ಟಾಲಿವುಡ್ ಸ್ಟಾರ್ ಪ್ರಭಾಸ್ ಗೆ ಯುರೋಪ್‌ನಲ್ಲಿ ಟ್ರೀಟ್‌ಮೆಂಟ್ – ಮಾರ್ಚ್ ತನಕ ಸಿನಿಮಾ ಕೆಲಸ ಬಂದ್

ಟಾಲಿವುಡ್ ಸ್ಟಾರ್ ಪ್ರಭಾಸ್ ಗೆ ಯುರೋಪ್‌ನಲ್ಲಿ ಟ್ರೀಟ್‌ಮೆಂಟ್ – ಮಾರ್ಚ್ ತನಕ ಸಿನಿಮಾ ಕೆಲಸ ಬಂದ್

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಮಾರ್ಚ್ ತನಕ ಯಾವ ಸಿನಿಮಾ ಶೂಟಿಂಗ್‌ನಲ್ಲೂ ಭಾಗಿಯಾಗುವುದಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ. ಪ್ರಭಾಸ್ ಅವರು ಕೆಲ ಕಾಲ ವಿಶ್ರಾಂತಿಯಲ್ಲಿರುತ್ತಾರೆ ಎನ್ನಲಾಗಿದೆ. ಪ್ರಭಾಸ್ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ. ಹೀಗಾಗಿ ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಪ್ರಭಾಸ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಸುನಾಮಿ – ಆರೇ ದಿನಕ್ಕೆ 500 ಕೋಟಿ ರೂ. ಕಲೆಕ್ಷನ್!

ಸಲಾರ್ ಚಿತ್ರದ ಗೆಲುವು ಪ್ರಭಾಸ್ ಅವರಿಗೆ ಹೊಸ ಚೈತನ್ಯ ನೀಡಿತ್ತು. ಹಾಗಿದ್ದರೂ ಕೂಡಾ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸದ್ಯಕ್ಕೆ ಯಾವ ಸಿನಿಮಾ ಕೆಲಸಗಳಲ್ಲೂ ಇರುವುದಿಲ್ಲ. ಈಗಾಗಲೇ ಪ್ರಭಾಸ್ ಕೈಯಲ್ಲಿ ಅನೇಕ ಪ್ರಾಜೆಕ್ಟ್‌ಗಳಿವೆ. ಬಹುನಿರೀಕ್ಷಿತ ರಾಜಾ ಸಾಬ್, ಕಲ್ಕಿ 2898 ಎಡಿ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರ ಸೆಟ್ಟೇರಲಿದೆ. ಆದರೆ, ಮುಂದಿನ ಸಿನಿಮಾಗಳ ಕೆಲಸಗಳನ್ನು ಅವರು ಅವಸರದಲ್ಲಿ ಮುಗಿಸುತ್ತಿಲ್ಲ. ಬದಲಿಗೆ ಕೆಲವು ವಾರಗಳ ಕಾಲ ಬ್ರೇಕ್ ತೆಗೆದುಕೊಳ್ಳಲು ಪ್ರಭಾಸ್ ನಿರ್ಧರಿಸಿದ್ದಾರೆ. ಮಾರ್ಚ್ ತನಕ ಪ್ರಭಾಸ್ ವಿಶ್ರಾಂತಿ ಪಡೆಯಲಿದ್ದಾರೆ.

ಪ್ರಭಾಸ್ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ. ಈಗಾಗಲೇ ಸರ್ಜರಿ ಮಾಡಿದ್ದರೂ ಕೂಡ ಅದರಿಂದ ಅವರು ಸಂಪೂರ್ಣವಾಗಿ ಚೇರಿಸಿಕೊಂಡಿಲ್ಲ. ಹಾಗಾಗಿ ಇನ್ನೊಂದು ಸರ್ಜರಿಗಾಗಿ ಅವರು ಯೂರೋಪ್‌ಗೆ ತೆರಳಲಿದ್ದಾರಂತೆ. ಪ್ರಭಾಸ್ ಅವರಿಗೆ 44 ವರ್ಷ ವಯಸ್ಸು. ಹೀಗಾಗಿ ಆರೋಗ್ಯದ ಕಡೆ ಗಮನಹರಿಸಲು ಪ್ರಭಾಸ್ ನಿರ್ಧರಿಸಿದ್ದಾರೆ. ಹೀಗಾಗಿ ಕೆಲ ಸಮಯ ಸಿನಿರಂಗದಿಂದ ದೂರವಿದ್ದು, ಆರೋಗ್ಯ ಸಮಸ್ಯೆ ಸರಿಯಾದ ಮೇಲೆ ಸಿನಿಮಾಗಳ ಕೆಲಸ ಮುಂದುವರೆಸಲಿದ್ದಾರೆ.

Sulekha