ಒಂದು ಕೆಜಿ ಟೊಮೆಟೊ ಬೆಲೆ 250 ರೂಪಾಯಿ ! – ದರ ಏರಿಕೆಯಿಂದ ಗ್ರಾಹಕರು ಹೈರಾಣು

ಒಂದು ಕೆಜಿ ಟೊಮೆಟೊ ಬೆಲೆ 250 ರೂಪಾಯಿ ! – ದರ ಏರಿಕೆಯಿಂದ ಗ್ರಾಹಕರು ಹೈರಾಣು

ದೇಶದೆಲ್ಲೆಡೆ  ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಟೊಮೆಟೋ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದಿನಬೆಳಗಾದರೆ ಚಿನ್ನದ ಬೆಲೆಯಂತೆ ಟೊಮೆಟೋ ದರವನ್ನು ಕೇಳುವ ಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಒಂದು ಕೆಜಿ ಟೊಮೆಟೋ 120-150 ರೂ.ವರೆಗೆ ಮಾರಾಟವಾಗುತ್ತಿದ್ದರೆ, ಉತ್ತರಾಖಂಡದಲ್ಲಿ ಟೊಮೆಟೋ ಕೆಜಿಗೆ 250 ರೂ. ಆಗಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಹೈರಾಣಾಗಿದ್ದಾರೆ.

ಇದನ್ನೂ ಓದಿ: ಏಕದಿನ ವಿಶ್ವಕಪ್ ಗೂ ಮುನ್ನವೇ ಮಹಮ್ಮದ್ ಶಮಿಗೆ ಸಂಕಷ್ಟ – ಕೌಟುಂಬಿಕ ಕಲಹದಲ್ಲಿ ಬಂಧನ ಸಾಧ್ಯತೆ

ಉತ್ತರಕಾಶಿಯಲ್ಲಿ ಟೊಮೆಟೋ ಅತ್ಯಂತ ದುಬಾರಿಯಾಗಿದ್ದು, ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ಕೆಜಿಗೆ 200-250 ರೂ. ಇದೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದು, ಟೊಮೆಟೋ ಖರೀದಿಸಲು ಮುಂದಾಗುತ್ತಿಲ್ಲ ಎಂದು ತರಕಾರಿ ಮಾರಾಟಗಾರ ರಾಕೇಶ್ ತಿಳಿಸಿದ್ದಾರೆ.

ಇನ್ನು ಚೆನ್ನೈನಲ್ಲಿ ಟೊಮೆಟೋ ಬೆಲೆ ಕೆಜಿಗೆ 110-130 ರೂ. ಇದೆ. ಬೆಲೆ ಏರಿಕೆಯ ನಡುವೆ ತಮಿಳುನಾಡು ಸರ್ಕಾರ ಗ್ರಾಹಕರಿಗೆ ಸಹಾಯ ಮಾಡುವ ಸಲುವಾಗಿ ಚೆನ್ನೈನ ಪಡಿತರ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 60 ರೂ. ಸಬ್ಸಿಡಿ ದರದಲ್ಲಿ ಟೊಮೆಟೋ ಮಾರಾಟ ಮಾಡಲು ಪ್ರಾರಂಭಿಸಿದೆ.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ತಾಪಮಾನ ಏರಿಕೆಯಾಗುವುದರಿಂದ ತರಕಾರಿಗಳ ದರ ಹೆಚ್ಚಾಗುತ್ತದೆ. ಅಲ್ಲದೇ ಟೊಮೆಟೋ ಬೆಳೆಗಳನ್ನು ಕ್ರಿಮಿ ಕೀಟಗಳು ನಾಶಪಡಿಸಿದರೆ ಸಾಮಾನ್ಯವಾಗಿ ಬೆಲೆ ಏರಿಕೆಯಾಗುತ್ತದೆ ಎಂದು ವರದಿಗಳು ತಿಳಿಸಿವೆ.

suddiyaana