ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಹೋಗುವವರಿಗೆ ಸರ್ಕಾರದಿಂದ ಫ್ರೀ ಟ್ಯಾಕ್ಸಿ!

ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಹೋಗುವವರಿಗೆ ಸರ್ಕಾರದಿಂದ ಫ್ರೀ ಟ್ಯಾಕ್ಸಿ!

ಪಾರ್ಟಿ ವೇಳೆ ಕಂಠಪೂರ್ತಿ ಕುಡಿದು ಮಜಾ ಮಾಡುತ್ತಾರೆ. ರಾತ್ರಿ ಇಡೀ ಕುಡಿದು ಮಜಾ ಮಾಡುತ್ತಾರೆ. ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ತೂರಾಡುತ್ತಲೇ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇಂತವರಿಗಾಗಿಯೇ ಇಲ್ಲೊಂದು ಕಡೆ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಕಂಠಪೂರ್ತಿ ಕುಡಿದು ಮನೆಗೆ ತೆರಳುವವರಿಗೆ ಫ್ರೀ ಟ್ಯಾಕ್ಸಿ ಸೇವೆ ನೀಡಲು ಇಟಲಿಯನ್‌ ಸರ್ಕಾರ ನಿರ್ಧರಿಸಿದೆ.

ಕುಡಿದು ವಾಹನ ಚಾಲನೆ ಮಾಡುವರಿಂದ ಅಪಘಾತಗಳಿ ಸಂಭವಿಸಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಇಟಾಲಿಯನ್‌ ಸರ್ಕಾರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಉಚಿತ ಟ್ಯಾಕ್ಸಿ ಸವಾರಿ ಯೋಜನೆಯನ್ನು ಜಾರಿ ಮಾಡಿದೆ. ಪಾರ್ಟಿಯಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಕುಡಿದು ವಾಹನ ಚಲಾಯಿಸುವವರಿಗೆ ಫ್ರೀ ಟ್ಯಾಕ್ಸಿ ಮೂಲಕ ಮನೆಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗಿ.. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ! – ಮಿಲಿಟರಿ ಅಧಿಕಾರಿಗಳಿಗೆ ಕಿಮ್‌ ಜಾಂಗ್‌ ಉನ್‌ ಸೂಚನೆ

ಇಟಲಿಯಾದ್ಯಂತ ಆರು ನೈಟ್‌ಕ್ಲಬ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ದಕ್ಷಿಣದ ಪುಗ್ಲಿಯಾದಿಂದ ಉತ್ತರದ ಟಸ್ಕನಿಯವರೆಗೆ. ಕ್ಲಬ್‌ಗಳಿಂದ ನಿರ್ಗಮಿಸುವಾಗ ಅತಿಯಾಗಿ ಕುಡಿದು ವಾಹನ ಚಲಾಯಿಸುವುದು ಕಂಡುಬಂದರೆ ವ್ಯಕ್ತಿಗಳಿಗೆ ಆಲ್ಕೋಹಾಲ್​​ ಪರೀಕ್ಷೆಗೆ ಒಳಗಾಗಲು ಕೇಳಲಾಗುತ್ತದೆ. ಅವರ ಆಲ್ಕೋಹಾಲ್​​ ಮಟ್ಟವು ಕಾನೂನು ಮಿತಿಯನ್ನು ಮೀರಿದೆ ಎಂದು ಪರೀಕ್ಷೆ ತೋರಿಸಿದರೆ, ಅವರನ್ನು ಉಚಿತ ಟ್ಯಾಕ್ಸಿ ರೈಡ್ ಮೂಲಕ ಮನೆಗೆ ಕಳುಹಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಉಪ ಪ್ರಧಾನ ಮಂತ್ರಿ ಮತ್ತು ಹಾರ್ಡ್-ರೈಟ್ ಲೀಗ್ ಪಕ್ಷದ ನಾಯಕರೂ ಆಗಿರುವ ಸಾಲ್ವಿನಿ  ಅವರು ಈ ಯೋಜನೆಯನ್ನು ಘೋಷಿಸಿದ್ದಾರೆ. ಅತಿಯಾಗಿ ಕುಡಿದವರಿಗೆ ರಾತ್ರಿಯ ಕೊನೆಯಲ್ಲಿ ಉಚಿತ ಟ್ಯಾಕ್ಸಿ ವ್ಯವಸ್ಥೆ ಮಾಡಲಾಗುತ್ತದೆ. ರಸ್ತೆಗಳಲ್ಲಿ ಅಪಾಯ ಮತ್ತು ದುರಂತವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಪ್ರಾಯೋಗಿಕ ಉಪಕ್ರಮ ಇದಾಗಿದೆ. ಕುಡಿದು ವಾಹನ ಚಲಾಯಿಸುವವರಿಗೆ ದಂಡ ಮತ್ತು ಕಠಿಣ ಕಾನೂನುಗಳನ್ನು ವಿಧಿಸುವುದು ಸಾಕಾಗುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಇಟಾಲಿಯನ್‌ ಸರ್ಕಾರ ಹೊಸದಾಗಿ ಪ್ರಾರಂಭಿಸಲಾದ ಈ ಯೋಜನೆಗೆ ಇಟಾಲಿಯನ್ನರು ಮತ್ತು ನೈಟ್‌ಕ್ಲಬ್ ಮಾಲೀಕರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಯೋಜನೆಯಿಂದಾಗಿ ಸಂಭವಿಸಬಹುದಾದ ಭಾರಿ ಅನಾಹುತಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

suddiyaana