ಬೇಳೆಕಾಳು ಬಲು ತುಟ್ಟಿ! – ಬೆಲೆ ಏರಿಕೆಗೆ ಜನಸಾಮಾನ್ಯರು ಹೈರಾಣು

ಬೇಳೆಕಾಳು ಬಲು ತುಟ್ಟಿ! – ಬೆಲೆ ಏರಿಕೆಗೆ ಜನಸಾಮಾನ್ಯರು ಹೈರಾಣು

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳ ಖುಷಿ ನಡುವೆ ದಿನೇ ದಿನೇ ಒಂದಲ್ಲಾ ಒಂದು ಬೆಲೆ ಏರಿಕೆ ಜನರನ್ನು ಕಂಗಾಲಾಗಿಸಿದೆ. ರಾಜ್ಯದಲ್ಲಿ ಕಳೆದ ಹದಿನೈದು ದಿನಗಳಿಂದ ಬೇಳೆಕಾಳುಗಳ ಬೆಲೆ ದಿಢೀರನೆ ಏರಿಕೆಯಾಗಿದೆ. ಇದರಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ.

ಇದನ್ನೂ ಓದಿ: ಮೆಟ್ರೋ ಕಾಮಗಾರಿಗಳಿಗೆ ಸಿಕ್ತು ವೇಗ – ಮುಂದಿನ ವರ್ಷ ಡಿಸೆಂಬರ್‌ ಗೆ ಪಿಂಕ್‌ ಮಾರ್ಗ ಉದ್ಘಾಟನೆ?

ತೊಗರಿಬೇಳೆ 1ಕೆಜಿ ಬೆಲೆ ಹಿಂದೆ 110 ರೂಪಾತಿ ಇತ್ತು. ಈಗ 160 ರೂಪಾಯಿ ಆಗಿದೆ. ಇನ್ನು ಉದ್ದಿನಬೇಳೆ ಕೆಜಿ ಗೆ 110 ಇತ್ತು. ಆದರೆ ಈಗ 135 ರೂಪಾಯಿಗೆ ಏರಿಕೆಯಾಗಿದೆ. ಮಸೂರ್‌ ದಾಲ್‌  84 ರೂಪಾಯಿ ಇತ್ತು. ಈ 110 ರೂಪಾಯಿ ಬೆಲೆ ಏರಿಕೆಯಾಗಿದೆ. ಇನ್ನು ಹೆಸರುಬೇಳೆ ಬೆಲೆಯೂ 20 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಿಂದೆ 120 ಇತ್ತು. ಅಲಸಂದೆ  85 ಹಿಂದೆ ಸಿಗುತ್ತಿತ್ತು. ಆದರೆ ಈಗ 100 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅರಿಶಿನ ಬೆಲೆಯಲ್ಲೂ ಭಾರಿ ಹೆಚ್ಚಳವಾಗಿದೆ. ಹಿಂದೆ 126  ರೂಪಾಯಿ ಇತ್ತು. ಈಗ 180 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಜೀರಿಗೆ  350 ರೂಪಾಯಿ ಇತ್ತು. ಈಗ  600 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಬೇಳೆಕಾಳುಗಳ ಬೆಲೆ ಏರಿಕೆಗೆ ಕಾರಣ ದೇಶಾದ್ಯಂತ ಬೇಳೆಗಳ ಅಭಾವ ಉಂಟಾಗಿರುವುದು. ಇನ್ನು ಥಾಯ್ಲೆಂಡ್‌, ಇಂಡೋನೇಷ್ಯಾದಿಂದ ಬೇಳೆಕಾಳುಗಳ ಆಮದು ಶೇ. 30ರಷ್ಟುಕಡಿಮೆಯಾಗಿದೆ. ರಾಜ್ಯಕ್ಕೆ ಮಧ್ಯಪ್ರದೇಶದಿಂದ ಬರುತ್ತಿದ್ದ ತೊಗರಿಬೇಳೆ ಆಮದು ಕೂಡ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಬೇಳೆಕಾಳು ಬರುತ್ತಿದ್ದು ದರ ಏರಿದೆ.

ಇದರ ಜೊತೆಗೆ ಟೊಮ್ಯಾಟೊ ದರ ಗಗನಕ್ಕೇರಿದ್ದು ಜನ ಮತ್ತೊಮ್ಮೆ ಶಾಕ್ ಆಗಿದ್ದಾರೆ. ಟೊಮ್ಯಾಟೊ ದರ ನೂರು ರೂಪಾಯಿ ಸನಿಹಕ್ಕೆ ಬಂದಿದ್ದು, 15 Kg ಟೊಮ್ಯಾಟೊ ಬಾಕ್ಸ್ ಸಾವಿರ ರೂ ಇದೆ. ಇನ್ನೆರಡು ದಿನದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

suddiyaana