿಸಿದ್ದಾರೆ. ಇವರು ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ರಿಲಿಯನ್ಸ್ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೇರ್ಮನ್ ಆಗಿ, ಅಂಬಾನಿ 8 ಲಕ್ಷ ಕೋಟಿ  ಆದಾಯವನ್ನು ಗಳಿಸುವ ಬೃಹತ್ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ. ಇವರು ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಚಿಲ್ಲರೆ ವ್ಯಾಪಾರ, ಟೆಲಿಕಾಂ ಸೇರಿ ಸಾಕಷ್ಟು ವ್ಯವಹಾರಗಳು ಇವರು  ಅಡಿಯಲ್ಲಿ ಬರುತ್ತೆ. ಇವರ ಮಗ ಅನಂತ್ ಅಂಬಾನಿ ಮದುವೆ ಮದುವೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇಡೀ ದೇಶವೇ ಬೇರಗಾಗಿ ಹೋಗಿತ್ತು.

 

ಭಾರತದ ನಂ- 2 ಶ್ರೀಮಂತ- ಗೌತಮ್ ಅದಾನಿ

ಭಾರತ ಎರಡನೇ ಶ್ರೀಮಂತ ಅಂದ್ರೆ ಅದು ಗೌತಮ್ ಶಾಂತಿಲಾಲ್ ಅದಾನಿ.. ಇವರಿಗೆ 61 ವರ್ಷವಾಗಿದ್ದು, ಭಾರತದಲ್ಲಿ ಅದಾನಿ ಗ್ರೂಪ್ ಮೂಲಕ ತನ್ನ ಆಸ್ತಿಯನ್ನ ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇವರ ಒಟ್ಟು ಆಸ್ತಿ116 ಬಿಲಿಯಾನ್ ಡಾಲರ್ ಆಗಿದೆ.  ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಅವರು 1996 ರಲ್ಲಿ ಸ್ಥಾಪಿಸಿದ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಅದಾನಿ ಗ್ರೂಪ್ ಬಂದರು , ವಿಮಾನ ನಿಲ್ದಾಣ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಸೇರಿ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿವೆ.

 

ಭಾರತದ 3ನೇ ಶ್ರೀಮಂತ-  ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ

ಭಾರತದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನವನ್ನ  ಪಡೆದವರು ಅಂದ್ರೆ ಸಾವಿತ್ರಿ ಜಿಂದಾಲ್ ಮತ್ತು ಅವರ ಕುಟುಂಬ.. ಇವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಅನ್ನೋ ಪಟ್ಟವನ್ನ ಅಲಂಕರಿಸಿದ್ದಾರೆ. ಸಾವಿತ್ರಿ ಜಿಂದಾಲ್ ಅವರು ಭಾರತೀಯ ರಾಜಕೀಯ ಮತ್ತು ಉದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನ ನೀಡಿದ್ದಾರೆ. ಇವರು ನಾಲ್ಕು ಜನ ಮಕ್ಕಳಾದ ಪೃಥ್ವಿರಾಜ್, ಸಜ್ಜನ್, ರತನ್ ಮತ್ತು ನವೀನ್ ಜಿಂದಾಲ್ ಅವರು JSW ಸ್ಪೋರ್ಟ್ಸ್ ಸೇರಿದಂತೆ ಜಿಂದಾಲ್ ಗೂಪಿನ ವಿವಿಧ ವ್ಯಾಪಾರ ವ್ಯವಹಾರವನ್ನ ನೋಡಿಕೊಳ್ಳುತ್ತಿದ್ದಾರೆ. ಗಣಿಗಾರಿಕೆ  ಮತ್ತು ಲೋಹದ ಕ್ಷೇತ್ರದಲ್ಲಿ ಇವರು ಸಾಧನೆ ಮಾಡಿದ್ದಾರೆ.

