ನಿವೃತ್ತಿ ಬಿಟ್ಟು ಪಾಕ್ ಚಚ್ಚಿದ ಡಿ ಕಾಕ್ – ಸೂಪರ್ ಸ್ಟಾರ್ ಗಳದ್ದೂ ಇಂಥದ್ದೇ ಚರಿತ್ರೆ
ಗುಡ್ ಬೈ ಹೇಳಿ ಬಂದು ಸಿಡಿದವರೆಷ್ಟು?

ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನವೆಂಬರ್ 14ರಿಂದ 2 ಪಂದ್ಯಗಳ ಟೆಸ್ಟ್ ಸಿರೀಸ್ ಇದೆ. ಪ್ರಸ್ತುತ ಟೀಂ ಇಂಡಿಯಾದ ಟಿ-20ಐ ಟೀಂ ಆಸ್ಟ್ರೇಲಿಯಾ ಸರಣಿಯಲ್ಲಿದ್ರೆ ಅತ್ತ ಸೌತ್ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಆಡ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಸೌತ್ ಆಫ್ರಿಕಾ ಆಟಗಾರ ಕ್ವಿಂಟನ್ ಡಿಕಾಕ್ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದ್ದಾರೆ. ಅದಕ್ಕೆ ಕಾರಣ ಕಳೆದ ಎರಡು ಪಂದ್ಯಗಳಲ್ಲಿನ ಅವ್ರ ಸ್ಕೋರ್. ಯಾಕಂದ್ರೆ ಡಿಕಾಕ್ ನಿವೃತ್ತಿ ಹಿಂಪಡೆದು ಪಾಕ್ ಸರಣಿಗೆ ಕಮ್ ಬ್ಯಾಕ್ ಮಾಡಿ ಅಬ್ಬರಿಸಿದ್ದಾರೆ.
ಇದನ್ನೂ ಓದಿ : POKಯಲ್ಲಿ ಪಾಕ್ ಸರ್ಕಾರದ ವಿರುದ್ಧ ಜೆನ್ ಝೀಗಳ ಪ್ರತಿಭಟನೆ – ಉರುಳುತ್ತಾ ಸರ್ಕಾರ?
ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನ ಪಾಕ್ ಗೆದ್ರೆ ಸೆಕೆಂಡ್ ಮ್ಯಾಚ್ ಸೌತ್ ಆಫ್ರಿಕಾ ಪಾಲಾಗಿದೆ. ಎರಡೂ ಮ್ಯಾಚ್ಗಳಲ್ಲೂ ಸೌತ್ ಆಫ್ರಿಕಾ ಆಟಗಾರ ಕ್ರಿಂಟನ್ ಡಿಕಾಕ್ ಎಕ್ಸ್ಟ್ರಾರ್ಡಿನರಿ ಪ್ರದರ್ಶನ ನೀಡಿದ್ದಾರೆ. ಮೊದಲ ಮ್ಯಾಚಲ್ಲಿ 63 ರನ್ ಗಳಿಸಿದ್ದ ಡಿಕಾಕ್ ಎರಡನೇ ಪಂದ್ಯದಲ್ಲಿ 123 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಈ ಸ್ಕೋರ್ ಮೂಲಕ ಡಿಕಾಕ್ ಹಲವು ದಾಖಲೆಗಳನ್ನ ಬರೆದಿದ್ದಾರೆ. ಇಲ್ಲಿ ಡಿಕಾಕ್ ಶತಕಕ್ಕಿಂತ ನಿವೃತ್ತಿ ಹಿಂಪಡೆದು ಬಂದು ಆಡಿದ್ದೇ ಇಂಟ್ರೆಸ್ಟಿಂಗ್ ಆಗಿದೆ.
ನಿವೃತ್ತಿ ಹಿಂಪಡೆದು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡಿಕಾಕ್!
