ಶಿವಣ್ಣನ ಮನೆಗೆ ಆಗಮಿಸಿದ ಟಾಲಿವುಡ್ ಸ್ಟಾರ್ –ತೆಲುಗು ನಟ ನಾನಿಗೆ ಶಿವಣ್ಣನ ಅಪ್ಪುಗೆ

ಶಿವಣ್ಣನ ಮನೆಗೆ ಆಗಮಿಸಿದ ಟಾಲಿವುಡ್ ಸ್ಟಾರ್ –ತೆಲುಗು ನಟ ನಾನಿಗೆ ಶಿವಣ್ಣನ ಅಪ್ಪುಗೆ

ಟಾಲಿವುಡ್ ಸ್ಟಾರ್ ನಾನಿ ಅಭಿನಯದ ಚಿತ್ರ ಹಾಯ್ ನಾನ್ನ ಡಿಸೆಂಬರ್ 7ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಪ್ರಚಾರದ ಕಾರ್ಯದಲ್ಲಿ ನಾನಿ ಬ್ಯುಸಿಯಾಗಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ‘ಹಾಯ್ ನಾನ್ನ’ ಸಿನಿಮಾದ ಸುದ್ದಿಗೋಷ್ಠಿ ಇದೆ. ಇದಕ್ಕಾಗಿ ಬೆಂಗಳೂರಿಗೆ ಆಗಮಿಸಿದ ನಾನಿ ನಟ ಶಿವರಾಜ್​ಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಶಿವಣ್ಣನ ಜೊತೆ ಕಾಲ ಕಳೆದಿದ್ದಾರೆ.

ಇದನ್ನೂ ಓದಿ: Ghost ಸಿನಿಮಾದಲ್ಲಿ ಇಷ್ಟವಾದ್ರು ಶಿವಣ್ಣ – ಶಿವರಾಜ್ ಕುಮಾರ್ ಗ್ಯಾಂಗ್​ಸ್ಟರ್ ಲುಕ್ ಗೆ ಫ್ಯಾನ್ಸ್ ಫಿದಾ

ಬೆಂಗಳೂರಿಗೆ ಆಗಮಿಸುವ ಪರಭಾಷೆಯ ಅನೇಕ ಸ್ಟಾರ್​ಗಳು ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡುತ್ತಾರೆ. ಟಾಲಿವುಡ್ ಸ್ಟಾರ್ ಸಿಂಪಲ್ ನಾನಿ ಅವರು ಶಿವಣ್ಣನ ನಿವಾಸಕ್ಕೆ ಮಂಗಳವಾರ ಆಗಮಿಸಿದರು. ನಾನಿ ಹಾಗೂ ಮೃಣಾಲ್ ಠಾಕೂರ್ ಅವರು ‘ಹಾಯ್ ನಾನ್ನ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 7ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಾನಿ ಅವರು ಭಾಗಿ ಆಗಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ‘ಹಾಯ್ ನಾನ್ನ’ ಸಿನಿಮಾದ ಸುದ್ದಿಗೋಷ್ಠಿ ಇದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ನಾನಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಮಂಗಳವಾರ ಬೆಳಗ್ಗೆ ಶಿವಣ್ಣನ ಮನೆಗೆ ಆಗಮಿಸಿದ ನಾನಿ ಕೆಲಹೊತ್ತು ಹರಟೆ ಹೊಡೆಯುತ್ತಾ ಕಾಲ ಕಳೆದರು.

ಶಿವರಾಜ್​ಕುಮಾರ್ ಹಾಗೂ ನಾನಿ ಮಧ್ಯೆ ಒಳ್ಳೆಯ ಗೆಳೆತನ ಇದೆ. ಶಿವಣ್ಣ ಅವರು ಪ್ರೀತಿಯಿಂದ ಅಪ್ಪುಗೆ ಕೊಟ್ಟು ನಾನಿಯನ್ನು ಸ್ವಾಗತಿಸಿದ್ದಾರೆ. ಇಬ್ಬರೂ ಉಭಯಕುಶಲೋಪರಿ ಮಾತನಾಡಿದ್ದಾರೆ. ‘ಹಾಯ್​ ನಾನ್ನ’ ಸಿನಿಮಾ ಕುರಿತು ನಾನಿ ಹಾಗೂ ಶಿವಣ್ಣ ಮಾತನಾಡಿದ್ದಾರೆ. ಶಿವರಾಜ್​ಕುಮಾರ್ ಅವರು ನಾನಿಯ ಸಿನಿಮಾಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. ಗೀತಾ ಶಿವರಾಜ್​ಕುಮಾರ್, ಶಿವರಾಜ್​ಕುಮಾರ್, ಸಚಿವ ಮಧು ಬಂಗಾರಪ್ಪ ಹಾಗೂ ನಾನಿ ಅವರು ಒಟ್ಟಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

Sulekha