 

ಭಾರತದ 4ನೇ ಶ್ರೀಮಂತ – ಶಿವ ನಾಡರ್

ಶಿವ ನಾಡಾರ್ ಅವರು ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ  4ನೇ ಸ್ಥಾನವನ್ನ ಪಡೆದಿದ್ದಾರೆ. ಇವರು ಒಟ್ಟು 43.7 ಬಿಲಿಯನ್ ಡಾಲರ್ ಆಸ್ತಿಯನ್ನ ಹೊಂದಿದ್ದು,  HCL ನ ಮಾಲೀಕರಾಗಿದ್ದಾರೆ. ಸಿಸ್ಕೋ, ಮೈಕ್ರೋಸಾಫ್ಟ್ ಮತ್ತು ಬೋಯಿಂಗ್‌ನಂತಹ ಗೌರವಾನ್ವಿತ ಕ್ಲೈಂಟ್‌ಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.  ಐಟಿ ವಲಯಕ್ಕೆ ತನ್ನದೇ ಆದ ಕೊಡುಗೆಗಳನ್ನ ಈ ಕಂಪನಿ ನೀಡಿದೆ.  2008 ರಲ್ಲಿ, ಭಾರತ ಸರ್ಕಾರವು ಶ್ರೀ ನಾಡಾರ್ ಅವರಿಗೆ ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿದೆ.

ಭಾರತದ 5ನೇ ಶ್ರೀಮಂತ- ದಿಲೀಪ್ ಶಾಂಘ್ವಿ

67 ವರ್ಷ ವಯಸ್ಸಿನ ದಿಲೀಪ್ ಶಾಂಘ್ವಿ ಅವರು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್‌ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದು, ಇವರು ಒಟ್ಟು 32.4 ಬಿಲಿಯನ್ ಡಾಲರ್ ಆಸ್ತಿಯನ್ನ ಹೊಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ, ಸನ್ ಫಾರ್ಮಾಸ್ಯುಟಿಕಲ್ $5 ಶತಕೋಟಿ ಮೌಲ್ಯವನ್ನು ತಲುಪಿದ ಮೊದಲ ಭಾರತೀಯ ಔಷಧೀಯ ಕಂಪನಿಯಾಗಿ ಸಾಧನೆ ಮಾಡಿದೆ.

ಭಾರತ ಟಾಪ್ 6 ನೇ ಶ್ರೀಮಂತರಾಗಿ ರಾಧಾಕಿಶನ್ ದಮಾನಿ ಮತ್ತು ಕುಟುಂಬವಿದೆ. ಇವರು 31.5 ಬಿಲಿಯಲ್ ಡಾಲರ್ ಆಸ್ತಿಯನ್ನ ಹೊಂದಿದ್ದಾರೆ ಇವರು ವ್ಯಾಪಾರ ಕ್ಷೇತ್ರ ಫ್ಯಾಷನ್ ಮತ್ತು ಚಿಲ್ಲರೆ ವ್ಯಾಪಾರ. ಹಾಗೇ 7 ನೇ ಸ್ಥಾನದಲ್ಲಿ ಸುನಿಲ್ ಮಿತ್ತಲ್ ಮತ್ತು ಕುಟುಂಬವಿದ್ದು ಟಿಲಿಕಾಂ ಕ್ಷೇತ್ರದಲ್ಲಿ ಇವರ ತಮ್ಮ ಉದ್ಯೋಮವನ್ನ ಬೆಳಸಿದ್ದಾರೆ. ಇವರ ಒಟ್ಟು ಆಸ್ತಿ 30.7 ಬಿಲಿಯನ್ ಡಾಲರ್ ಆಗಿದೆ. ಹಾಗೇ  ಕುಮಾರ್ ಬಿರ್ಲಾ ಭಾರತ 8 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಸಾಕಷ್ಟು ಕ್ಷೇತ್ರದಲ್ಲಿ ಇವರ  ಉದ್ಯೋಮವಿದೆ. ಇನ್ನಿ ಸೈರಸ್ ಪೊನವಾಲಾ ಅವರು ಒಟ್ಟು 24.5 ಬಿಲಿಯನ್ ಡಾಲರ್ ಆಸ್ತಿಯನ್ನ ಹೊಂದಿದ್ದು, ಆರೋಗ್ಯರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಟಾಪ್ 10 ನೇ ಸ್ಥಾನವನ್ನ ಬಜಾಜ್ ಕುಟುಂಬ ಪಡೆದಿದೆ. ಇವರ ಒಟ್ಟು ಆಸ್ತಿ 23.4 ಬಿಲಿಯನ್ ಡಾಲರ್ ಆಗಿದೆ. ಬಜಾಜ್ ಕೂಡ ಸಾಕಷ್ಟು ಕ್ಷೇತ್ರದಲ್ಲಿ ತಮ್ಮ ಉದ್ಯೋಮವನ್ನ ಸ್ಥಾಪಿಸಿದೆ.

Kishor KV