32 ವರ್ಷದ ಕ್ವಿಂಟನ್ ಡಿ ಕಾಕ್ 2021ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಆದರೆ, ODI ಮತ್ತು T20Iಯಲ್ಲಿ ಮುಂದುವರಿದರು. 2023ರ ODI ವಿಶ್ವಕಪ್ (ಭಾರತದಲ್ಲಿ ನಡೆದದ್ದು) ನಂತರ, ಅವರು ODIಯಿಂದ ನಿವೃತ್ತಿ ಘೋಷಿಸಿದರು. ಇದಕ್ಕೆ ಕಾರಣ ವಿಶ್ವಾದ್ಯಂತದ T20 ಲೀಗ್‌ಗಳಲ್ಲಿ (ಐಪಿಎಲ್, CPL ಇತ್ಯಾದಿ) ಆಡುವ ಉದ್ದೇಶವಿತ್ತು. ಹಾಗೇ ದಕ್ಷಿಣ ಆಫ್ರಿಕಾ ಪರ ಕೇವಲ T20 ಮಾತ್ರ ಆಡೋದಾಗಿ ಹೇಳಿದ್ರು. ಆದ್ರೆ ಇವ್ರ ಉದ್ದೇಶ ಗೊತ್ತಾದ್ಮೇಲೆ 2024ರ ಟಿ-20 ವಿಶ್ವಕಪ್ ಬಳಿಕ ತಂಡದಿಂದ ಹೊರಗಿಡಲಾಗಿತ್ತು. ಒಂದು ವರ್ಷಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ರು. ಆದ್ರೆ ಪಾಕ್ ಸರಣಿಗೂ ಮುನ್ನ ನಿವೃತ್ತಿ ಹಿಂಪಡೆದು ಮತ್ತೆ ಸೀಮಿತ ಓವರ್ಗಳಲ್ಲಿ ಚಾನ್ಸ್ ಪಡೆದಿದ್ರು. ಇದೀಗ ಪಾಕ್ ವಿರುದ್ಧ ಅಬ್ಬರಿಸಿದ್ದಾರೆ.
ನಿವೃತ್ತಿ ಹಿಂಪಡೆದು ಸ್ಟಾರ್ ಆಟಗಾರರ ಅದ್ಭುತ ಪ್ರದರ್ಶನ!
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಮೇಲೂ ತಂಡಗಳಿಗೆ ಕಂ ಬ್ಯಾಕ್ ಮಾಡಿ ಐಸಿಸಿ ಕಪ್ ಗೆಲ್ಲಿಸಿರೋ ಆಟಗಾರರೂ ಇದ್ದಾರೆ. ಸರಣಿಗಳನ್ನ ಗೆಲ್ಲಿಸೋದ್ರ ಜೊತೆಗೆ ಹಲವು ಅದ್ಭುತ ದಾಖಲೆಗಳನ್ನ ಬ್ರೇಕ್ ಮಾಡಿದವರಿದ್ದಾರೆ. ಯಾರೆಲ್ಲಾ ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.
ನಿವೃತ್ತಿ ಹಿಂಪಡೆದು ಅಬ್ಬರ!
ಆಟಗಾರ ತಂಡ ನಿವೃತ್ತಿ ವರ್ಷ
ಇಮ್ರಾನ್ ಖಾನ್ ಪಾಕಿಸ್ತಾನ 1987
ಶಾಹಿದ್ ಆಫ್ರಿದಿ ಪಾಕಿಸ್ತಾನ 5 ಬಾರಿ ಡ್ರಾಮಾ
ತಮೀಮ್ ಇಕ್ಬಾಲ್ ಬಾಂಗ್ಲಾದೇಶ 2023
ಜಾವಗಲ್ ಶ್ರೀನಾಥ್ ಭಾರತ 2002
ಡ್ವೇನ್ ಬ್ರಾವೋ ವೆಸ್ಟ್ ಇಂಡೀಸ್ 2018
ಮೊಯಿನ್ ಅಲಿ ಇಂಗ್ಲೆಂಡ್ 2021
ಇವ್ರಿಷ್ಟೇ ಅಲ್ಲದೆ ಪಾಕಿಸ್ತಾನದ ಮಾಜಿ ಆಟಗಾರರಾದ ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್, ಮೊಹಮ್ಮದ್ ಅಮೀರ್, ಇಮಾದ್ ವಾಸಿಮ್, ವೆಸ್ಟ್ ಇಂಡೀಸ್ ನ ಕಾರ್ಲ್ ಹೂಪರ್, ಇಂಗ್ಲೆಂಡ್ನ ಕೆವಿನ್ ಪೀಟರ್ಸನ್, ಬೆನ್ ಸ್ಟೋಕ್ಸ್, ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಕೂಡ ನಿವೃತ್ತಿ ಘೋಷಿಸಿ ಮತ್ತೆ ಕಮ್ ಬ್ಯಾಕ್ ಮಾಡಿ ಆಡಿದ್ದಾರೆ. ಹೀಗೆ ಹೇಳ್ತಾ ಹೋದ್ರೆ ಲಿಸ್ಟ್ ಬೆಳಿತಾನೇ ಹೋಗುತ್ತೆ.

ನೋಡಿರಿ

