ಎಂಥಾ ಕಾಲ ಬಂತಪ್ಪ.. – ಹೊಸ ಮೊಬೈಲ್‌ ಖರೀದಿಸಿದ್ರೆ 2 ಕೆಜಿ ಟೊಮ್ಯಾಟೋ ಫ್ರೀ!

ಎಂಥಾ ಕಾಲ ಬಂತಪ್ಪ.. – ಹೊಸ ಮೊಬೈಲ್‌ ಖರೀದಿಸಿದ್ರೆ 2 ಕೆಜಿ ಟೊಮ್ಯಾಟೋ ಫ್ರೀ!

ಹೊಸ ಮೊಬೈಲ್‌ ಖರೀದಿಸುವ ವೇಳೆ ಅದರೊಂದಿಗೆ ಇಯರ್‌ ಫೋನ್‌, ಸೌಂಡ್‌ ಬಾಕ್ಸ್‌ ಮುಂತಾದ ವಸ್ತುಗಳನ್ನು ಉಚಿತವಾಗಿ ನೀಡುವುದು ಸಾಮಾನ್ಯ. ಇನ್ನು ಹಬ್ಬದ ವೇಳೆ ಕೂಡ ಹೊಸ ವಸ್ತುಗಳ ಖರೀದಿ ವೇಳೆ ವಿಶೇಷ ಆಫರ್‌, ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಅಂಗಡಿ ಮಾಲೀಕ ತನ್ನ ಅಂಗಡಿಯಲ್ಲಿ ಹೊಸ ಮೊಬೈಲ್‌ ಖರೀಸಿದ್ರೆ ಟೊಮ್ಯಾಟೋ ಫ್ರೀ ಅಂತಾ ಹೊಸ ಆಫರ್‌ ವೊಂದನ್ನು ನೀಡಿದ್ದಾನೆ.

ದೇಶದಾದ್ಯಂತ ಟೊಮ್ಯಾಟೋಗೆ ಬಂಗಾರದ ಬೆಲೆ ಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಬಡವರು ಟೊಮ್ಯಾಟೋವನ್ನು ಖರೀದಿಸಲಾಗದ ಮಟ್ಟಿಗೆ ಬೆಲೆ ಏರಿಕೆಯಾಗಿದೆ. ವಿಪರೀತ ಬೆಲೆ ಏರಿಕೆ ಆಗಿರುವ ಹೊತ್ತಲ್ಲೇ ಟೊಮ್ಯಾಟೋ ಕಳ್ಳರು ಕೂಡ ಕಾಣಿಸಿಕೊಂಡಿದ್ದು, ಈ ಮಧ್ಯೆ ಟೊಮ್ಯಾಟೋ ಕಳ್ಳತನ ಆಗಬಾರದು ಎಂದು ಕೆಲ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವ ಪ್ರಸಂಗವೂ ನಡೆದಿದೆ. ಇದೆಲ್ಲದರ ನಡುವೆ ಮಧ್ಯಪ್ರದೇಶದಲ್ಲಿ ಗ್ರಾಹಕರಿಗೆ ಆಫರ್‌ ಒಂದನ್ನು ನೀಡಲಾಗಿದೆ. ಮೊಬೈಲ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮ್ಯಾಟೋ ಉಚಿತವಾಗಿ ನೀಡುವ ಆಫರ್ ಕೊಡಲಾಗಿದೆ.

ಇದನ್ನೂ ಓದಿ: ಉತ್ತರಭಾರತದಲ್ಲಿ ಮಳೆಯ ರೌದ್ರ ನರ್ತನ – ಮಹಾಮಳೆಗೆ 16 ಮಂದಿ ಸಾವು

ಮಧ್ಯ ಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿ ಮೊಬೈಲ್ ವ್ಯಾಪಾರಿಯೊಬ್ಬರು ಗ್ರಾಹಕರನ್ನು ಸೆಳೆಯಲು ವಿನೂತನ ಪ್ರಯೋಗ ಮಾಡಿದ್ದಾರೆ. ಹೊಸ ಮೊಬೈಲ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮ್ಯಾಟೋ ಫ್ರೀಯಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಈ ಯೋಜನೆ ಆರಂಭಿಸಿದ ನಂತರ ಮೊಬೈಲ್ ಉದ್ಯಮಿಯೂ ಹೋರ್ಡಿಂಗ್-ಬ್ಯಾನರ್ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಈ ವಿಶೇಷ ಆಫರ್‌ ಘೋಷಣೆ ಬಳಿಕ ಮೊಬೈಲ್ ಮಾರಾಟವೂ ಹೆಚ್ಚಾಗಿದೆಯಂತೆ. ಯಾವುದೇ ರೀತಿಯ ಸ್ಮಾರ್ಟ್‌ಫೋನ್ ಖರೀದಿಸಿದರೆ 2 ಕೆಜಿ ಟೊಮ್ಯಾಟೋ ಉಚಿತ ಯೋಜನೆಯು ಗ್ರಾಹಕರನ್ನು ಈ ಅಂಗಡಿಯತ್ತ ಸೆಳೆಯುತ್ತಿದೆ.

ದೇಶದ ಹಲವು ರಾಜ್ಯಗಳಲ್ಲಿ ಟೊಮ್ಯಾಟೋ ಬೆಲೆ 160-180, 200ರ ತನಕ ತಲುಪಿದ್ದು, ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿರುವ ಹೊತ್ತಿನಲ್ಲೇ ಈತರಹದ ಆಫರ್ ನೀಡಿರೋದು ಜನರನ್ನು ಆಕರ್ಷಿಸಿದೆ.

suddiyaana